ILKAL || ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನ — ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳ ಅದ್ಬುತ ಭಾಷಣ!
Автор: V&N NEWS Channel
Загружено: 2025-12-27
Просмотров: 260
Описание:
ಕನ್ನಡದಲ್ಲಿ ಕುರಾನ್ ಪ್ರವಚನ! ಕೆಡುಕು ಮುಕ್ತ ಸಮಾಜ – ಕುರ್‌ಆನ್ ಸಂದೇಶದ ಬೆಳಕಿನಲ್ಲಿ ಮಾನವತೆಯ ಸಹಬಾಳ್ವೆ. ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಅಖಿಲ ಭಾರತ ದೇವಾಂಗ ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳು, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ, ಹೇಮಕೂಟ–ಹಂಪೆ ಅವರು ವಹಿಸಿದ್ದರು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಮಾತನಾಡುತ್ತಾ, ಧರ್ಮವು ಮನುಷ್ಯರನ್ನು ವಿಭಜಿಸುವುದಕ್ಕಲ್ಲ; ಮನುಷ್ಯರನ್ನು ಒಂದಾಗಿಸುವ ಶಕ್ತಿಯಾಗಬೇಕು ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು; ಜೊತೆಗೆ ಇತರ ಧರ್ಮಗಳಿಗೂ ಸಮಾನ ಗೌರವ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದರು. ವಸುಧೈವ ಕುಟುಂಬಕಂ ಎಂಬ ಭಾರತೀಯ ತತ್ವವನ್ನು ಉಲ್ಲೇಖಿಸಿದ ಸ್ವಾಮೀಜಿಯವರು, ಈ ಭೂಮಿಯು ಎಲ್ಲರಿಗೂ ಸೇರಿದ ಕುಟುಂಬವಾಗಿದ್ದು, ದ್ವೇಷ, ಅಸಹಿಷ್ಣುತೆ ಮತ್ತು ಭೇದಭಾವಕ್ಕೆ ಇಲ್ಲಿ ಜಾಗವಿಲ್ಲ ಎಂದರು. ಪರಸ್ಪರ ಪ್ರೀತಿ, ಗೌರವ, ಸಹಾನುಭೂತಿ ಹಾಗೂ ಮಾನವೀಯತೆಯಿಂದ ಬದುಕಿದಾಗ ಮಾತ್ರ ನಿಜವಾದ ಕೆಡುಕು ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು. ಎಲ್ಲ ಧರ್ಮಗಳ ಮೂಲ ಸಾರ ಶಾಂತಿ, ಸತ್ಯ ಮತ್ತು ಮಾನವ ಕಲ್ಯಾಣವೇ ಆಗಿದ್ದು, ಧರ್ಮಗ್ರಂಥಗಳು ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ದೀಪಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದರು. ಸ್ವಾಮೀಜಿಯವರ ಈ ಸಂದೇಶಗಳು ಸಭಿಕರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.
Follow this link to join my WhatsApp group: https://chat.whatsapp.com/KdJbjG6fGYb...
#ilkal #quran #dayanandpuri #devang #swamiji #gayatripeeta #hampi #vijayanandkashappanavar #hungundmla #srk #kashappanavar #hemaqoota #quranverses #holyquran #guruji #pravachana #quranquote #devanga #devangsamaja #kannada #quraninkannada #society #secular #secularity #breakingnews #viralnews #localnews #ilkalnews #news
Повторяем попытку...
Доступные форматы для скачивания:
Скачать видео
-
Информация по загрузке: