ಜಿ. ಎನ್. ಉಪಾಧ್ಯ || ಕೇವಲ ಮನುಷ್ಯರು || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ
Автор: Shivarama Karantha Vedike
Загружено: 2025-12-22
Просмотров: 517
Описание:
ನಮಸ್ಕಾರ!
ಬೆಂಗಳೂರಿನ ಆರ್. ಟಿ. ನಗರದ ಶಿವರಾಮ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆಯನ್ನು ಆರಂಭಿಸಿದೆ. ಈ ಮಾಲಿಕೆಯಲ್ಲಿ ಜಿ. ಎನ್. ಉಪಾಧ್ಯ ಅವರು ಕಾರಂತರ "ಕೇವಲ ಮನುಷ್ಯರು" ಕಾದಂಬರಿಯ ಅವಲೋಕವನ್ನು ಮಾಡಿದ್ದಾರೆ.
ಈ ಮಾಲಿಕೆ ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಮತ್ತು subscribe ಮಾಡಿ. ಹಾಗೆಯೇ ನಿಮ್ಮ ಅನಿಸಿಕೆಯನ್ನು ದಯವಿಟ್ಟು ಕಾಮೆಂಟ್ ನಲ್ಲಿ ತಿಳಿಸಿ!
------------------------------------------------------------------------------
ಜಿ. ಎನ್. ಉಪಾಧ್ಯ, ಮುಂಬಯಿ, ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ನಿರಂತರ ತೊಡಗಿಕೊಂಡವರು. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಅವರು ಸದ್ಯ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿಯೂ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ..
------------------------------------------------------------------------------
ಶಿವರಾಮ ಕಾರಂತರು, ಭಾರತೀಯ ಕಾದಂಬರಿ ಲೋಕದ ಅತ್ಯಂತ ಮಹತ್ವದ ಹೆಸರು.
ಅವರ ಹೆಸರಿನಲ್ಲಿ ಆರಂಭವಾದ ಸಂಸ್ಥೆ ಬೆಂಗಳೂರಿನ ಆರ್. ಟಿ. ನಗರದ 'ಶಿವರಾಮ ಕಾರಂತ ವೇದಿಕೆ', ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಸದ್ದಿಲ್ಲದೇ ಮಾಡಿಕೊಂಡು ಬಂದಿರುವ ಸಂಸ್ಥೆ.
ಬೆಂಗಳೂರಿನ ತರಳಬಾಳು ಜಗದ್ಗುರು ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಂದ 1993 ರಲ್ಲಿ ಉದ್ಘಾಟನೆಗೊಂಡಿತ್ತು.
ನಾಡಿನ ಪ್ರಮುಖ ಸಾಹಿತಿಗಳಾದ, ಎಸ್ ಎಲ್ ಶೇಷಗಿರಿರಾವ್, ವೆಂಕಟಸುಬ್ಬಯ್ಯ, ಯು. ಆರ್. ಅನಂತಮೂರ್ತಿ, ಹಾ. ಮಾ. ನಾಯಕ್, ನಿಸಾರ್ ಅಹಮದ್ ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ, ಎಸ್. ಆರ್. ವಿಜಯಶಂಕರ, ಎಂ. ಎಸ್ ಆಶಾದೇವಿ, ಲಲಿತಾ ಸಿದ್ಧಬಸವಯ್ಯ ಹೀಗೆ ಸಾಹಿತ್ಯ ಲೋಕದ ಬಹುತೇಕ ಎಲ್ಲಾ ಸಾಹಿತಿಗಳು ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದಾರೆ.
ಈ ಬಾರಿ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಅವಲೋಕನವನ್ನು ಕೈಗೆತ್ತಿಕೊಂಡಿದೆ. ನಾಡಿನ ಹಿರಿಯ, ಕಿರಿಯ ವಿಮರ್ಶಕರು, ಕವಿಗಳು, ಕತೆಗಾರರು ಕಾರಂತರ ಒಂದೊಂದು ಕಾದಂಬರಿಯನ್ನು ಪರಿಚಯಿಸಲಿದ್ದಾರೆ, ಆ ಮೂಲಕ ವಿದ್ಯಾರ್ಥಿಗಳು, ಹೊಸ ಓದುಗರಿಗೆ ಕಾರಂತರ ಸಾಹಿತ್ಯ ಮತ್ತೆ ತಲುಪಲಿ ಎನ್ನುವ ಮಹದಾಸೆ ಶಿವರಾಮ ಕಾರಂತ ವೇದಿಕೆಯದು.
Повторяем попытку...
Доступные форматы для скачивания:
Скачать видео
-
Информация по загрузке: