'ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಶ್ರೀಗಳಿಂದ ಜಲಪೂರ್ ಪ್ರಯುಕ್ತ ಗಂಗಾ ಪೂಜಾ
Автор: NSRSMUTT JAYANAGAR
Загружено: 2025-10-21
Просмотров: 391
Описание: 'ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಶ್ರೀಗಳಿಂದ ಜಲಪೂರ್ಣ ತ್ರಯೋದಶಿಯ ಪ್ರಯುಕ್ತ ಗಂಗಾ ಪೂಜಾ"ಬೆಂಗಳೂರು : ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು,ಸಂಚಾರ ನಿಮಿತ್ತ ತಮಿಳುನಾಡಿನ ಶ್ರೀರಂಗಂ ನ ಶ್ರೀರಂಗನಾಥನ ಕ್ಷೇತ್ರದಿಂದ ಬೆಂಗಳೂರಿನ ರಾಯರ ಸನ್ನಿಧಿಗೆ ಆಗಮಿಸಿದರು.ಶ್ರೀ ಪಾದರಿಗೆ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು.ತದನಂತರ ಪರಮಪೂಜ್ಯ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಲೋಕಕಲ್ಯಾಣಕ್ಕಾಗಿ ಶ್ರೀಗುರು ರಾಘವೇಂದ್ರ ಸ್ವಾಮಿಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಾರ್ಥಿಸಿ, ದೀಪಗಳನ್ನು ಪ್ರಜ್ವಲಿಸಿ ಶ್ರೀಮನ್ಮೂಲ ರಾಮಚಂದ್ರದೇವರ ಮುಂಭಾಗದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿ ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿ ಪಲಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿ ನಂತರ ಮಂತ್ರಾಲಯ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು.ನರಕ ಚತುರ್ದಶಿಯ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೈಲ ಅಭ್ಯಂಜನವನ್ನು ನೆರವೇರಿಸಲಿದ್ದಾರೆ .ಈ ಜಲ ಪೂರಣ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಶ್ರೀಪಾದಂಗಳವರ ಪೂರ್ವಾಶ್ರಮದ ಮಾತೃ ಶ್ರೀ ಯವರಾದ ಶ್ರೀಮತಿ ಮಂಜುಳಾ ಬಾಯಿಯವರುಮತ್ತು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ,ಕೆ ವಾದಿಂದ್ರಾಚಾರ್ಯರು ಉಪಸ್ಥಿತರಿದ್ದರು, ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಜಲ ಪೂರಣ ಹಬ್ಬದ ಸಂಭ್ರಮದಲ್ಲಿ ಶ್ರೀಮಠದ ಸಿಬ್ಬಂದಿಗಳು ಭಕ್ತರು ಭಾಗವಹಿಸಿ ಶ್ರೀಗಳಿಂದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.
Повторяем попытку...
Доступные форматы для скачивания:
Скачать видео
-
Информация по загрузке: