ನಂದೀತಳೆ ಶ್ರೀ ಆಂಜನೇಯ ಸ್ವಾಮೀ ದೇವಸ್ಥಾನ, ಸಾಗರ ತಾಲೂಕ್, ಶಿವಮೊಗ್ಗ ಜಿಲ್ಲೆ | Nanditale Anjaneya Swami Temple
Автор: Nanditale Anjaneya Temple
Загружено: 2020-08-14
Просмотров: 32
Описание:
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||
ನಂದೀತಳೆ ಶ್ರೀ ಆಂಜನೇಯ ಸ್ವಾಮೀ ದೇವಸ್ಥಾನ, ಸಾಗರ ತಾಲೂಕ್, ಶಿವಮೊಗ್ಗ ಜಿಲ್ಲೆ
ಮಲೆನಾಡಿನ ಮಡಿಲಾದ ಸಾಗರದಿಂದ ಹಾದುಹೋಗುವ ರಾಷ್ಟೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡು ಇರುವ ಪುಟ್ಟ ಗ್ರಾಮ ನಂದಿತಳೆ, ನಿತ್ಯಹರಿದ್ವರ್ಣ ಕಾಡಿನ ಮಧ್ಯೆ ಹೆಜ್ಜೆಹಾಕುತ್ತಾ ಬಂದಾಗ ಸಿಗುವ ಸುಂದರ ಆಡಿಕೆ ತೋಟಗಳ ಮಧ್ಯೆ ನಂದಿತಳೆ ಗ್ರಾಮದಲ್ಲಿ ಶ್ರೀ ಆಂಜನೆಯಸ್ವಾಮಿ ದೇವಾಲಯವು ಕಂಗೊಳಿಸುತ್ತಿದ್ದು, ದೇವಾಲಯದ ಮುಂಭಾಗ ಹರಿಯುವ ನಂದಿಹೊಳೆಯು ಈ ಪರಿಸರಕ್ಕೆ ವಿಶೇಷ ಮೆರುಗನ್ನು ತಂದು ಕೊಟ್ಟಿದೆ.
15ನೇ ಶತಮಾನದಲ್ಲಿ ಜೀವಿಸಿದ್ದ ತುರಂಗಭಾರತದ ಕವಿ ಕೇಡಲೇಸರದ ಪರಮದೇವ ತನ್ನ ಗ್ರಂಥಗಳಲ್ಲಿ ನಂದಿತೀರವಾಸನಾದ ಈ ಆಂಜನೇಯನ ಕುರಿತು ಉಲ್ಲೇಖಿಸಿದ್ದು, ದೇವಾಲಯದ ಪುರಾತನತೆಗೆ ಸಾಕ್ಷಿಯಾಗಿದೆ. ದೇವಾಲಯದ ಮುಂಭಾಗದಲ್ಲಿ ಪುಷ್ಕರಣಿ ಇದ್ದು, ಈ ಪುಷ್ಕರಣಿಯನ್ನು ನಮ್ಮ ಹಿರಿಯರು ಜಂಭಿಟ್ಟಿಗೆಯಿಂದ ನಿರ್ಮಿಸಿದ್ದು, ತಜ್ನರ ಅಭಿಮತದಂತೆ ಸುಮಾರು 6೦೦ ವರ್ಷಗಳ ಹಿಂದಿನದ್ದಾಗಿದು ದೇವಾಲಯದ ಪುರಾತನತೆಯನ್ನು ಪುಷ್ಟೀಕರಿಸುತ್ತದೆ. ಈ ಐತಿಹಾಸಿಕ ಪುಷ್ಕರಣಿಯ ಮೂಲಸ್ವರೂಪವ ಹಾಗೆಯೇ ಇಂದಿಗೂ ಉಳಿದಿರುವುದು ಹಿರಿಯರ ಕೌಶಲ್ಯವನ್ನು ಎತ್ತಿತೋರಿಸುತ್ತದೆ.
ನಂದನನಾಮ ಸಂವತ್ಸರದ ಮಾಘ ಶುದ್ಧ ಪೂರ್ಣಿಮೆ ದಿನಾಂಕ 29/01/1953 ಗುರುವಾರದಂದು ತ್ರಿಕಾಲಜ್ನಾನಿಗಳು, ದತ್ತಾತ್ರೇಯ ಸ್ವರೂಪರಾದ ವರದಹಳ್ಳಿ ಭಗವಾನ್ ಶ್ರೀಶ್ರೀ ಶ್ರೀಧರಸ್ವಾಮಿಗಳ ಅಮೃತಹಸ್ತದಿಂದ ಪುನಃಪ್ರತಿಷ್ಟಾಪನೆ ನೆರವೇರಿಸಿದ್ದು, ಪುನಃಪ್ರತಿಷ್ಟಾಪನೆಗೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳನ್ನು ಸ್ವತಃ ಬ್ರಹ್ಮಚೈತನ್ಯ ಭಗವಾನ್ ಶ್ರೀಶ್ರೀ ಶ್ರೀಧರ ಸ್ವಾಮಿಗಳು ನೆರೆವೇರಿಸಿರುವುದು ದೇವಾಲಯದ ವಿಶೇಷತೆಗಳಲ್ಲೋಂದು.
ಅಂದಿನಿಂದ ಇಂದಿನವರೆಗೂ ದೇವಾಲಯದ ನಿರ್ವಹಣಾ ಸಮಿತಿಯನ್ನು ರಚಿಸಿಕೊಂಡು, ನಿತ್ಯ ನೈಮಿಕ್ತಿಕ ಪೂಜಾವಿಧಿ ವಿಧಾನಗಳನ್ನು ಯಥಾವತ್ತಾಗಿ ನೆಡೆಸಿಕೊಂಡು ಬರಲಾಗುತ್ತಿದ್ದು, ಕಾನ್ಲೆ ವೆಂಕಟಗಿರಿಯಪ್ಪನವರು ಸಾಗರ ಇವರು ಈ ದೇವಾಲಯಕ್ಕೆ ಕೊಡಮಾಡಿದ ಕೊಡುಗೆಯನ್ನು ಈ ಭಾಗದ ಜನರು ಇಂದಿಗೂ ನೆನಸಿಕೊಳ್ಳುತ್ತಾರೆ. ದೇವಾಲಯಕ್ಕೆ ಬೇರೆಬೇರೆ ಭಾಗದ ಭಕ್ತರು ಬಂದು ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: