Yaava Mohana Murali Kareyitu Video Song | America America | Ramesh Aravind | Hema Panchamukhi
Автор: SGV Sandalwood Songs
Загружено: 2021-07-10
Просмотров: 2384234
Описание:
Song: Yava Mohana Murali Kareyitu - HD Video
Kannada Movie: America America
Actor: Ramesh Aravind, Akshay Anand, Hema Panchamukhi
Music: Mano Murthy
Singer: Raju Ananthaswamy, Sangeetha Katti
Lyrics: Gopalakrishna Adiga
Year :1997
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
America America – ಅಮೇರಿಕಾ ಅಮೇರಿಕಾ 1997*SGV
Yava Mohana Murali Kareyitu Song Lyrics In Kannada:
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಗಂಡು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೆಣ್ಣು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಗಂಡು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಇಬ್ಬರು : ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಗಂಡು : ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಕೋರಸ್ : ಆಆಆಅ... ಆಆಆ...
ಹೆಣ್ಣು : ವಿವಶವಾಯಿತು ಪ್ರಾಣ... ಹ್ಹಾ..
ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಗಂಡು : ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇಬ್ಬರು : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
Повторяем попытку...
Доступные форматы для скачивания:
Скачать видео
-
Информация по загрузке: