Darushanava l ದರುಶನವ ನೀ ತೋರೆಯಾ l ಕುರುಕ್ಷೇತ್ರ l kurukshetra l Arjuna l ಅರ್ಜುನ l Dr.Nagaraj K C Kalari
Автор: Dr. Nagaraj K C Kalari
Загружено: 2023-07-09
Просмотров: 85645
Описание:
ದರುಶನವ ನೀ ತೋರೆಯಾ ದೇವಾ
ದರುಶನವ ನೀ ತೋರೆಯಾ
ಪಾಂಡವರೈವರ ಪ್ರಾಣವು ನೀನು
ಕೃಷ್ಣಾ... ಶ್ರೀ ಹರಿ....
ಪಾಂಡವರೈವರ ಪ್ರಾಣವು ನೀನು
ಪರಮದಯಾಕರ ಕೊಡು ಎನಗಭಯವ
ಜೀವವು ನೀನೆಂದು ನಂಬಿಹೆನಯ್ಯ
ಕರುಣಾಳು ಕೃಪೆ ತೋರಿ ಕನಿಕರಿಸೊ ಹರಿಯೇ
ದರುಶನವ ನೀ ತೋರೆಯಾ ದೇವಾ
ದರುಶನವ ನೀ ತೋರೆಯಾ
ಹನ್ನೆರಡು ವರ್ಷ ವನವಾಸ , ಒಂದು ವರ್ಷ ಅಜ್ಞಾತವಾಸ ವನ್ನು ಮುಗಿಸಿ ಅಸ್ಥಿನಾವತಿಗೆ ಬಂದರೂ, ಆ ನನ್ನ ಪ್ರಾಣಸಖನಾದ ಶ್ರೀ ಕೃಷ್ಣ ಪರಮಾತ್ಮನಿಗೆ ನಮ್ಮ ಮೇಲೆ ದಯೆಯೇ ಬರಲಿಲ್ಲವಲ್ಲ , ಇರಲಿ ಮುಂದೆ ನಡೆಯುವ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀ ಕೃಷ್ಣ ಪರಮಾತ್ಮನನ್ನು ನಮ್ಮ ಪಕ್ಷವನ್ನು ವಹಿಸುವಂತೆ ಪ್ರಾರ್ಥಿಸಲು ನಾನೀಗಲೆ ದ್ವಾರಕಿ ಗೆ ಹೊರಡುವೆ.
ಅರಣ್ಯವಾಸವ ಆಜ್ಞಾನುಸಾರದಿ
ಅರಣ್ಯವಾಸವ ಅವರಾಜ್ಞಾನುಸಾರದಿ
ಅರಣ್ಯವಾಸವ ಅವರಾಜ್ಞಾನುಸಾರದಿ
ಆನಂದದೀ ನಾವು ಕಳೆದೆವು ದೇವಾ
ಕೃಷ್ಣಾ... ಶ್ರೀ ಹರಿ....
ಪಾಮರರಾದ ಪಾಂಡವರಿಗೆ ನೀ
ಧರ್ಮದಿ ರಾಜ್ಯವ ದೊರಕಿಸೊ ದೇವಾ
ಕರುಣಾಳು ಕೃಪೆ ತೋರಿ ಕನಿಕರಿಸೊ ಹರಿಯೇ
ದರುಶನವ ನೀ ತೋರೆಯಾ ದೇವಾ
ದರುಶನವ ನೀ ತೋರೆಯಾ
Повторяем попытку...
Доступные форматы для скачивания:
Скачать видео
-
Информация по загрузке: