Siddara Betta ||ಸಿದ್ದರ ಬೆಟ್ಟ ||Peaceridervk ||one day trip near bengaluru
Автор: Vinay karunadu
Загружено: 2021-02-06
Просмотров: 4286
Описание:
Siddara Betta is one of the most visited places near Madhugiri. Surrounded by rocky hills, temples and caves, the tourist place is located at a distance of 100 kms from Bangalore in Tumkur. This place is most visited by hikers and adventurers as well as pilgrims who come to Siddara Betta for the Shrine of Lord Shiva which is placed inside the ಕವೇ
ಅನಾದಿ ಕಾಲದಿಂದಲೂ ಸಾಧು ಸಂತರ, ಯೋಗಿಗಳ, ಸಿದ್ಧಪುರುಷರ ಪವಿತ್ರ ತಾಣವಾದ ಈ ಸಿದ್ದರ ಬೆಟ್ಟವು ಸಮೃದ್ಧ ಸಂಜೀವಿನಿಯುಳ್ಳ ಹಸಿರು ಸಂಪತ್ತನ್ನು ಹೊಂದಿದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮಿ ದೂರದಲ್ಲಿರುವ ಈ ಬೆಟ್ಟವು ಕೊರಟಗೆರೆಯಿಂದ ಮಧುಗಿರಿಗೆ ಹೋಗುವ ಹಾದಿಯಲ್ಲಿ ೧೫ ಕಿಮಿ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸ್ಮಾರ್ ೬೪೦೦೦ ಅಡಿ ಎತ್ತರದಲ್ಲಿರುವ ಈ ಬೆಟ್ಟದಲ್ಲಿರುವ ಗುಹೆಯೊಳಗಿನ ಅದ್ಬುತತಾಣಗಳು ನೋಡುಗರನ್ನು
ಮಂತ್ರ ಮುಗ್ದಗೊಳಿಸುತ್ತವೆ.
ರಾಮಾಯಣದಲ್ಲಿ ಹನುಮಂತನು ಸಂಜೀವಿನಿ ಪರ್ವತವನ್ನು ಕೊಂಡೊಯ್ಯುವಾಗ, ಆ ಸ್ನಾಜೀವಿನಿ ಪರ್ವತದ ಒಂದು ತುಣುಕು ಇಲ್ಲಿ ಬಿದ್ದುದರಿಂದ ಇಲ್ಲಿಯ ಈಡಿ ಪ್ರದೇಶ ಸಂಜೀವಿನಿ ಶಕ್ತಿಯುಳ್ಳ ಗಿಡ ಮೂಲಿಕೆಗಳಿಂದ ಕೂಡಿದೆಎಂಬ ಪುರಾಣ ಕತೆಯು ಜನಜನಿತವಾಗಿದೆ.
ಗವಿಯ ಒಳಗೆ ಉದ್ಭವ ಶಿವಲಿಂಗವಿದೆ. ರೇವಣ ಸಿದ್ದರು ಪವಾಡದಿಂದ ಸೃಷ್ಟಿಯಾದ ಜಲ ತೀರ್ಥವು ಮಂಜುಗಡ್ಡೆಗಿಂತಲೂ ತಣ್ಣಗಿದ್ದು ರೋಗಾ ನಿರೋಧಕ ಶಕ್ತಿಯನ್ನು ಹೊಂದಿದೆ.
ಎಣ್ಣೆ ದೀಪ/ ಟಾರ್ಚ್ ಸಹಾಯದಿಂದ ಇಲ್ಲಿಯ ಗುಹೆಗಳನ್ನು ವೀಕ್ಷಿಸುವುದೇ ಒಂದು ರೋಚಕ ಅನುಭವ. ಶಿವಲಿಂಗದ ತೀರ್ಥಕುಂಡದ ಬಲಭಾಗದಿಂದ ಆರಂಭವಾಗುವ ಗುಹೆಯಲ್ಲಿ ಮೊದಲಿಗೆ ಕುಳಿತು ಕೆಲವೆಡೆ ತೆವಳಿಕೊಂಡು ಸಾಗುವ ಗುಹೆಯ ಹಾದಿ ಬಲು ಕಠಿಣ.ಇಂತಹ ವಿಸ್ಮಯ ತಾಣದಲ್ಲಿ ಅನೇಕ ಸಿದ್ದ ಪುರುಷರು ಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಈ ಸಿದ್ಧಪುರುಷರು ತಪಸ್ವಿಗಳು ಕುಳಿತು ಧ್ಯಾನಿಸುತ್ತಿದ್ದ ಸ್ಥಳಗಳು ಇಂದು ರುದ್ರಗವಿ, ಲಕ್ಷ್ಮಿ ಗವಿ, ಸೂರ್ಯ ಗವಿ ಮೊದಲಾದ ಹೆಸರಿನಿಂದ ಕರೆಯಲ್ಪಟ್ಟಿದೆ.
ಈಗಲೂ ಸಾಧು ಸಂತರು ಪೂಜಿಸುತ್ತಿದ್ದ ಶಿವಲಿಂಗಗಳು, ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದ ಜಾಗಗಳನ್ನು ಕಾಣಬಹುದು. ಬೆಟ್ಟದ ಮೇಲಿನ ಬಲಭಾಗದಲ್ಲಿ ಒಂದರ್ಧ ಕಿಮಿ ಸಾಗಿದ್ದಲ್ಲಿ ಕಾಡು ನಿಂಬೆ, ಮಾವು, ದ್ರಾಕ್ಷಿ, ಸೀಬೆ, ಮೆಣಸು, ಮಧುನಾಶಿನಿ, ದೇವದಾರು, ಬಾಳೆ, ಸೊಗದೆ ಬೇರು, ಹೀಗೆ ಅನೇಕ ವನಸ್ಪತಿಗಳನ್ನು ಕಾಣಬಹುದು.
ವಿಜಯನಗರದ ಅರಸರ ಕಾಲದಲ್ಲಿ ಕೊರುಂಗರಾಯ, ಹಲವು ಪಾಳೇಗಾರರು ಮತ್ತು ಹಾಗಲವಾಡಿ ದೊರೆಗಳು ಈ ಕ್ಷೇತ್ರವನ್ನು ಆಳಿದ್ದರು.ಇಲ್ಲಿ ಬರುವ ಭಕ್ತರಿಗೆ ಅನ್ನ ದಾಸೋಹದ ಹೊರತು ಊಟ, ವಸತಿಗಳ ಬೇರೆ ಸೌಲಭ್ಯವಿರುವುದಿಲ್ಲ. ತುಮಕೂರು, ಮಧುಗಿರಿ, ಕೊರಟಗೆರೆಗಳಿಂದ ಬಸ್ಸಿನ ಸೌಲಭ್ಯವಿದೆ.
Повторяем попытку...
Доступные форматы для скачивания:
Скачать видео
-
Информация по загрузке: