ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರಿಕೆ - ಹಲವು ಸಚಿವಾಲಯಗಳಿಗ ಕಾಗದ ಪತ್ರಗಳ ಮಂಡನೆ
Автор: DD Chandana News
Загружено: 2025-12-10
Просмотров: 8
Описание:
ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪ ಇಂದೂ ಸಹ ಮುಂದುವರಿಯಲಿದೆ.
ಲೋಕಸಭೆಯಲ್ಲಿ ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲಾಗುವುದು. ಬಳಿಕ ಹಲವು ಸಚಿವರು ತಮ್ಮ ಸಚಿವಾಲಯಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮಂಡಿಸುವರು.
ಆನಂತರ ಸಾರ್ವಜನಿಕ ಉದ್ದಿಮೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸ್ಥಾಯಿ ಸಮಿತಿಗಳು ತನ್ನ ವರದಿಗಳನ್ನು ಮಂಡಿಸಲಿವೆ.
ಬಳಿಕ ಪೂರಕ ಅಂದಾಜುಗಳ ಪಟ್ಟಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿ ಅನುಮೋದನೆ ಕೋರುವರು. ಆನಂತರ ಶಾಸನ ರಚನಾ ಕಲಾಪ ಕೈಗೆತ್ತಿಕೊಳ್ಳಲಾಗುವುದು.
**
ರಾಜ್ಯಸಭೆಯಲ್ಲಿ ಮೊದಲಿಗೆ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಮಂಡಿಸುವರು. ಆನಂತರ ಸ್ಥಾಯಿ ಸಮಿತಿಗಳು ವರದಿಗಳನ್ನು ಮಂಡಿಸಲಿವೆ.
ಬಳಿಕ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಪ್ರಸಾದ್, ಪೂರಕ ಅಂದಾಜುಗಳ ಪಟ್ಟಿಯನ್ನು ಮಂಡಿಸುವರು.
ಆನಂತರ ವಂದೇ ಮಾತರಂ ರಾಷ್ಟ್ರೀಯ ಗೀತೆ 150 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಚರ್ಚೆ ಮುಂದುವರಿಯಲಿದ್ದು, ಸಭಾ ನಾಯಕ ಹಾಗೂ ಸಚಿವ ಜೆ.ಪಿ. ನಡ್ಡಾ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ಬಳಿಕ ರಾಜ್ಯಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗುವುದು.
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: