ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ ತೃತೀಯ ವಾರ್ಷಿಕೋತ್ಸವ ಸಂಪನ್ನ
Автор: SHREE SHANKARA HD
Загружено: 2026-01-15
Просмотров: 243
Описание:
ತೃತೀಯ ವಾರ್ಷಿಕೋತ್ಸವ ದಿನಾಂಕ 11 ಜನವರಿ 2026 ಭಾನುವಾರ ಲಾಯಿಲದ ಸ್ಥಾನಿಕ ಸಭಾಭವನದಲ್ಲಿ ಜರುಗಿತು.
ಪುತ್ತೂರು ನಗರ ಸಭೆ ಕಮಿಷನರ್ ವಿದ್ಯಾ ಕಾಳೆ ಡೋಂಗ್ರೆ ಮಾತನಾಡುತ್ತಾ, ಹಿರಿಯರ ಪಾಂಡಿತ್ಯ ಸಾಧನೆ ಕಿರಿಯರಿಗೆ ಮಾರ್ಗದರ್ಶನ, ಸಿಗುವ ಅವಕಾಶ ಗಳನ್ನು ಬಳಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಅಗತ್ಯ ಎಂದರು.
ಮೈಸೂರು ವಿಶ್ವವಿದ್ಯಾಲಯದ ಜೀವ ರಸಾಯನ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಗೋಪಾಲ್ ಮರಾಠೆ ಮಾತನಾಡಿ, ಕೆಲವೊಂದು ವಿಚಾರಗಳಲ್ಲಿ ಸಮಾಜ ಸಂಧಿಗ್ಧ ಸ್ಥಿತಿಯಲ್ಲಿದೆ. ಸಮಾಜದ ಒಡಕು ತಿದ್ದುವ ಕೆಲಸವನ್ನು ಸಂಘಟನೆ ಮಾಡಬೇಕು ಎಂದರು.
ಕಾರ್ಕಳ ಚಿತ್ಪಾವನ ಸಂಘದ ಅಧ್ಯಕ್ಷ ರತ್ನಾಕರ ಮರಾಠೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಸಭಾಧ್ಯಕ್ಷತೆ ವಹಿಸಿಧ್ಧರು.
ವೇದಮೂರ್ತಿ ವಿಷ್ಣು ಡೋಂಗ್ರೆ ಬೆಂಗಳೂರು ಅವರಿಗೆ ಚಿತ್ಪಾವನ ವೈದಿಕ ರತ್ನ ಹಾಗೂ ಶ್ರೀ ಪ್ರಹ್ಲಾದ ಫಡಕೆ ಮುಂಡಾಜೆ ಅವರಿಗೆ ಚಿತ್ಪಾವನ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರ ಆಯ್ಕೆ
ಸಂಘದ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮುಂಡಾಜೆ ವಲಯದಿಂದ ಸುಷ್ಮಾ ಭಿಡೆ, ಧನಂಜಯ ಭಿಡೆ, ಶಶಾಂಕ ಮರಾಠಿ, ದಿಶಾ ಪಟವರ್ಧನ್, ಶಿಶಿಲ ವಲಯದಿಂದ ವರದ ಶಂಕರ ದಾಮ್ಲೆ ಲತಾ ಭಟ್ ಅರೆಕ್ಕಲ್ಲು, ವೃಷಾಂಕ್ ಖಾಡಿಲ್ಕಾರ್, ಅವಿನಾಶ್ ಗೋಖಲೆ, ಕರುಣಾಕರ ಗೋಗಟೆ, ಉಜರೆ-ಬೆಳ್ತಂಗಡಿ ವಲಯದಿಂದ ಪಾಂಡುರಂಗ ಮರಾಠೆ, ಪ್ರಭಾಕರ್ ಹೆಬ್ಬಾರ್, ತ್ರಿವಿಕ್ರಮ ಹೆಬ್ಬಾರ್, ವೀಣಾ ಬೆಂಡೆ, ಸೂಳಬೆಟ್ಟುವಲಯದಿಂದ ವಿವೇಕ ಕೇಲ್ಕರ್, ಪ್ರಜ್ಞಾ ಹೆಬ್ಬಾರ್, ಡಾ.ಶಶಿಧರ ಡೋಂಗ್ರೆ, ಪ್ರಜ್ಞಾ ಮೆಹೆಂದಳೆ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ದಲ್ಲಿ ಅತಿ ಹೆಚ್ಚು 450 ಚಿತ್ಪಾವನ ಮನೆಗಳು ತಾಲೂಕಿನಲ್ಲಿವೆ. ಭಾಷೆಯನ್ನು ಉಳಿಸಲು ಹಲವು ವೇದಿಕೆಗಳ ಮೂಲಕ ಪ್ರಯತ್ನ ಮುಂದುವರಿದಿದೆ ಎಂದರು. ಆನ್ಲೈನ್ ಮೂಲಕ ವೇದಪಾಠ ನಡೆಸಿದ ಪ್ರೊ. ಶಶಿಶೇಖರ ಕಾಕತ್ಕರ್, ಪಾಕ ತಜ್ಞ ಮಹೇಂದ್ರ ಮರಾಠೆ ಅವರನ್ನು ಗೌರವಿಸ ಲಾಯಿತು.
ಕಾರ್ಯಕ್ರಮವನ್ನು ವೃಷಾಂಕ ಖಾಡಿಲ್ಕರ್ ವಿವೇಕ್ ಕೇಳರ್ ಕಾರ್ಯದರ್ಶಿ ನಿರೂಪಿಸಿದರು. ಸ್ವಾಗತಿಸಿದರು. ನಾರಾಯಣ ಫಡಕೆ ವರದಿ ವಾಚಿಸಿದರು. ವಾಸುದೇವ ಗೋಖಲೆ ಆಯ-ವ್ಯಯ ಮಂಡಿಸಿದರು. ಶಂಕರ ಪಟವರ್ಧನ್, ಪ್ರಭಾಕರ್ ಹೆಬ್ಬಾರ್ ಸನ್ಮಾನಿತರನ್ನು ಹಾಗೂ ಗೋಪು ಗೋಖಲೆ, ಡಾ.ಶಶಿಧರ ಡೋಂಗ್ರೆ, ಅಶ್ವಿನಿ ಎ.ಹೆಬ್ಬಾರ್ ಅತಿಥಿ ಗಳನ್ನು ಪರಿಚಯಿಸಿದರು. ಸುಷ್ಮಾ ಶಶಾಂಕ ಭಿಡೆ ಹಾಗೂ ರವಿಕಲಾ ತಾಮನ್ಮರ್ ಸನ್ಮಾನ ಪತ್ರ ವಾಚಿಸಿದರು.
ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ತೃತೀಯ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ, ನೂತನ ಕಾರ್ಯಕಾರಿ ಮಂಡಳಿ ರಚನೆಯೊಂದಿಗೆ ಯಶಸ್ವಿ ಯಾಗಿ ಸಂಪನ್ನ ವಾಯಿತು.
ಸಭಾ ವೇದಿಕೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಶ್ರೀಯುತ ತಿವಿಕ್ರಮ ಹೆಬ್ಬಾರ್ ರವರ ಅಧ್ಯಕ್ಷತೆಯಲ್ಲಿ, ಸಂಶೋಧಕರಾದ ಮೈಸೂರು ವಿಶ್ವವಿದ್ಯಾಲಯ ಜೀವ ರಸಾಯನ ಶಾಸ್ತ್ರ ಮತ್ತು ಅಣು ವಿಜ್ಞಾನ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಡಾ.ಗೋಪಾಲ ಮರಾಠೆಯವರು ಭಾಗವಹಿಸಿ ಸಂಘದ ಉದ್ದೇಶ ಗುರಿ ಹೇಗಿರಬೇಕೆಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ವೇದಮೂರ್ತಿ ಮಳ್ಯ ಶ್ರೀ ವಿಷ್ಣು ಭಟ್ ಡೊಂಗ್ರೆ ದಂಪತಿಗಳನ್ನು ಕುಳ್ಳಿರಿಸಿ ಚಿಪ್ಪಾವನ ವೈದಿಕ ರತ್ನ ಬಿರುದು ನೀಡಿ ಗೌರವಿಸಲಾಯಿತು.
ಇನ್ನೋರ್ವರಾದ ಯಶಸ್ವಿ ಉದ್ಯಮಿ ಸಮಾಜಸೇವಕ ಶ್ರೀ ಪ್ರಹಲ್ಲಾದ ಪಡಕೆ ದಂಪತಿಗಳನ್ನು ಕುಳ್ಳಿರಿಸಿ ಚಿತ್ಪಾವನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಲಕ್ಷ್ಮಣ ಖಾಡಿಲ್ಕರ್ ರವರಿಗೆ ವಯೋವಂದನ ಗೌರವವನ್ನು ಸಾಂಕೇತಿಕವಾಗಿ ಸಭೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ಸಮರ್ಪಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ನಗರ ಸಭೆ ಆಯುಕ್ತರಾದ ಶ್ರೀಮತಿ ವಿದ್ಯಾ ಕಾಳೆ ಡೊಂಗ್ರೆ, ಕಾರ್ಕಳ ಚಿತ್ಪಾವನ ಸಂಘಟನೆಯ ಅಧ್ಯಕ್ಷರಾದ ಶ್ರೀ ರತ್ನಾಕರ ಮರಾಠೆ, ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಪಡ್ಕೆಯವರು ಶುಭಾಶಂಸನೆ ಮಾಡಿದರು. ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮ ದಿನಾಂಕ 11 ಜನವರಿ 2026 ರಂದು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನ ಲಾಯೀಲ ಇಲ್ಲಿ ಜರುಗಿತು.
ಸಭೆಯ ಬಳಿಕ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಯಿತು.
ಆರಂಭದಲ್ಲಿ ಅಜ್ಜ್ಯಾಲ ವರಾಡಾಚೀ ವ್ಯಥಾ ಚಿತ್ಪಾವನಿ ಭಾಷಾ ನಗೆ ಪ್ರಹಸನವನ್ನು ಲೋಂಢೇ ಸಹೋದರರು ಶಿರ್ಬಿಟೆ ಮಾಳ ಇವರು ನಡೆಸಿಕೊಟ್ಟರು.
Повторяем попытку...
Доступные форматы для скачивания:
Скачать видео
-
Информация по загрузке: