ಟ್ರಾಕ್ಟರ್ ರೋಡಿಗಿ ಸಿಂಗಾರ
Автор: Shivaputra Yasharadha Vlogs
Загружено: 2023-03-10
Просмотров: 11126296
Описание:
Song
ಸಾಹಿತ್ಯ : ಶಿವಪುತ್ರ ಯಶಾರಧಾ
Music & Singer : Fayaz Kushtagi
ನನ್ನ ಟ್ರಾಕ್ಟರ್ ರೋಡಿಗಿ ಸಿಂಗಾರ
ಮನಿಮ್ಯಾಗ ಬರತಾಳ ಬಂಗಾರ
ನನ್ನ ಟೇಪ ಗಿಚ್ಚಿ ಸೌಂಡ್
ಮಾವನ ಎದಿಯಾಗ ಯುದ್ದ ಕಾಂಡ
ನಾನು ಟ್ರಾಕ್ಟರ್ ಡ್ರೈವರ್
ನಿನ್ನ ಎದಿಯ ಸರದಾರ
ನನ್ನ ಪ್ರೀತಿ ಕಬುತರ
ಅಜಾ ಮೇರೆ ದಿಲಪರ
ಊರಾಗ ಅಂತಾರ ಮೇರಿತಾನ
ನೀರಾಗ ನಿಂತ ಉರಿತಾನ
ಅವ್ರಗೇನು ಗೊತ್ತು ಬಡತನ
ಮೂರುಕ್ಕ ಎದ್ದು ನೀರ ಕಟ್ಟತೇನ
ಊರುದವರು ಊರಾಗಿಲ್ಲ
ಮೆರದವರು ಕೇರಿಯಾಗ ಇಲ್ಲ
ಬೊಮಿ ತಾಯಿ ನಂಬಿನಿ
ರಟ್ಟಿ ನಂಬಿ ಬದುಕಿನಿ
ನಂಬಿ ಬಾರ ನನ್ನೊಮ್ಮೇ
ನೆನಪಾಗುದಿಲ್ಲ ತವರು ಇನ್ನೊಮ್ಮೇ
ನಿನ್ನ ಮ್ಯಾಗ್ ಉಸಿರ ಐತಿ
ಗಾಡಿ ಹಿಂದ ಹೆಸರ ಐತಿ
ನೀನು 24 ಕ್ಯಾರೆಟ್
ಟಚ್ ಮಾಡ ನಂದ ಬೊನಟ್
ಬಣ್ಣದ ಮಾತಿಗಿ ಬೀಳಬ್ಯಾಡ
ಬದುಕಿನ ನೀತಿ ಮರಿ ಬ್ಯಾಡ
ಕ್ಯಾರ ನಿಂಬಿಕಾಯಿ ಇಟ್ಟಾರ
ಗಾಡಿ ಕೆಳಗ ಸುಟ್ಟಾರ
ನಿಂಬಿಕಾಯಿ ಶರಬತ್ ಮಾಡಿನಿ
ಹಳಗುಣಕಿ ಹಣಮಪ್ಪನ ನಂಬಿನಿ
ನನ್ನಮುಂದು ಹುಟ್ಟಿದ ಕುಸುಗೊಳು
ಆಗ್ಯಾರ ಅವ್ರೆ ಪೀಗರ್ ಗಳು
ಎಲ್ಲ ದೋಸ್ತರ ಮದವಿ ಆಯ್ತು
ನಂದು ಹಣೆಬರಹದ ಬದುಕಾತು
ನಿಮ್ಮ ತಿಂಡಿ ತೋರಸಬ್ಯಾಡ್ರಿ
ಕಡಿತಿದ್ರ ಬರ್ನಾಲ್ ಹಚ್ಚಗೋರಿ
ನನಗಾಗಿ ನಾ ಬದಕೋದು
ಪ್ರೀತಿಸಿದವರ ಸ್ಮರಿಸೋದು
ಮೂಗನ್ಯಾಗ ಹಾಕಿ ನಿ ನತ್ತ
ಎನ್ ಅದರ ಗಮ್ಮತ್ತ
ಒಮ್ಮೆ ನಿ ನಕ್ಕರ
ನಿಂದೆ ಈ ಸಲ ಸರ್ಕಾರ
ಕೊಳ್ಳಾಗ ಹಾಕ್ಯಾಳ ಬೊರಮಾಳ
ಇವಳೆ ನನ್ನ ಉರಮಿಳಾ
ಅಂಗಾರ ಹೊರಗ ಚಲ್ಲೋಣ
ಬಂಗಾರದಂಗ ಬದಕೋಣು
ಯಾರಿಗೂ ಬುದ್ದಿ ಹೇಳಬ್ಯಾಡ್ರಿ
ಹೇಳಿದ್ರ ದುಶಮನ್ ಆಗ್ತಾರಿ
ಕಾಲ ಚೈಂಜ್ ಆಗೇದ ರಿ
ನೀವು ಯಾವಾಗ ಚೈಂಜ್ ಆಕ್ಕೀರಿ
Повторяем попытку...
Доступные форматы для скачивания:
Скачать видео
-
Информация по загрузке: