Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು
Автор: Panchajanya Kannada Class
Загружено: 2025-01-04
Просмотров: 6021
Описание:
ಕನ್ನಡ ಪ್ರಜ್ಞೆ-೧, ವಚನಗಳ ಸಾರಾಂಶ:-
೧. ವಚನಕಾರರಲ್ಲಿ 'ಬಯಲಿ'ನ ಜಿಜ್ಞಾಸೆ ಇದೆ. ಬಯಲು ಸೃಷ್ಟಿಯಷ್ಟೇ ನಿಗೂಢ. ಈ ಕುರಿತಾದ ಅರಿವು ಲೋಕದ ಸುಖಗಳಿಗೇ ಹಾತೊರೆಯುವ ಮಿತಿಯುಳ್ಳವರಿಗೆ ಸಾಧ್ಯವಾಗದು. ಮಾತಿಗೆ ಮೀರಿದ, ಕಣ್ಣನೋಟದ ಮಿತಿಗೆ ದಕ್ಕದ, ಯಾವ ಆಕ್ರಮಣಕ್ಕೂ ಎಟುಕದ ಬಯಲು ಆದಿ, ಅಂತ್ಯದ ಕಲ್ಪನೆಯಿಲ್ಲದ್ದು. ಈ ಅಗಾಧ ಬಯಲಿನ ನಿಗೂಢತೆಯ ಭಾಗವೇ ಆದ ನಮ್ಮೊಳಗು ನಮಗೂ ಅರಿವಿಗೆ ಬರಲಾರದ ಮಿತಿಯಲ್ಲಿ ಬಳಲುತ್ತೇವೆ. ಈ ಆಲೋಚನೆ, ಅವಲೋಕನವೂ ಸಾಧ್ಯವಾಗದ ಜಡಮನಸ್ಸಿನ ಬಗ್ಗೆ ದಾಸಿಮಯ್ಯರ ವಿಚಾರವಿದೆ.
೨. ನಾವು ವಾಸಿಸುವ ಭೂಮಿ, ಅಲ್ಲಿ ಬಿತ್ತು ಬೆಳೆದು ಉಣ್ಣುವ ಫಲ, ಉಸಿರಾಡುವ ಗಾಳಿ ಈ ಎಲ್ಲಕ್ಕೂ ಕಾರಣೀಭೂತವಾದ ಪರಮಶಕ್ತಿಯೊಂದಿದೆ. ಅದನ್ನು ನೆನೆಯದವರು, ಆ ಅಗಾಧ ಶಕ್ತಿಗೆ ಕೃತಜ್ಞರಾಗಿ ಬದುಕದೇ ಕುನ್ನಿಗಳಂತೆ ಪರಾವಲಂಬನೆಯ ಹಂಗಿನಲ್ಲಿ (ಹಸಿದ ಸಂದರ್ಭದಲ್ಲಿ ಆಹಾರ ನೀಡಿದವರಿಗೆ ನಾಯಿ ಬಾಲ ಅಲುಗಿಸಿ ಪ್ರೀತಿ, ಕೃತಜ್ಞತೆ ತೋರುತ್ತದೆ. ಆದರೆ ಈ ಯಾವ ಗುಣಧಣಿಗಳ ಅಸ್ಥಿತ್ವಕ್ಕೂ ಸೃಷ್ಟಿಶಕ್ತಿಯೇ ನಿಜಕಾರಣ) ಯಾವ ಸಂಗತಿಗಳನ್ನೋ ನೆಚ್ಚಿಕೊಂಡು, ಹೊಗಳುತ್ತಾ ಕಾಲ ಕಳೆಯುವರು. ಇಂತಹ ಮನುಷ್ಯವಿಪರೀತಗಳ ಬಗ್ಗೆ ದಾಸಿಮಯ್ಯನ ನಿಲುವು ನಿಷ್ಟುರವಾಗಿದೆ.
೩. ನಿಜ ಭಕ್ತಿ ಎಂತಹುದೇ ಸಂದರ್ಭದಲ್ಲೂ ಅಚಲವಾಗಿ ನಿಲ್ಲುತ್ತದೆ. ಅದು ಅಂತರಂಗ, ಬಹಿರಂಗದಲ್ಲಿ ಒಂದೇ ಆಗಿರುತ್ತದೆ. ಸುಳ್ಳು ಭಕ್ತನ ವೇಷ, ವಿಚಾರಗಳನ್ನು ನಿಜವೆಂದು ನಂಬಬಾರದು ಎಂಬುದಕ್ಕೆ ದಾಸಿಮಯ್ಯ ಮಠದೊಳಗಿನ ಬೆಕ್ಕಿನ ನಿದರ್ಶನವನ್ನು ನೀಡಿದ್ದಾರೆ. ಬೆಕ್ಕು ಮಠದಂತಹ ಪವಿತ್ರ ಜಾಗದಲ್ಲಿದ್ದ ಮಾತ್ರಕ್ಕೆ ಇಲಿಯ ಕಂಡರೆ ಬೇಟೆಯಾಡುವ ಅದರ ಅಂತರ್ಗತ ಸ್ವಭಾವವನ್ನು ಬಿಡುವುದಿಲ್ಲ. ಹಾಗೆಯೇ ಡಾಂಭಿಕ ಭಕ್ತರ ತೋರಿಕೆಯ ಭಕ್ತಿಯೂ ದೃಢವಲ್ಲ, ದಿಟವಲ್ಲ ಎಂದಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: