ಆಹಾ!! ಸ್ವರ್ಗಕ್ಕೆ ಮೂರೇ ಗೇಣು ಅಂತ ಅನ್ಸುತ್ತೆ ಈ ಮುಳ್ಗಾಯ್ ಬಜ್ಜಿ ಮತ್ತು ಮುದ್ದೆ ಊಟ ಮಾಡಿದ್ರೆ | Brinjal Curry
Автор: RaJsBasu
Загружено: 2025-02-23
Просмотров: 579579
Описание:
ಪಾಕ ವಿಧಾನಕ್ಕೆ ಸಂಬಂಧಿಸಿದಂತೆ ವಿವರಣೆ.
ಬದನೆಕಾಯಿ ಅಥವಾ ಮುಳ್ಗಾಯಿ ಬಳಸಿ ಮಾಡುವ ಈ ಸಾರನ್ನು ನಮ್ಮ ಚಿತ್ರದುರ್ಗ ಮತ್ತು ದಾವಣಗೆರೆ ಭಾಗದಲ್ಲಿ ಬಜ್ಜಿ ಎಂದು ಕರೆಯುತ್ತಾರೆ. ಇದು ಎಣ್ಣೆಯಲ್ಲಿ ಹಾಕಿ ಕರಿಯುವ ಬಜ್ಜಿಯಲ್ಲ. ಇದೊಂದು ದೇಸಿ ಪಾಕ ವಿಧಾನವಾಗಿದೆ ಮತ್ತು ಅತ್ಯದ್ಭುತ ರುಚಿ ಹೊಂದಿರುವುದರ ಜೊತೆಗೆ ತುಂಬಾ ಸರಳವಾಗಿದೆ.
ತಮ್ಮಲ್ಲಿ ನನ್ನ ಸವಿನಯ ಪ್ರಾರ್ಥನೆ :- ಭಾರತ ಎಂದರೆ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ದೇಶ. ಈ ವೈವಿಧ್ಯತೆ ದೇಶ ಮಾತ್ರವಲ್ಲದೆ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳಿಗೂ ಅನ್ವಯವಾದಂತಿದೆ. ಏಕೆಂದರೆ ಇಲ್ಲೂ ಸಹ ಹಲವಾರು ವೈವಿಧ್ಯತೆಗಳನ್ನು ಕಾಣಬಹುದು. ಅದು ಆಹಾರ ಪದ್ಧತಿಯಾಗಲಿ, ಆಚರಣೆಗಳಾಗಲಿ, ಭಾಷೆಯ ಸೊಗಡಾಗಲಿ ಎಲ್ಲದರಲ್ಲೂ ಭಿನ್ನವಾದ ಹಾಗೂ ಸಮೃದ್ಧವಾದ ಹೊಸತನ ಕಾಣಬಹುದು. ಹಾಗಾಗಿ, ಕೆಲವೊಮ್ಮೆ ಕೆಲವು ಪದ್ಧತಿಗಳು ನಮಗೆ ಹಿಡಿಸದೇ ಹೋಗಬಹುದು. ಆದರೆ, ನೆನಪಿರಲಿ, ಅದು ಒಂದು ಅಥವಾ ಒಬ್ಬರ ಜೀವನದ ಪದ್ದತಿಯು ಆಗಿದೆ. ನಾಗರಿಕ ಸಮಾಜದ ಪ್ರಜೆಗಳಾದ ನಾವು ಎಲ್ಲವನ್ನು ಎಲ್ಲದನ್ನು ಗೌರವಿಸಬೇಕು. ಮೂದಲಿಸುವುದು, ಮೂಗು ಮುರಿಯುವುದು ಅಷ್ಟು ಸಮಂಜಸವಾಗಿ ತೋರುವುದಿಲ್ಲ.
ಅಲ್ಲದೆ, ನಾನು ಈ ವೀಡಿಯೋವನ್ನು ನಮ್ಮ ಜಿಲ್ಲೆಯ ಗ್ರಾಮೀಣ ಭಾಷೆಯ ಧಾಟಿಯಲ್ಲಿ ನಿರೂಪಿಸಿದ್ದೇನೆ. ಹಾಗಾಗಿ ಇಲ್ಲಿ ಪಾಕ ವಿಧಾನಕ್ಕಿಂತ ಭಾಷಾ ಸೊಗಡನ್ನು ಹಾಗೂ ಕನ್ನಡ ಭಾಷೆಯ ಅಸ್ತಿತ್ವವನ್ನು ಬಲಗೊಳಿಸುವ ಕರ್ತವ್ಯ ಪ್ರತಿಯೊಬ್ಬರದಾಗಿರುವುದರಿಂದ ವೀಡಿಯೋ ತುಸು ದೊಡ್ಡದಾದರೂ ಭಾಷೆಯ ಸ್ವರೂಪವನ್ನು ಉಪಮೇಯ ಉಪಮಾನಗಳನ್ನು ಬಳಸಿ ತಿಳಿಸಿದ್ದೇನೆ. ಏನಾದರೂ, ತಪ್ಪು ಒಪ್ಪುಗಳಿದ್ದರೆ ಕ್ಷಮಿಸಿ.
🖋ರಾಜ್...
#foryou #foryoupage #brinjalcurry #bajjirecipe
Повторяем попытку...
Доступные форматы для скачивания:
Скачать видео
-
Информация по загрузке: