ಮಠಾಧೀಶರ,ರೈತರ ಮೇಲೆ ಹಾಕಿರುವFIRಸರಿಯಲ್ಲ ಗೃಹಸಚಿವರು ಇಂತಹ ವಿಚಾರದಲ್ಲಿFIRರದ್ದುಪಡಿಸಿ ರೈತರು ಮಠಾಧೀಶರ ಪರನಿಲ್ಲಬೇಕು
Автор: ರಣಧೀರ ಸುದ್ಧಿ ವಾಹಿನಿ
Загружено: 2025-06-11
Просмотров: 156
Описание:
ರಣಧೀರ ಸುದ್ಧಿ :
ಕೊರಟಗೆರೆ ನ್ಯೂಸ್..
ಮಠಾಧೀಶರು,ರೈತರ ಮೇಲೆ ಹಾಕಿರುವ ಪ್ರಕರಣ ಸರಿಯಲ್ಲ
ಗೃಹ ಸಚಿವರು ತುಮಕೂರು ಉಸ್ತುವಾರಿ ಸಚಿವರಾಗಿ ಇಂತಹ ವಿಚಾರದಲ್ಲಿ ಎಫ್ಐಆರ್ ರದ್ದುಪಡಿಸಿ ರೈತರು ಮಠಾಧೀಶರ ಬೆಂಬಲವಾಗಿ ನಿಲ್ಲಬೇಕು
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳ ಕುಂಠಿತ
ಸಿದ್ದರಬೆಟ್ಟದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಂಭಾಪುರಿ ಶ್ರೀಗಳು ತೀವ್ರ ಅಕ್ಷೇಪಾ ಹೊರ ಹಾಕಿದರು..
ಕೊರಟಗೆರೆ ತಾಲೂಕಿನ ಬೂದಗವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸತ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖ ಮಠದಲ್ಲಿ ಆಯೋಜಿಸಲಾಗಿದ್ದ 19ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ವಾರ್ಷಿಕೋತ್ಸವದ ಸಮಾರಂಭದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ಸರಳ ವಿವಾಹದಲ್ಲಿ 17 ನಮ್ಮ ಜೋಡಿಗಳ ವಿವಾಹವನ್ನು ಶುಭ ಲಗ್ನದಲ್ಲಿ ಅರಸಿ ಆಶೀರ್ವದಿಸಿ ಮಾತನಾಡಿದ ಬಾಳೆಹೊನ್ನೂರು ರಂಭಾಪುರಿ ಶ್ರೀ ಶ್ರೀ 1008 ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು..
ಅವಶ್ಯಕತೆ ಇರುವ ಯೋಜನೆಗಳನ್ನು ಗ್ಯಾರಂಟಿಯಾಗಿ ನೀಡಿ ಅವಶ್ಯಕತೆ ಇಲ್ಲದ ಯೋಜನೆಗಳನ್ನು ನಿಲ್ಲಿಸಿ ಬಡ ಜನರಿಗೆ ಅನುಕೂಲವಾಗುವಂತೆ ರಾಜ್ಯದ ಪ್ರತಿ ತಾಲೂಕುಗಳಲ್ಲಿ ಕೆಲಸಗಳನ್ನು ಸೃಷ್ಟಿಸಿ ಜನರಿಗೆ ಕೆಲಸ ಕೊಡಿ ಎಂದು ತಿಳಿಸಿದರು..
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲಿಯುಗ ಮಾಯೆಯಿಂದ ಧರ್ಮ ಬಿಟ್ಟು ಅಧರ್ಮದ ಕಡೆಗೆ ಜನರು ವಾಲಿದ್ದಾರೆ. ಮನುಷ್ಯ ಅಧಿಕಾರ, ಹಣ, ಆಸ್ತಿ ಎಂದು ಧರ್ಮವನ್ನೇ ಮರೆತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಆಧುನಿಕ ಜನರಿಗೆ ದಿನನಿತ್ಯ ಧರ್ಮದ ಬಗ್ಗೆ ಬೋಧನೆ ಮಾಡಿದರೂ ವ್ಯರ್ಥವೆನಿಸುತ್ತದೆ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿ : ಭಾರತ ಸರ್ಕಾರ ಸುಭದ್ರ ಭಾರತ ಅಭಿವೃದ್ಧಿಯ ಕೆಲಸಗಳನ್ನ ಮಾಡುತ್ತಿದೆ ನೀರಾವರಿ ರೈಲ್ವೆ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಮಠಮಾನ್ಯಗಳಲ್ಲಿ ಜಾತಿ ಭೇದವಿರುವುದಿಲ್ಲ ಇಂತಹ ಸ್ಥಳಗಳಲ್ಲಿ ಸಂತೋಷದಿಂದ ಕಾಲ ಕಳೆಯಬಹುದು ಎಂದು ನವ ಜೋಡಿಗಳಿಗೆ ಶುಭ ಹಾರೈಸಿದರು...
ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಸಿದ್ದರಬೆಟ್ಟ ಸಸ್ಯ ಸಂಜೀವಿನಿ ಕ್ಷೇತ್ರ ವೈಜ್ಞಾನಿಕ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿದಿದೆ. ಭಾರತದ ಇತಿಹಾಸ ಪುಟದಲ್ಲಿ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ೮೫೦ವರ್ಷ ಹಿಂದೆ ಜಗಜ್ಯೋತಿ ಬಸವೇಶ್ವರರು ಇಡೀ ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ್ದಾರೆ ಇಂದು ಈ ಉಚಿತ ಸಾಮೂಹಿಕ ವಿವಾಹದಲ್ಲಿ ಸರಳ ವಿವಾಹ ಮಾಡಿಕೊಂಡ ಎಲ್ಲಾ ನಾವು ಜೋಡಿಗಳಿಗೆ ಶುಭವಾಗಲಿ ಎಂದು ಹೇಳಿದರು.
ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ
#karnataka #latestnews #entertainment #karnatakalatestnews #koratagere #nelamangala #news #bengalorenews #breakingnews #koratagere
Повторяем попытку...

Доступные форматы для скачивания:
Скачать видео
-
Информация по загрузке: