ಕನ್ನಡಿ ಹಾವುಗಳ ಜೀವನ ಶೈಲಿ : ಮಿಥ್ಯೆಗಳು ಮತ್ತು ವಾಸ್ತವ - UV Special Video
Автор: Udayavani
Загружено: 2017-10-12
Просмотров: 64284
Описание:
ಕನ್ನಡದಲ್ಲಿ 'ಕನ್ನಡಿ ಹಾವು' ಅಥವಾ ತುಳುವಿನಲ್ಲಿ 'ಕಂದಡಿ' ಎಂದು ಕರೆಯಲ್ಪಡುವ ವಿಷಕಾರಿ ಹಾವುಗಳ ಕುರಿತಾಗಿ ಜನಸಾಮಾನ್ಯರಲ್ಲಿ ಅಗಧ ಭಯ ಮತ್ತು ಅನೇಕ ರೀತಿಯ ತಪ್ಪು ಕಲ್ಪನೆಗಳಿವೆ. ಈ ಹಾವುಗಳು ತೀವ್ರ ವಿಷಕಾರಿಯಾಗಿದ್ದರೂ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ವಾಸಮಾಡುತ್ತಿದ್ದರೂ ತಮ್ಮದೇ ಆದ ರೀತಿಯಲ್ಲಿ ಪರಿಸರ ಸಮತೋಲನದಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತವೆ ಎಂಬುದು ಉರಗ ತಜ್ಞ ಗುರುರಾಜ್ ಸನಿಲ್ ಅವರು ತಮ್ಮ ಅಧ್ಯಯನದಿಂದ ಕಂಡುಕೊಂಡಿರುವ ವಿಶೇಷ ಅಂಶಗಳು.
#Snakes #Snakesofindia #GururajSanil
Udayavani Online ವಿಶೇಷವಾಗಿ ನಡೆಸುತ್ತಿರುವ 'ಹಾವುಗಳ ಕಥೆ ಸನಿಲ್ ಜೊತೆ' ಎಂಬ ಉರಗ ಜಾಗೃತಿ ವಿಡಿಯೋ ಸರಣಿಯಲ್ಲಿ ಈ ಬಾರಿ ಕನ್ನಡಿ ಹಾವುಗಳ ಕುರಿತಾಗಿ ಗುರುರಾಜ್ ಸನಿಲ್ ಅವರು ವಿವರವಾಗಿ ಮಾತನಾಡಿದ್ದಾರೆ. ಅವರ ಮಾತುಗಳಿಗೆ ಪೂರಕವಾಗಿ Exclussive ವಿಡಿಯೋ - ಚಿತ್ರ ಸಾಕ್ಷ್ಯಗಳೂ ಇವೆ. ಇದರಲ್ಲಿ ಕನ್ನಡಿ ಹಾವುಗಳ ಮಿಲನ, ಕನ್ನಡಿ ಹಾವು ಮರಿ ಹಾಕುವುದು, ಕನ್ನಡಿ ಹಾವು ಈಜುವುದು ಸೇರಿದಂತೆ ವಿಶೇಷ Video Clippingಗಳಿವೆ.
ನಮ್ಮ ಪರಿಸರದ ಒಂದು ಭಾಗವಾಗಿರುವ ಹಾವುಗಳಲ್ಲಿ ಇರುವ ವಿವಿಧ ಪ್ರಭೇಧಗಳ ಕುರಿತಾಗಿ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಸನಿಲ್ ಅವರ ಸಹಕಾರದಿಂದ ಉದಯವಾಣಿ ವೆಬ್ ನಡೆಸಿಕೊಂಡು ಬರುತ್ತಿದ್ದು ಓದುಗರಲ್ಲಿ ಮೂಡಬಹುದಾದ ಯಾವುದೇ ಸಂದೇಹಗಳಿಗೆ ತಮ್ಮ ಅರಿವಿನ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಗುರುರಾಜ್ ಸನಿಲ್ ಅವರು ಮುಕ್ತಮನಸ್ಸನ್ನು ಹೊಂದಿರುತ್ತಾರೆ...
ಆರೋಗ್ಯಕರ ಚರ್ಚೆಗಳನ್ನು ನಾವು ಸ್ವಾಗತಿಸುತ್ತೇವೆ
Повторяем попытку...
Доступные форматы для скачивания:
Скачать видео
-
Информация по загрузке: