JATRABETTU DHARMA JARANDAYA BANTA NEMA || PART 2 || SHIRVA
Автор: COASTAL TOUCH
Загружено: 2022-12-26
Просмотров: 1108
Описание:
Tulunad or Tulu Nadu, also called Bermere sristi[citation needed] or Parashurama Srishti, is a region and a proposed state on the southwestern coast of India. The Tulu people, known as 'Tuluva' (plural 'Tuluver'), speakers of Tulu, a Dravidian language, are the preponderant ethnic group of this region. South Canara, an erstwhile district and a historical area, encompassing the undivided territory of the contemporary Dakshina Kannada and Udupi districts of Karnataka State and Kasaragod district of Kerala state forms the cultural area of the Tuluver. Historically, Tulu Nadu lay between the Gangavalli River (Uttara Kannada district) in the north and the Chandragiri River (Kasaragod district) in the south. Currently, Tulu Nadu consists of the Dakshina Kannada and Udupi districts of Karnataka state and Kasaragod district of Kerala state. This region is not an official administrative entity. Mangalore, the fourth largest (in terms of area and population) and a major city of Karnataka is the largest city of Tulu Nadu. Udupi and Kasaragod are the other major cities of this region.
ತುಳುನಾಡಿನಲ್ಲಿ ಉಡುಪಿಯಿಂದ ಹಿಡಿದು ತೆಂಕಣ ಪೂರ್ವಕ್ಕೆ ತನ್ನ ಪ್ರಸರಣವನ್ನು ವಿಸ್ತಾರಗೊಳಿಸಿ ಮೆರೆದ ದೈವ ‘ಜಾರಂದಾಯ’. ರಾಜ್ಯದ ಗಡಿಕಾಯುವ ಮೂಲಕ ತನ್ನ ಅಧೀನಕ್ಕೊಳಗಾದ ಸಮಸ್ತ ಭಕ್ತರನ್ನು ರಕ್ಷಿಸುವ ಹೊಣೆಗಾರಿಕೆ ರಾಜನ್ ದೈವದ್ದು. ಜುಮಾದಿ, ಪಂಜುರ್ಲಿ, ಪಿಲ್ಚಂಡಿ, ಬಬ್ಬರ್ಯ, ಕೊಡಮಂದಾಯ, ಕುಕ್ಕಿನಂದಾಯ ಮೊದಲಾಗಿ ಕೆಲವೇ ದೈವಗಳಿಗೆ ಈ ಪಟ್ಟ ಸೀಮಿತ. ಆ ಗುಂಪಿನಲ್ಲಿ ಜಾರಂದಾಯ ದೈವವೂ ಸೇರಿಕೊಂಡಿರುವುದು. ಅದರ ಜೊತೆಗೆ ತುಳುನಾಡಿನ ಪೂರ್ವ ಸಂಪ್ರದಾಯದಲ್ಲಿ ನಡೆದು ಬಂದಂತೆ ಮನೆತನದ ‘ಅಧಿದೈವ’ವಾಗಿ ನಂಬಿದ ಸಂಸ್ಕಾರವನ್ನು ಕಾಯ್ದುಕೊಳ್ಳುವ ಘನತರದ ಜವಾಬ್ದಾರಿಯು ಜಾರಂದಾಯನಿಗಿದೆ. ತುಳುವರ ನಂಬಿಕೆಯ ಮಣೆ ಮಂಚದ ದೈವಗಳ ಕಥೆಯಲ್ಲಿರುವ ರೋಚಕತೆ ಜಾರಂದಾಯನಿಗೂ ಇದೆ. ಇವುಗಳಲ್ಲಿ ಕೆಲವು ದೈವಗಳು ಈಶ್ವರ ದೇವರ ಅಪ್ಪಣೆಯಂತೆ ತುಳುನಾಡು ಪ್ರವೇಶಿಸಿದರೆ, ಇನ್ನಿತರ ಅನೇಕ ದೈವಶಕ್ತಿಗಳು ತುಳುವರ ಪೂರ್ವ ಸಂತತಿಯಲ್ಲಿ ಹುಟ್ಟಿದವುಗಳು. ಬದುಕಿನಲ್ಲಿ ದಬ್ಬಾಳಿಕೆಗೆ ಸಿಲುಕಿ ಸಾಧಿಸಲಾಗದ ಕಾರ್ಯಗಳನ್ನು ದೈವತ್ವಕ್ಕೇರಿದ ಬಳಿಕ ಸಾಧಿಸಿದವರು. ಒಟ್ಟಿನಲ್ಲಿ ದೈವಾರಾಧನೆ ತಳುವರ ಬದುಕಿನ ಅವಿಭಾಜ್ಯ ಅಂಗವೆಂದರೆ ಅದು ತಪ್ಪಲ್ಲ.
ಪೂರ್ವದಲ್ಲಿ ಕೈಲಾಸ ಪರ್ವತದಲ್ಲಿ ಈಶ್ವರ ದೇವರು ಗಂಭೀರವಾಗಿ ತಪಸ್ಸು ಮಾಡುತ್ತಿದ್ದರು. ಆ ಹೊತ್ತಿನಲ್ಲಿ ದುಷ್ಟ ದಾನವರಿಂದ ದೇವರ ತಪಸ್ಸಿಗೆ ಭಂಗವಾಯಿತು. ಆಗ ಉಗ್ರ ಕೋಪ ತಳೆದ ಪರಮೇಶ್ವರನ ತನ್ನ ಉದ್ದವಾದ ಜಡೆಯನ್ನು ಒಮ್ಮೆಲೆ ಅಪ್ಪಳಿಸಿದರು. ಅದೇ ವಿಷ ಗಳಿಗೆಯಲ್ಲಿ ವೀರಭದ್ರನ ಉದ್ಭವವಾಯಿತು. ವೀರಭದ್ರನ ಭಯಾನಕ ರೂಪವನ್ನು ಕಂಡಾಕ್ಷಣದಲ್ಲಿ ದೈತ್ಯ ದಾನವರು ಪ್ರಾಣದಾಸೆಯಿಂದ ಕಂಡ ಕಂಡಲ್ಲಿ ಓಡಿದರು. ಆ ಬಳಿಕ ವೀರಭದ್ರನು ಈಶ್ವರ ದೇವರಲ್ಲಿ ತನ್ನಿಂದ ಯಾವ ‘ಕಜ್ಜ ಕಾರ್ಯ’ವಾಗಬೇಕೆಂದು ಕೇಳಿಕೊಂಡನು. ಆಗ ಪರಮೇಶ್ವರ ದೇವರು “ನೀನು ಸತ್ಯ ಧರ್ಮವನ್ನು ಪಾಲಿಸಿಕೊಂಡು ಬರತಕ್ಕದ್ದು. ನಿನ್ನ ಉಘ್ರ ಕೋಪವನ್ನು ಬಿಟ್ಟು ಶಾಂತನಾಗು. ದೇವಲೋಕವನ್ನು ಬಿಡು, ಭೂಮಿ ಲೋಕವನ್ನು ಸೇರು. ಭೂಲೋಕದಲ್ಲಿ ಧರ್ಮದಿಂದ ಬದುಕುತ್ತಿರುವ ಭಕ್ತರನ್ನು ನೀನು ಸಂರಕ್ಷಿಸಬೇಕು. ನೀನು ಭೂಲೋಕದಲ್ಲಿ ‘ಧರ್ಮ ಜಾರಂದಾಯ’ ಎಂಬ ಹೆಸರನ್ನು ಪಡೆದು ನಿನ್ನ ಕಲೆ-ಕಾರ್ಣಿಕವನ್ನು ತೋರುತ್ತಿರು” ಎಂದು ಆಗ್ರಹಿಸಿದರು. ಈಶ್ವರ ದೇವರ ಅಪ್ಪಣೆ ಪ್ರಕಾರ ವೀರಭದ್ರನು ‘ಧರ್ಮಜಾರಂದಾಯ’ ಎಂಬ ಹೆಸರಿನ ದೈವವಾಗಿ ಭೂಮಿಗಿಳಿಯಲು ‘ಗೆಂದಗಿಡಿ’ಯ ರೂಪದಲ್ಲಿ ಹೊರಟನು. ಆಕಾಶ ಮಾರ್ಗದಲ್ಲಿ ಹಾರಾಡುತ್ತಾ ಪಡುಗಡಲ ತೀರದತ್ತ ತೀಕ್ಷ್ಣದೃಷ್ಟಿಯನ್ನು ಹರಿಸಿದನು. ಪಂಚವರ್ಣದ ನಾಗನಡೆಯ ತುಳುವ ನಾಡಿನ ಸತ್ಯದ ಮಣ್ಣಿನತ್ತ ತಾನು ಸೇರಬೇಕಾದ ಜಾಗವನ್ನು ಶೋಧನೆ ಮಾಡಲು ಪ್ರಾರಂಭ ಮಾಡಿದನು.
ತುಳುನಾಡಿನಲ್ಲಿ ಒಂದೆಡೆ ಬ್ರಹ್ಮ ವಂಶದ ದೇರೆಬೈಲು ಬಟ್ರು, ಬಾರೆಬೈಲು ಬಟ್ರು, ನಡುಗುಂದಿ ಬಾರೆಬೈಲು ಬಟ್ರು ಮತ್ತು ಇಡಗುಂಜಿ ಬಟ್ರು ಎಂಬ ನಾಲ್ವರು ಭಟ್ಟರು ಇದ್ದರು. ಇವರಿಗೆ ಗೇಯಲು ಭೂಮಿಯಿಲ್ಲ, ಉಳಲು ಕೋಣಗಳಿಲ್ಲ, ಬಿತ್ತಲು ಬೀಜಗಳಿಲ್ಲ ಅವರೆಲ್ಲ ಒಂದಾಗಿ ದೇವರನ್ನು ಪ್ರಾರ್ಥಿಸಿಕೊಂಡರು. ಅವರಿಗೆ ದೇವರು ಒಲಿದರು. ದೈವ ಕೃಪೆಯಿಂದ ಗೇಯಲು ಭೂಮಿ, ಉಳಲು ಕೋಣಗಳು, ಬಿತ್ತಲು ಬೀಜ ದೊರೆಯಿತು. ಆಗ ನಾಲ್ವರು ಒಂದಾಗಿ ‘ನೋಟನಿಮಿತ್ತ' ನೋಡಿದರು. ಆಗ ಮೇಲು ಲೋಕದಿಂದ ಈಶ್ವರ ದೇವರು ಇಳಿಸಿಕೊಟ್ಟ ‘ಧರ್ಮಜಾರಂದಾಯ’ ಎಂದು ತಿಳಿಯಿತು. ನಾಲ್ವರು ಬ್ರಾಹ್ಮಣರೊಂದಾಗಿ ದೈವವನ್ನು ಮೊದಲಾಗಿ ನಂಬಿಕೊಂಡು ಬಂದರು. ಆ ಬಳಿಕ ದೈವವು ‘ಕುಡಲ’ದ ಕೌಡೂರು ಕೋಟೆಯಿಂದ ನರಂಗ ಎಂಬವನ ಬೆನ್ನತ್ತಿ ‘ಗೆಡ್ಯಕ್ಕೆ' ಬರುತ್ತದೆ. ಗೆಡ್ಯದಲ್ಲಿ ಕಲ್ಲಿನಲ್ಲಿ ‘ಒಂದುವರೆ ತಾಳೆಮರ’ದ ಬುಡದಲ್ಲಿ ತನ್ನನ್ನು ನಂಬಿಕೊಂಡು ಬರಬೇಕೆಂದು ಅಪ್ಪಣೆಯಾಯಿತು. ದೈವದ ಅಪ್ಪಣೆ ಪ್ರಕಾರ ಚದರದ ನರಂಗನ್ನು ನಂಬಿಕೊಂಡು ಬರುವನು. ಆ ರಾತ್ರಿಯಲ್ಲಿ ಆ ಊರಿನ ‘ಅರ್ಬಿ’ ಮನೆತನದ ಹಿರಿಯರಿಗೆ ಜಾರಂದಾಯನು ಕನಸಿನಲ್ಲಿ ತೋರುವನು. ನಿಮ್ಮ ಊರಿನಲ್ಲಿ ಒಂದುವರೆ ತಾಳೆ ಮರದ ಬುಡದಲ್ಲಿ ‘ಚದರದ’ ಕಲ್ಲಿದೆ. ಅದೇನೆಂದು ಶೋಧಿಸಿ ಬರಬೇಕೆಂದು ಸ್ವಪ್ನವಾಯಿತು. ಅದೇ ಪ್ರಕಾರ ಮರು ಮುಂಜಾನೆ ಅರ್ಬಿ ಮನೆತನದವರು ಆ ಪ್ರದೇಶಕ್ಕೆ ಬಂದು ನೋಡಿದರು. ಅಲ್ಲಿ ‘ಚದರದ’ ಕಲ್ಲನ್ನು ಕಂಡರು. ಅದನ್ನು ಕಂಡು ಅರ್ಬಿಯ ಅರಸರು ತನ್ನ ಚಾಕರಿಯವರಿಗೆ ಆ ಕಲ್ಲನ್ನೆತ್ತಿ ಅರ್ಬಿಯ ನದಿಯಲ್ಲಿ ಎಸೆಯಲು ಹೇಳಿದರು. ಆಳು ಕಲ್ಲನ್ನು ‘ಸೊರಬಿದ ಕರಿಯ’ದಲ್ಲಿ ಎಸೆದನು.
Повторяем попытку...
Доступные форматы для скачивания:
Скачать видео
-
Информация по загрузке: