ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್ ಕ್ಷಮೆ ಯಾಚನೆಗೆ ಸಚಿವ ಕಿರಣ್ ರಿಜಿಜು ಆಗ್ರಹ
Автор: DD Chandana News
Загружено: 2025-12-15
Просмотров: 16
Описание:
ಕಾಂಗ್ರೆಸ್ ಪಕ್ಷ ನಿನ್ನೆ ಹಮ್ಮಿಕೊಂಡಿದ್ದ Rally ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಾಂವಿಧಾನಿಕ ಪದವನ್ನು ಬಳಕೆ ಮಾಡಿರುವುದು ಖಂಡನೀಯ. ಈ ಬಗ್ಗೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಇಂದು ಆಗ್ರಹಿಸಿದ್ದಾರೆ.
ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ, ಜನರಿಂದ ಚುನಾಯಿತರಾಗಿ ಸಂಸದರಾಗಿರುವ ನಾವೆಲ್ಲ ರಾಜಕೀಯ ವಿರೋಧಿಗಳಷ್ಟೇ ಹೊರತು, ಪರಸ್ಪರ ಶತ್ರುಗಳಲ್ಲ. ಈ ಹಿಂದೆ 2014ರಲ್ಲಿ ಬಿಜೆಪಿ ಸಂಸದರೊಬ್ಬರು ಪ್ರತಿಪಕ್ಷದ ನಾಯಕರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸುವಂತೆ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಅವರು ಕ್ಷಮೆ ಕೋರಿದ್ದರು ಎಂದರು.
ಈ ವೇಳೆ ಬಿಜೆಪಿಯ ಎಲ್ಲ ಸಂಸದರು ದೇಶದ ಪ್ರಧಾನಿ ವಿರುದ್ಧ ಹಿಂಸಾತ್ಮಕ ಪದಗಳನ್ನು ಬಳಕೆ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸದನವನ್ನು 12 ಗಂಟೆಗೆ ಮುಂದೂಡಲಾಯಿತು.
ಬಳಿಕ ಸದನ ಪುನರಾರಂಭಗೊಂಡಾಗ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್, ಪಂಕಜ್ ಚೌಧರಿ, ಶೋಭಾ ಕರಂದ್ಲಾಜೆ, ಅರ್ಜುನ್‌ರಾಮ್ ಮೇಘ್ವಾಲ್, ಸುರೇಶ್ ಗೋಪಿ ಮುಂತಾದವರು ತಮ್ಮ ಸಚಿವಾಲಯಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮಂಡನೆ ಮಾಡಿದರು.
ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಶೂನ್ಯ ವೇಳೆಯ ನಂತರ ಪ್ರತಿಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಾಗಿ ಭರವನೆ ನೀಡಿದರೂ ಸಹ, ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಸದನವನ್ನು ಪುನಃ 2 ಗಂಟೆಗೆ ಮುಂದೂಡಲಾಯಿತು.
ಮಧ್ಯಾಹ್ನ ಕಲಾಪ ಆರಂಭಗೊಂಡಾಗ, ಸಚಿವ ಅರ್ಜುನ್ ರಾಮ್ ಮೇಘ್ವಾಲ್ 'ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ-2025'ನ್ನು ಮಂಡಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ವಿಕಸಿತ ಭಾರತ ಶಿಕ್ಷಣ ಸಂಸ್ಥೆಗಳ ಮಸೂದೆ-2025'ನ್ನು ಮಂಡಿಸಿದರು. ಹೆಚ್ಚಿನ ಪರಿಶೀಲನೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲಾಯಿತು.
ಅಣು ಇಂಧನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಪರಿವರ್ತನೆ ಹೊಂದುತ್ತಿರುವ ಭಾರತಕ್ಕಾಗಿ ಅಣು ಇಂಧನದ ಸುಸ್ಥಿರ ಬಳಕೆ ಮತ್ತು ಪ್ರಗತಿ ಮಸೂದೆ-2025ನ್ನು ಮಂಡಿಸಿದರು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: