Fisherman Protest Against Sagarmala Project To Save Beach In Karwar | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-03-11
Просмотров: 598
Описание:
ಕರಾವಳಿ ನಗರಿ ಕಾರವಾರದಲ್ಲಿ ಕೇಂದ್ರದ ಸಾಗರಮಾಲಾ ಯೋಜನೆಡಿ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದರ ಮಧ್ಯೆಯೇ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮತ್ತೆ ಈ ಯೋಜನೆಯನ್ನು ಮರು ಘೋಷಣೆ ಮಾಡಲಾಗಿದೆ. ಯೋಜನೆ ಜಾರಿಗೆ 1,880 ಕೋಟಿ ಅನುದಾನ ಕೂಡ ಮೀಸಲಿಡಲಾಗಿದೆ.
ಕರಾವಳಿಯಲ್ಲಿ 24 ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಘೋಷಣೆ ಮಾಡಿರುವುದು, ಕಡಲಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ, ಈ ಯೋಜನೆಯ ವಿರುದ್ಧ ಎರಡನೇ ಸುತ್ತಿನ ಹೋರಾಟಕ್ಕೆ ಮೀನುಗಾರರು ಸಿದ್ಧರಾಗಿದ್ದಾರೆ.
ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಯನ್ನ ಮುಖ್ಯಮಂತ್ರಿಗಳು ಮರು ಘೋಷಿಸುವ ಮೂಲಕ ಮತ್ತೆ ಮೀನುಗಾರರು ಪ್ರತಿಭಟನೆಯ ಹಾದಿ ಹಿಡಿಯಲು ಪ್ರೇರೇಪಿಸಿದ್ದಾರೆ. ಈಗಾಗಲೇ ಸಾಗರಮಾಲಾ ಯೋಜನೆಯನ್ನು ವಿರೋಧಿಸಿ, ಕಳೆದೆರಡು ವರ್ಷಗಳಿಂದ ಮೀನುಗಾರರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಯೋಜನೆಯಿಂದ ಮೀನುಗಾರಿಕೆಗೆ ಅಡ್ಡಿಯಾಗುವುದರ ಜೊತೆಗೆ ಕಡಲತೀರಕ್ಕೂ ಹಾನಿಯಾಗುತ್ತದೆ ಎನ್ನುವುದು ಮೀನುಗಾರರ ಅಳಲಾಗಿದೆ.
ಇದರ ನಡುವೆ ಬಂದರು ಇಲಾಖೆಯಿಂದ ಸಾಗರಮಾಲಾ ಯೋಜನೆ ಕುರಿತು ವೀಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಾಗರಮಾಲಾ ಯೋಜನೆ ಜಾರಿಯಿಂದ ವಾಣಿಜ್ಯ ಬಂದರಿನ ಅಭಿವೃದ್ಧಿ ಜೊತೆಗೆ ಮೀನುಗಾರಿಕೆಗೂ ಸಾಕಷ್ಟು ಅನುಕೂಲವಾಗಲಿದೆ. ಹಾಗೂ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
#Karwar #Fisherman #Protest
Our Website : https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: