ಪುರದಮ್ಮ | ಚೌಡೇಶ್ವರಿ | ಹಾಸನ | Puradamma | Chowdeshwari | Hassan | Adhishakthi
Автор: Engineerkannadiga
Загружено: 2025-03-02
Просмотров: 5975
Описание:
ಹಾಸನ ತಾಲ್ಲೂಕು ಸಾಲಗಾಮೆ ಹೋಬಳಿ ಬೀಕನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ (ಪುರದಮ್ಮ) ದೇವಾಲಯವಿರುತ್ತದೆ ಸದರಿ ದೇವಾಲಯವು ಸುಮಾರು 200 ವರ್ಷಗಳ ಹಳೆಯ ದೇವಾಲಯವಾಗಿರುತ್ತದೆ. ರಾಮೇದೇವರಪುರ ಗ್ರಾಮದಲ್ಲಿ ಶ್ರೀಚೌಡೇಶ್ವರಿ ಎಂಬ ಹೆಸರಿನಲ್ಲಿ ಗ್ರಾಮದೇವತೆಯಾಗಿದ್ದು, ಅಕ್ಕ-ಪಕ್ಕದ ಗ್ರಾಮಸ್ಥರುಗಳು ಪುರದಮ್ಮ ಹೆಸರಿನಿಂದ ಕರೆಯುತ್ತಾರೆ.
ಅದರಂತೆ ಪುರದಮ್ಮ ಎಂಬ ಹೆಸರಿನಿಂದ ಪ್ರಚಲಿತವಾಗಿರುತ್ತದೆ. ದೇವರ ವಿಗ್ರಹವು ಮಾನವ ಪ್ರತಿಷ್ಠಾಪಿತ ವಿಗ್ರಹವಾಗಿರುತ್ತದೆ ಅರ್ಚಕರು ಮತ್ತು ಸ್ಥಳೀಯರು ಹೇಳುವಂತಹ ದಂತ ಕಥೆಯಾಗಿದ್ದು, ಯಾವುದೇ ದಾಖಲೆಗಳು ಇರುವುದಿಲ್ಲ ಭಕ್ತಾಧಿಗಳು ದೇವಿಯವರಲ್ಲಿ ತಮ್ಮ ಕಷ್ಟಗಳ ಬಗ್ಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಕಷ್ಟಗಳು ಪರಿಹಾರವಾದ ನಂತರ ಭಕ್ತರು ಊಟದ ರೂಪದಲ್ಲಿ ಪ್ರಸಾದವನ್ನು ಸ್ವತಃ ಅವರೇ ತಯಾರಿಸಿ ತಾವುಗಳು ಸೇವಿಸಿ ಬರುವಂತಹ ಭಕ್ತರಿಗೆ ಕೊಡುವ ಪದ್ದತಿ ರೂಢಿಯಲ್ಲಿರುತ್ತದೆ. ಈ ದೇವಾಲಯದ ಸುತ್ತಲೂ ವಿಶಾಲವಾದ ಸ್ಥಳಾವಕಾಶವಿರುತ್ತದೆ.
ಇಲ್ಲಿ ಬರುವ ಮಾರ್ಗ ಮಧ್ಯದಲ್ಲಿ ರಾಮದೇವರ ಹಳ್ಳವೆಂಬ ಪುರಾತನ ದೇವಾಲಯವಿರುತ್ತದೆ. ಈ ಹಳ್ಳದಲ್ಲಿ ದೇವರ ವಿಗ್ರಹವು ಯಾವಾಗಲೂ ನೀರಿನಲ್ಲಿದ್ದು, ನೀರು ಯಾವಾಗಲೂ ಬತ್ತುವುದಿಲ್ಲವೆಂಬುವುದೇ ಈ ಸ್ಥಳದ ವಿಶೇಷತೆಯಾಗಿರುತ್ತದೆ.
#2025 #kannada #karnataka
Повторяем попытку...
Доступные форматы для скачивания:
Скачать видео
-
Информация по загрузке: