| ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ | ಉಚ್ಛಂಗಿ ತಾಯಿಗೆ | ಬ್ರಹ್ಮಕಲಶೋತ್ಸವ |Kaup Hosamarigudi |
Автор: Emedia Kannada
Загружено: 2025-03-04
Просмотров: 1917
Описание:
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಶ್ರೀ ಉಚ್ಚಂಗಿ ಬ್ರಹ್ಮಕಲಶಾಭಿಷೇಕ (Kapu Sri Hosa Marigudi Temple : Sri Uchchangi Brahmakalashabhisheka)
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಶ್ರೀ ಉಚ್ಚಂಗಿ ಬ್ರಹ್ಮಕಲಶಾಭಿಷೇಕ
(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮನ ಎದುರು ವಿರಾಜಮಾನಳಾಗಿರುವ ಶ್ರೀ ಉಚ್ಚಂಗಿ ಅಮ್ಮನ ಬ್ರಹ್ಮಕಲಶಾಭಿಷೇಕ ಬಹು ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.
ಕುಂಕುಮ ವರ್ಣದ ಇಳಕಲ್ ಶಿಲೆಯಲ್ಲಿ ಪ್ರಥಮ ಹಂತದಲ್ಲಿ ಸುಮಾರು 65 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಆಕರ್ಷಣೀಯವಾಗಿ ನಿರ್ಮಾಣವಾಗಿ ಭಕ್ತರನ್ನು ಸೆಳೆಯುತ್ತಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪುವಿನಲ್ಲಿಮಂಗಳವಾರ ಬೆಳಿಗ್ಗೆ ಕೊರಂಗ್ರಪಾಡಿ ವೇ.ಮೂ. ಕೆ ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಪಿ ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇ.ಮೂ. ಕಲ್ಯ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಬೆಳಿಗ್ಗೆ ಭುವನೇಶ್ವರಿ ಸಹಸ್ರ ನಾಮ ಮಂತ್ರಯಾಗ, ವಿಜಯಪ್ರದ ಜಯಸೂಕ್ತಯಾಗ, ಚಾಮುಂಡಾಕಲಾ ಮಾತೃಕಾಮಂಡಲಾರಾಧನಮ್, ಚಂಡಿಕಾ ಸಪ್ತ ಶ್ಲೋಕೀ ಸಪ್ತಸತೀ ಯಾಗ, ಅಶ್ವಮೇಧ ಸೂಕ್ತಯಾಗ, ಪ್ರತ್ಯಕ್ಷ ಅಶ್ವಪೂಜೆ ನೆರವೇರಿತು.
ಮಧ್ಯಾಹ್ನ ಪಲ್ಲ ಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಉದಯ ಸುಂದರ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಭಗವಾನ್ ದಾಸ್ ಶೆಟ್ಟಿಗಾರ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯ ಮಾಧವ ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ರಮೇಶ್ ಹೆಗಡೆ ಕಲ್ಯ, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಯೋಗೇಶ್ ಶೆಟ್ಟಿ, ಶಶಿಧರ್ ಶೆಟ್ಟಿ ಮಲ್ಲಾರ್, ಅನಿಲ್ ಬಲ್ಲಾಲ್ ಕಾಪು, ಹರೀಶ್ ನಾಯಕ್ ಕಾಪು, ರವಿ ಸುಂದರ ಶೆಟ್ಟಿ, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಉದಯ ಸುಂದರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ಸದಾಶಿವ ಎ. ಕರ್ಕೇರಾ, ರೋಷನ್ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಮುಂಬಯಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: