3 ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ | ಅಂತಿಮ ಚರಣದಲ್ಲಿ ಒಮನ್ ಗೆ ಆಗಮನ
Автор: DD Chandana News
Загружено: 2025-12-17
Просмотров: 37
Описание:
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್ ಮತ್ತು ಇಥಿಯೋಪಿಯಾ ಪ್ರವಾಸದ ಬಳಿಕ ಅಂತಿಮ ಚರಣದಲ್ಲಿ ಒಮನ್ ನ ಮಸ್ಕತ್ ಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಮನ್ ಉಪ ಪ್ರಧಾನಿ ಸೈಯಿದ್ ಶಿಹಾಬ್ ಬಿನ್ ತಾರೀಕ್ ಅಲ್ ಸೈದ್ ಬರಮಾಡಿಕೊಂಡರು.
ಈ ವೇಳೆ ಸಾಂಪ್ರದಾಯಿಕ ಗೌರವ ನೀಡಲಾಯಿತು.
ಮಸ್ಕತ್ ನಲ್ಲಿ ಭಾರತೀಯ ಸಮುದಾಯ ವತಿಯಿಂದಲೂ ಪ್ರಧಾನಿ ಅವರನ್ನು ಸ್ವಾಗತಿಸಲಾಯಿತು.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಉಪ ಪ್ರಧಾನಿಯೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಮುಖರು ಪಾಲ್ಗೊಂಡಿದ್ದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್ ನ ಹೋಟೆಲ್ ಗೆ ಆಗಮಿಸಿದ ವೇಳೆ ಭಾರತೀಯ ಸಮುದಾಯದ ಮಕ್ಕಳು ವಿಶೇಷವಾಗಿ ರಾಜಸ್ಥಾನಿ, ಗುಜರಾತಿ, ಕರ್ನಾಟಕದ ಜಾನಪದ ನೃತ್ಯ ಪ್ರದರ್ಶಿಸಿದರು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: