ಕನಕಪುರದಲ್ಲೇ ಡಿಕೆ ಸೋಲಿಸಲುಎಚ್ಡಿಕೆ ಮಾಸ್ಟರ್ ಪ್ಲಾನ್ | “HDK Plots DK’s Defeat in Kanakapura!”
Автор: ಫೋಕಸ್ ಟಿವಿ ಕನ್ನಡ | FOCUS TV
Загружено: 2026-01-26
Просмотров: 4255
Описание:
ಕನಕಪುರದಲ್ಲೇ ಡಿಕೆ ಸೋಲಿಸಲು, ಎಚ್ಡಿಕೆ ಮಾಸ್ಟರ್ ಪ್ಲಾನ್ |“HDK Plots DK’s Defeat in Kanakapura!”
ಡಿಕೆ ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಒಂದೇ ಸಮುದಾಯದವರಾದರೂ ರಾಜಕೀಯ ಬದ್ಧವೈರಿಗಳು. ಕಲ್ಲು ತೆಂಗಿನ ಕಾಯಿ ಇದ್ದಂತೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಪರಸ್ಪರ ರಾಜಕೀಯ ತಂತ್ರ ಪ್ರತಿತಂತ್ರಗಳನ್ನು ಮಾಡುತ್ತಿರುತ್ತಾರೆ. ಈಗ ಅಳೆದು ತೂಗಿ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಎಚ್.ಡಿ ಕುಮಾರಸ್ವಾಮಿ ಸ್ಫೋಟಕ ಅಸ್ತ್ರ ಪ್ರಯೋಗಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಜ್ಯಕೀಯವಾಗಿ ಮುಗಿಸಲು ಅವರ ರಾಜಕೀಯ ಬದ್ಧವೈರಿ ಪ್ಲಾನ್ ಮಾಡಿದ್ದಾರೆ. ಹೇಗಾದರೂ ಸಿಎಂ ಸಿದ್ದರಾಮಯ್ಯ ಅವರಿಂದ ಸಿಎಂ ಕುರ್ಚಿ ಗಿಟ್ಟಿಸಬೇಕೆಂದು ನೋಡುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ, ಸತ್ವ ಪರೀಕ್ಷೆ ಎದುರಾಗಿದೆ. ಇದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಮಹಾತಂತ್ರ ಹೆಣೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕಿ ಸಿಎಂ ಸೀಟಿಗೇರಲು ಆಗದೆ ಬೇಸರದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ತಮ್ಮದೇ ಸಮುದಾಯದ ಕುಮಾರಸ್ವಾಮಿ ಭಾರಿ ಪ್ಲ್ಯಾನ್ ಮಾಡಿದಾರೆ. ಕುಮಾರಸ್ವಾಮಿ ಪ್ಲ್ಯಾನಿಗೆ ಡಿಕೆ ಶಿವಕುಮಾರ್ ಶಾಕ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸೀಟು ಬಿಡುತ್ತಿಲ್ಲ. ಸಿಎಂ ಕುರ್ಚಿ ಕದನದಲ್ಲಿ ಪ್ರತಿ ಬಾರಿಯೂ ಅವರೇ ಮುನ್ನಡೆ ಸಾಧಿಸುತ್ತಿದ್ದಾರೆ. ಹೀಗಿದ್ದರೂ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ನೀಡಿರುವ ಶಾಕ್ ಆದರೂ ಏನು.. ಎಂಬುದನ್ನು ನೋಡುವುದಾದರೆ..
ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸೀಟು ಕೊಡದಿರುವ ನೋವಿನಿಂದ ಹೊರ ಬರದೆ ಚಿಂತೆಗೀಡಾಗಿರುವ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ, ಅಳೆದು ತೂಗಿ ಭಾರಿ ಚೆಕ್ ಮೇಟ್ ಇಟ್ಟಿದ್ದಾರೆ. ಅದೇನೆಂದರೆ. ಸಿಂಪಲ್. ನೇರವಾಗಿ ಅವರು ಡಿಕೆ ಶಿವಕುಮಾರ್ ಅವರ ಬುಡಕ್ಕೆ ಬಾಂಬ್ ಇಡುವ ಪ್ರಯತ್ನ ಮಾಡಿದ್ದಾರೆ. ಅದು ಬೇರೆ ಏನೂ ಅಲ್ಲ. ಡಿಕೆ ಶಿವಕುಮಾರ್ ಅವರನ್ನು ಕನಕಪುರದಲ್ಲೇ ಸೋಲಿಸಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಮೊದಲೇ ಸಿಎಂ ಸೀಟು ಸಿಗದೆ ಬೇಸರದಲ್ಲಿರುವ ಡಿಕೆ ಶಿವಕುಮಾರ್ ಅವರ ಟೆನ್ಷನ್ ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಸಿಎಂ ಸೀಟು ಸಿಗದಿದ್ದರೂ ಕೊನೆ ಪಕ್ಷ 2028ಕ್ಕಾದರೂ ಸಿಎಂ ಆಗೋಣ ಎಂಬ ಸಮಾದಾನದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ನಡೆ ಫುಲ್ ಟೆನ್ಷನ್ ತರಿಸಿದೆ. ಯಾಕೆಂದರೆ ರಾಜಕಾರಣದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ. ಹಾಗಂತ ಮಿತ್ರರೂ ಅಲ್ಲ. ಹಾಗೆಯೇ ಯಾವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಹಾಗಾಗಿ ಕುಮಾರಸ್ವಾಮಿ ಮಾಡಿರುವ ಶಪಥ ಡಿಕೆ ಶಿವಕುಮಾರ್ ಅವರನ್ನು ಕನಕಪುರದಲ್ಲೇ ಸೋಲಿಸಲು ಸಾಧ್ಯವಾಗುತ್ತಾ..ಈ ಹಿಂದೊಮ್ಮೆ ದೇವೇಗೌಡರು ಡಿಕೆ ಶಿವಕುಮಾರ್ ಅವರನ್ನು ಸೋಲಿಸಿದ ಇತಿಹಾಸ ಇದೆ. ಹಾಗೆಯೇ ಈಗಲೂ ಯಾಕಾಗಬಾರದು ಎಂಬ ಲೆಕ್ಕಾಚಾರವೂ ಕುಮಾರಸ್ವಾಮಿ ಅವರಲ್ಲಿ ಇದೆ. ಹಾಗಾಗಿಯೇ 2023ರಲ್ಲಿ ತಮ್ಮ ಪುತ್ರನನ್ನು ರಾಮನಗರದಲ್ಲಿ ಸೋಲಿಸಿದ ಸೇಡು ಹಾಗೂ ಚನ್ನಪಟ್ಟಣದಲ್ಲಿ ಮತ್ತೆ ಸೋಲಿಸಿದ ಸೋಲನ್ನು ತೀರಿಸಿಕೊಳ್ಳಲು ಕುಮಾರಸ್ವಾಮಿ ಕನಕಪುರದಲ್ಲಿ ಯಾರನ್ನು ನಿಲ್ಲಿಸುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ಸೋಲಿಸುತ್ತಾರಾ.. ಡಿಕೆ ಮಾತ್ರ ಅಷ್ಟೊಂದು ಸುಲಭವಾಗಿ ಸೋಲೊಪ್ಪಿಕೊಳ್ತಾರಾ ಎಂಬುದೇ ಸದ್ಯದ ಪ್ರಶ್ನೆ.
#Kanakapura #HDK #DKShivakumar #MasterPlan #PoliticalBattle #KarnatakaPolitics #BreakingNews #TrendingNow #PowerStruggle #ViralNews
Focus TV Kannada | Focus TV Kannada News | Kannada News | Latest Kannada News | FOCUS TV KANNADA NEWS LIVE | ಫೋಕಸ್ ಟಿವಿ ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS
Connect With Focus TV Kannada*
➔ Focus Tv Kannada Website: https://focustvkannada.com/
➔ Subscribe Our Youtube: / @focuskarnataka
➔ Follow us on Facebook: https://www.facebook.com/profile.php?...
➔ Follow us on Twitter: https://x.com/FocusTVKannada
➔ Follow us on Instagram: / focustvkannada2024
➔ Follow our WhatsApp Channel: https://whatsapp.com/channel/0029VbBe...
➔ Find us on Google & share your review: https://share.google/syho4JUT9AW95kCCP
#northkarnataka #wintersession #belagavisession #congress #bjp #northkarnatakanews #karnatakaassemblysession2025 #cmsiddaramiah #rashok #gparameshwara #knrajanna #uttarakarnataka #neglected #karnatakapolitics #jds #focustvkannada #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines
At Focus TV Kannada, we are committed to delivering accurate, timely and impactful news across the state. As a dedicated regional digital news platform, our mission is to inform, engage and empower communities through responsible journalism that highlights the stories and issues that matter most to the people of Karnataka.
Stay connected. Stay informed. Your story is our focus.
LIKE, SUBSCRIBE COMMENT & SHARE!
Повторяем попытку...
Доступные форматы для скачивания:
Скачать видео
-
Информация по загрузке: