ಒಮ್ಮೆ ಹೀಗೆ ಸರಳವಾಗಿ ಖಡಕ್ ಸಜ್ಜೆ ರೊಟ್ಟಿ ಮಾಡಿ| Khadak Sajje Rotti| Khadak Bajra Roti| Pearl Millet Roti
Автор: RaJsBasu
Загружено: 2026-01-19
Просмотров: 2172
Описание:
ನಮಸ್ತೆ ನೆಚ್ಚಿನ ವೀಕ್ಷಕರೆ,
ಈ ರೆಸಿಪಿ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸಿ. ನನಗೆ ರೊಟ್ಟಿಗಳ ಬಗೆಗೆ ತಿಳಿದಿರುವ ಕೆಲವು ಅಂಶಗಳನ್ನು ಈ ಕೆಳಗೆ ತಿಳಿಸಿದ್ದೇನೆ. ಇದು ನನ್ನ ಮಟ್ಟಿಗೆ ತಿಳಿದಿರುವ ವಿಷಯಗಳಾಗಿವೆ, ಏನಾದರು ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ .
೧ ಸಜ್ಜೆ ಸಿರಿಧಾನ್ಯಗಳಲ್ಲಿ ಒಂದಾಗಿದ್ದು ದೇಹಕ್ಕೆ ತುಂಬಾ ಒಳ್ಳೆಯ ಧಾನ್ಯವಾಗಿದೆ.
೨ ಸಜ್ಜೆಯನ್ನು ಗಿರಣಿಗೆ ಕೊಡುವಾಗ ಸಜ್ಜೆಯ ಜೊತೆ ಅಕ್ಕಿ, ಜೋಳ, ಕೊತ್ತಂಬರಿ ಕಾಳು, ಮೆಂತೆ, ಅರಿಶಿನ ಕೊಂಬು, ಉದ್ದಿನಬೇಳೆ ಹೀಗೆ ಅವರವರ ರುಚಿ ಮತ್ತು ಪದ್ದತಿಗೆ ಅನುಗುಣವಾಗಿ ಮಿಶ್ರಣ ಮಾಡಿ ಸಜ್ಜೆಯ ಹಿಟ್ಟು ಮಾಡಿಸುತ್ತಾರೆ.
೩ ಬರೀ ಸಜ್ಜೆಯಲ್ಲೂ ರೊಟ್ಟಿಗಳನ್ನು ಮಾಡಬಹುದು ಆದರೆ ಅದರ ರುಚಿ ಮತ್ತು ಬಣ್ಣ ಅಷ್ಟಾಗಿ ಹಿಡಿಸುವುದಿಲ್ಲ ಮತ್ತು ಖಡಕ್ ರೊಟ್ಟಿ ಮಾಡುವುದು ತುಂಬಾ ಕಷ್ಟ ಅಲ್ಲದೆ ರೊಟ್ಟಿಗಳ ಗಾತ್ರವು ಬೇಯಿಸುವಾಗ ಕ್ರಮೇಣ ಕಡಿಮೆಯಾಗುತ್ತವೆ.
೪ ಸಜ್ಜೆ ಅಥವಾ ಜೋಳದ ರೊಟ್ಟಿಗಳನ್ನು ಮಾಡುವಾಗ ಹಿಟ್ಟು ತುಂಬಾ ತಾಜಾ ಇರಬೇಕು ಅಂದರೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರದಲ್ಲಿ ಗಿರಣಿ ಮಾಡಿಸಿದ ಹಿಟ್ಟಾದರೆ ರೊಟ್ಟಿಗಳು ತುಂಬಾ ಸರಾಗವಾಗಿ ಮತ್ತು ರುಚಿಯಾಗಿ ಬರುತ್ತವೆ. ಅಲ್ಲದೆ ರೊಟ್ಟಿ ಮಾಡುವ ಮುನ್ನ ಹಿಟ್ಟನ್ನು ಸಣ್ಣ ಕಣ್ಣಿನ ಜರಡಿಯಲ್ಲಿ ಜರಡಿ ಹಿಡಿಯಿರಿ.
೫ ಸಜ್ಜೆಯ ಹಿಟ್ಟು ಹಳತಾದಂತೆ ರೊಟ್ಟಿಗಳ ರುಚಿಯು ಕಹಿಯಾಗುತ್ತದೆ.
೬ ರೊಟ್ಟಿಗಳನ್ನು ಬೇಯಿಸಲು ಕನಿಷ್ಠ ಮೂರು ಮಿಲಿಮೀಟರ್ ದಪ್ಪನೆಯ ಕಬ್ಬಿಣದ ಹಂಚನ್ನು ಬಳಸಿ.
೭ ಎರಕ ಮತ್ತು ನಾನ್ ಸ್ಟಿಕ್ ಹಂಚುಗಳು ರೊಟ್ಟಿಗೆ ಅಷ್ಟು ಸೂಕ್ತವಲ್ಲ.
೮ ನೆನಪಿಡಿ ಸಜ್ಜೆ ಅಥವಾ ಜೋಳದ ರೊಟ್ಟಿ ಮಾಡಲು ಹಿಟ್ಟು ತುಂಬಾ ನುಣ್ಣಗೆ ಇರಬೇಕು. ಒಂದು ವೇಳೆ ಅಷ್ಟು ನುಣ್ಣಗೆ ಇರದ ಹಿಟ್ಟನ್ನು ಬಳಸಿದರೆ ರೊಟ್ಟಿ ಹರಿಯುತ್ತವೆ ಮತ್ತು ಬೇಯಿಸುವಾಗ ನೀರು ಹಚ್ಚಿದ ಕಡೆ ಬಿರುಕು ಮೂಡುತ್ತವೆ. ಹಾಗು ಹಂಚು ಸರಿಯಾಗಿ ಮತ್ತು ಸಮನಾಗಿ ಕಾಯದೆ ಇದ್ದರೂ ಕೂಡ ರೊಟ್ಟಿಗಳಲ್ಲಿ ಬಿರುಕು ಮೂಡುತ್ತದೆ.
೯ ಖಡಕ್ ರೊಟ್ಟಿ ಮಾಡಲು ಹೆಚ್ಚಿನ ಉರಿಯಲ್ಲಿ ಬೇಯಿಸದೆ ಮಧ್ಯಮ ಮತ್ತು ಸಣ್ಣ ಉರಿಯಲ್ಲಿ ಬೇಯಿಸಿ. ಮೆತ್ತನೆಯ ರೊಟ್ಟಿ ಬೇಕಿದ್ದಲ್ಲಿ ಹೆಚ್ಚಿನ ಉರಿಯಲ್ಲಿ ಬೇಯಿಸಿ.
೧ ೦ ಮೇಲ್ಕಾಣಿಸಿದ ಅಂಶಗಳು ನನ್ನ ಅನುಭವಕ್ಕೆ ಬಂದವಾಗಿದ್ದು ಇತರರ ಅನುಭವಗಳಿಗೆ ಹೊಂದಿಕೆಯಾಗದೆ ಇದ್ದಲ್ಲಿ ಅಥವಾ ಮಾಹಿತಿಯು ಸ್ವಲ್ಪ ಏರುಪೇರಾಗಿದ್ದಲ್ಲಿ ದಯವಿಟ್ಟು ತಿಳಿಸಿ.
ಧನ್ಯವಾದಗಳು
ರಾಜ್
#foryou #pearlmilletrecipe #sajjerotti #bhakrirecipe #bajraroti
Повторяем попытку...
Доступные форматы для скачивания:
Скачать видео
-
Информация по загрузке: