ಹಸಿ ಮೂಲಂಗಿ ಗೊಜ್ಜು ಅಥವಾ ತದ್ ಮೂಲಂಗಿ ಸಾರು | ಮತ್ತು ಉಳಿದ ಅನ್ನದಲ್ಲಿ ಮುದ್ದೆ | Raw radish curry
Автор: RaJsBasu
Загружено: 2025-02-22
Просмотров: 78245
Описание:
ಸ್ವಾರಸ್ಯಕರ ಮಾಹಿತಿ
ಈ ಪಾಕ ವಿಧಾನವು ಹಳೆಯ ಮತ್ತು ಆರೋಗ್ಯಕ್ಕೆ ಅಮೃತ ಸಮಾನವಾಗಿದೆ. ಇತ್ತಿಚೀನ ದಿನಗಳಲ್ಲಿ ಇಂತಹ ಅಡುಗೆಗಳು ಮರೆಯಾಗುತ್ತಿರುವುದು ವಿಷಾದನೀಯವಾಗಿದೆ. ಹಣ ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುವ ಬದಲು, ನಮ್ಮ ಮೂಲ ಆಹಾರಗಳನ್ನು ಮಾಡಿ ಸವಿಯೋಣ. ಇದರಿಂದ ಆರೋಗ್ಯ ಸುಧಾರಿಸುವ ಜೊತೆಗೆ ನಮ್ಮ ಮೂಲಾಹಾರಗಳು ಸದಾಕಾಲವೂ ಹಸಿರಾಗಿರುತ್ತವೆ.
ಪಾಕ ವಿಧಾನಕ್ಕೆ ಸಂಬಂಧಿಸಿದಂತೆ ಸಲಹೆಗಳು :-
ಇದು ಹಸಿ ಗೊಜ್ಜು ಅಥವಾ ಸಾರು ಆಗಿದ್ದು ಇದನ್ನು ಕುದಿಸಬಾರದು. ಇದು ಒಪ್ಪತ್ತಿನ ಸಾರು ಅಲ್ಲದೇ ಕುದಿಸದೇ ಇರುವುದರಿಂದ ನಾಲ್ಕರಿಂದ ಐದು ಗಂಟೆ ಒಳಗೆ ಬಳಸಬೇಕು. ಹಾಗೂ ಮಿಕ್ಕಿದಲ್ಲಿ ಫ್ರಿಜ್ ನಲ್ಲಿಟ್ಟು ನಂತರ ಒಂದು ದಿನದಲ್ಲೆ ಮುಗಿಸಿ.
ಇನ್ನು ರುಬ್ಬವಾಗ ನೀರನ್ನು ನೋಡಿ ಹಾಕಿಕೊಳ್ಳಿ. ಈಗಾಗಲೇ ಮೂಲಂಗಿಯಲ್ಲಿ ನೀರಿನ ಅಂಶ ಇರುವುದರಿಂದ ಹೆಚ್ಚು ನೀರು ಹಾಕಿಕೊಂಡಲ್ಲಿ ಜಾರ್ ನಿಂದ ಆಚೆ ಬಂದು ನುಣ್ಣಗೆ ರುಬ್ಬಲು ಅಡ್ಡಿಯಾಗಬಹುದು. ಹುಣಸೆ ಹಣ್ಣನ್ನು ನೇರವಾಗಿ ಜಾರ್ ಗೆ ಹಾಕಿ ರುಬ್ಬಿ, ಒಂದು ವೇಳೆ ನಿಮ್ಮ ಮಿಕ್ಸಿಯು ಅಲ್ಲಂಡೆ ಆಟ ಆಡುತ್ತಿದ್ದರೆ ಅಥವಾ ಮೈಗಳ್ಳಾಟ ಆಡುವಲ್ಲಿ ಪದವಿ ಪಡೆದಿದ್ದರೇ, ಅದು ಸರಿಯಾಗಿ ರುಬ್ಬುವುದಿಲ್ಲ ಹಾಗೂ ಹುಣಸೆಯ ತೊಪ್ಪೆ ಹಾಗೆ ಉಳಿಯುವ ಸಾಧ್ಯತೆಯಿದೆ. ಆದುರಿಂದ, ಅದನ್ನು ಸ್ವಲ್ಪ ನೆನೆಸಿ ಹಾಕಿ ರುಬ್ಬಿಕೊಳ್ಳಿ.
ಈ ಗೊಜ್ಜು ಅಥವಾ ಸಾರು ಅಥವಾ ತಂಬುಳಿಗೆ ಬಳಸಿದ ಮುತ್ತಿನಂಥ ಮೂರು ಪುಡಿಗಳನ್ನು ತಯಾರಿಸುವ ವೀಡಿಯೋ ಲಿಂಕ್ ಇಲ್ಲಿದೆ.
ಲಿಂಕ್ :- • ಈ ಮೂರು ಮಂಗಳೆಯರ ಅಡುಗೆ ಮನೆಯ ಅಂಗಳಕ್ಕೆ ಎಳೆದು ತ...
ಬರೀ ರಾಗಿ ಹಿಟ್ಟಿನಿಂದ ಬೆಣ್ಣೆಯಂತ ಮುದ್ದೆ ಹಾಗೂ ಹಸಿ ಶೇಂಗಾ ಗೊಜ್ಜು ಮಾಡುವ ವೀಡಿಯೋ ಲಿಂಕ್ :- • ಹಸಿ ಶೇಂಗಾ ಗೊಜ್ಜು ಮತ್ತು ಬೆಣ್ಣೆಯಂತ ಮುದ್ದೆ ಮಾ...
#foryou #foryoupage #raddish #radish #tambuli
Повторяем попытку...
Доступные форматы для скачивания:
Скачать видео
-
Информация по загрузке: