ದಾದಾನಿಗೆ ಬೇಕಿತ್ತಾ ಕರ್ನಾಟಕ ರತ್ನ? | Daada and Karnataka Rathna.....
Автор: UK Postman
Загружено: 2025-09-20
Просмотров: 4249
Описание:
#vishnuvardhan #Dr.Vishnuvardhan #KicchaSudeep #KichchaFans #BiggBoss #vishnu #Controversy #VishnuvardhanSamadhi #KarnatakaRatna #Sandalwood #KannadaCinema #LegendaryActor #BharathiVishnuvardhan
ʼಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ...' - ಈ ಹಾಡಿನ ಪಲ್ಲವಿಯಲ್ಲೇ ಅಡಗಿದೆ ವಿಷ್ಣುವರ್ಧನ್ ಅವರ ಬದುಕಿನ ಸತ್ಯ. ಡಿಸೆಂಬರ್ ೩೦, ೨೦೦೯ ರ ಆ ಕರಾಳ ದಿನದ ನಂತರವೂ ದಾದಾ ಆತ್ಮಕ್ಕೆ ನೆಮ್ಮದಿ ಇಲ್ಲ. ಸಾವಿನ ನಂತರವೂ ಸಮಾಧಿ ವಿಚಾರದಲ್ಲಿ ಗೊಂದಲ, ಈಗ ಕರ್ನಾಟಕ ರತ್ನ ಪ್ರಶಸ್ತಿಯ ಕುರಿತು ರಾಜಕೀಯ ಬೆರೆಸಿರುವುದು… ಇದೆಲ್ಲಾ ಯಾಕೆ? ಈ ಗೌರವಕ್ಕಾಗಿ ಯಾರೂ ಕೇಳಿಕೊಳ್ಳಬೇಕಾಗಿರಲಿಲ್ಲ. ಆದರೂ ರಾಜಕಾರಣಿಗಳು ಮತ್ತು ಕೆಲವು ಸಿನಿಮಾ ಮಂದಿ ಈ ವಿಷಯವನ್ನು ವಿವಾದವನ್ನಾಗಿಸಿದ್ದು ನಿಜಕ್ಕೂ ವಿಪರ್ಯಾಸ.
ಅಂದು, ನ್ಯೂಸ್ ಚಾನೆಲ್‌ನಲ್ಲಿ ವೆಪನ್ ಸ್ಮಗ್ಲಿಂಗ್ ಆರೋಪ ಎದುರಿಸಿದ್ದ ನಟನಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ. ಆದರೆ, ಯಾವುದೇ ತಪ್ಪಿಲ್ಲದ ವಿಷ್ಣು ಅವರನ್ನೇ ಖಳನಾಯಕನನ್ನಾಗಿ ಬಿಂಬಿಸಿದ್ದು ಯಾಕೆ? ಅಭಿಮಾನಿಗಳು ಮತ್ತು ಅವರ ಸಹನಟನ ಮೌನ ಇದಕ್ಕೆ ಕಾರಣವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ವಿಷ್ಣುವರ್ಧನ್ ಅವರ ಜೀವನದಲ್ಲಿ ನಡೆದ ಕೆಲವು ಅಚ್ಚರಿಯ ಘಟನೆಗಳ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿದ್ದೇವೆ.
'ಕರ್ನಾಟಕ ರತ್ನ' ಇರಲಿ, ಇಲ್ಲದಿರಲಿ, ನಮ್ಮ ದಾದಾ ಎಂದೆಂದಿಗೂ ನಮ್ಮ ಮನಸ್ಸಲ್ಲಿ 'ಮರೆಯದ ಮಾಣಿಕ್ಯ'ನಾಗಿಯೇ ಉಳಿಯುತ್ತಾರೆ.
ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್‌ನಲ್ಲಿ ತಿಳಿಸಿ.
Повторяем попытку...
Доступные форматы для скачивания:
Скачать видео
-
Информация по загрузке: