Chitta Shuddhi - ಚಿತ್ತಶುದ್ಧಿ
Автор: Kusumadhara S
Загружено: 2025-12-25
Просмотров: 741
Описание:
ಚಿತ್ತಶುದ್ಧಿ | Kannada Devotional Lyrics “ಚಿತ್ತ ಶುದ್ಧಿ” is a deeply introspective Kannada devotional lyric that expresses surrender, inner purification, and faith in the Guru.Each verse is a heartfelt prayer — seeking guidance, strength, and the cleansing of inner impurities, while trusting the compassionate hand of the Guru to lead the way.✨ Theme: Inner purity | Surrender | Guru Bhakti
___ ಚಿತ್ತಶುದ್ಧಿ___
ಕೊಳದಲಿ ಉಕ್ಕುವ ಹೊಸ ಒರತೆಯಂತೆ
ನನ್ನ ಹೃದಯದಿ ನಿನ್ನ ಪ್ರಾಣಾಹುತಿಯು ||ಪ||
ಮೇಲಿಹುದು ತಿಳಿನೀರು ಕನ್ನಡಿಯಂತೆ
ಮನದಾಳದ ತಳದಿ ಕೆಸರು-ಕಡ್ಡಿಗಳು
ಸ್ವೀಕರಿಸು ಓ ಗುರುವೆ, ನನ್ನದೆಲ್ಲವನು ||1||
ಹಂಸಯುಗಲಗಳು ಜಲರಾಶಿಯಲ್ಲಿ
ಸನಿಹದಲೆ ಮಾತೆ ವೀಣೆ ಹಿಡಿದು
ದಾಟಲಾರೆ ಓ ಗುರುವೆ, ಒಂಟಿಯಾಗಿ ||2||
ಕೈಹಿಡಿದು ನಡೆಸುವ ನೀ ಇರುವವರೆಗೂ
ಎದ್ದು ನಡೆಯುವುದರಲಿ ಭಯವೇಕೆ ನನಗೆ?
ಬಿಡದಿರು ಓ ಗುರುವೆ, ನೀ ಕೈಯನು ||3||
ನಿನ್ನ ನೋಟವು ನನ್ನ ನಯನವ ತೂರಿ
ತಳವಿರದ ತಳದಿ ಚಿತ್ತ ಸರೋವರದಿ
ನೀಗಿಸು ಓ ಗುರುವೆ, ಈ ಅಶುದ್ಧಿಯನು ||4||
ನಿನ್ನ ಕರುಣೆಗೆ ಈ ಪ್ರಾಣಧಾರೆಯೆ ಸಾಕ್ಷಿ
ಹಾತೊರೆದಿದೆ ಜೀವ ನಿನ್ನ ಮನಕೊಪ್ಪಲು
ಬೇಡೆನು ಓ ಗುರುವೆ, ಬೇರೆ ಏನನು ||5||
*ಪ್ರಾಣಾಹುತಿ - “ಪ್ರಕೃತಿಯಿಂದ ಗುರುಗಳ ಮೂಲಕ ಅಭ್ಯಾಸಿಯ (ಸಾಧಕನ) ಹೃದಯಕ್ಕೆ ಹರಿಯುವ ದೈವೀ ಪ್ರೇಮ”
Повторяем попытку...
Доступные форматы для скачивания:
Скачать видео
-
Информация по загрузке: