Tiptur Bus Stand (ತಿಪಟೂರು ಬಸ್ ನಿಲ್ದಾಣ)🚍🔥
Автор: KKRTC RAICHUR VLOG
Загружено: 2025-01-06
Просмотров: 5357
Описание:
Tiptur Bus Stand (ತಿಪಟೂರು ಬಸ್ ನಿಲ್ದಾಣ)🚍🔥#bussid #bus #kkrtc #ksrtc #goa #volg #volvo #vlog #tiptur #ksrtcblog #travel #tourist #volvobus #ksrtcbus #travelvlog #trending #trendingvideo #youtube #vlogs #youtubevideo #hassan #tumkur #viralvideo
/ @kkrtcraichurvlog
ತಿಪಟೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ನಗರ. ಇದು ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಈ ನಗರವು ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯನ್ನು ಹೊಂದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶವಾದ ಫಿಲಿಪೈಲ್ಸ್ ನಗರದ ಕೊಬ್ಬರಿಗಿಂತಲೂ ಈ ನಗರದಲ್ಲಿ ಬೆಳೆಯುವ ಕೊಬ್ಬರಿಗೆ ಬಾರಿ ಬೇಡಿಕೆ ಇದೆ ಇದಕ್ಕೆ ಕಾರಣ ಇಲ್ಲಿನ ಕೊಬ್ಬರಿಗಿರುವ ವಿಶೇಷ ರುಚಿ ಈ ನಗರವು ತೆಂಗಿನ ಬೆಳೆಗೆ ಬಹು ಪ್ರಸಿದ್ದಿ. ಇದು ೧೫೦ ಕಿ.ಮಿ. ದೂರದಲ್ಲಿದ್ದು ತನ್ನ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೭೦ ಕಿ.ಮೀ, ಮತ್ತು ಹಾಸನದಿಂದ ೬೫ ಕಿ.ಮೀ,ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೨೦೬ (ಬೆಂಗರು-ಹೊನ್ನಾವರ) ಈ ನಗರದ ಮೂಲಕ ಹಾದು ಹೋಗಿದೆ. ಕೆಲವೊಮ್ಮೆ ತಿಪಟೂರಿನ ಸುತ್ತಮುತ್ತಲಿನ ಪ್ರದೇಶವನ್ನು ( ತುರುವೇಕೆರೆ ತಾ, ಚಿಕ್ಕನಾಯಕನಹಳ್ಳಿ ತಾ ಹಾಸನ ಜಿಲ್ಲೆಗೆ ಸೇರಿರುವ ಚನ್ನರಾಯ ಪಟ್ಟಣ ತಾ, ಅರಸೀಕೆರೆ ತಾ) ಕಲ್ಪತರು ನಾಡು ಎಂದು ಸಂಭೋದಿಸಲಾಗುತ್ತದೆ.
ಬೆಂಗಳೂರು-ಅರಸೀಕೆರೆ ಮೀಟರ್ ಗೇಜ್ ರೈಲುಮಾರ್ಗವೂ ಬೆಂಗಳೂರು-ಶಿವಮೊಗ್ಗ ಹೆದ್ದರಿಯೂ ತಿಪಟೂರಿನ ಮೂಲಕ ಹೋಗುತ್ತವೆ. ತಿಪಟೂರು ನಗರ ಒಂದು ಸಂದಿಸ್ಥಳ. ತಿಪಟೂರಿನಿಂದ ನೈಋತ್ಯಾಭಿಮುಖವಾಗಿ ಲಿಂಗದಹಳ್ಳಿಯ ಮೂಲಕ ಹಾಸನಕ್ಕೂ ದಕ್ಷಿಣಾಭಿಮುಖವಾಗಿ ನುಗ್ಗಿಹಳ್ಳಿಯ ಮೂಲಕ ಚನ್ನರಾಯಪಟ್ಟಣಕ್ಕೂ ಆಗ್ನೇಯದ ಕಡೆಗೆ ನೊಣವಿನಕೆರೆಯ ಮೂಲಕ ತುರುವೇಕೆರೆಗೂ ರಸ್ತೆಗಳಿವೆ. ತಿಪಟೂರು-ತುರುವೇಕೆರೆ ರಸ್ತೆ ಮಾಯಸಂದ್ರಕ್ಕೆ ಮುಂದುವರಿದು ಸಿರಾ-ಶ್ರೀರಂಗಪಟ್ಟಣ ರಸ್ತೆಯನ್ನು ಸಂಧಿಸುತ್ತದೆ. ಕೊನೆಹಳ್ಳಿ ರೈಲುನಿಲ್ದಾಣದಿಂದ ಹೊನ್ನವಳ್ಳಿಗೆ ರಸ್ತೆಯಿದೆ. ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮಗಳಿಗೂ ರಸ್ತೆಗಳಿವೆ.
Повторяем попытку...
Доступные форматы для скачивания:
Скачать видео
-
Информация по загрузке: