ಇಷ್ಟು ದಿನ ಈ ವೈಕುಂಠ | In association with SKANRAY Technologies|
Автор: Shanbhog Sisters
Загружено: 2025-09-06
Просмотров: 5539
Описание:
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||ಪ||
ಎಂಟು ಏಳನು ಕಳೆದುದರಿಂದೇ
ಬಂಟರೈವರ ತುಳಿದುದರಿಂದೇ
ಕಂಟಕನೊಬ್ಬನ ತರಿದುದರಿಂದೇ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||1||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||2||
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||3||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||4||
Повторяем попытку...
Доступные форматы для скачивания:
Скачать видео
-
Информация по загрузке: