ಬೆಳಗಿನ ಜಾವ ಹುಳಿಯಾರಿನಲ್ಲಿ ಯೋಗ ಸಂಭ್ರಮ | 108 ಸೂರ್ಯ ನಮಸ್ಕಾರ
Автор: BKP NEWS
Загружено: 2026-01-25
Просмотров: 18
Описание:
ಹುಳಿಯಾರಿನಲ್ಲಿ ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ (ಹುಳಿಯಾರು–ಕೆಂಕೆರೆ ಶಾಖೆ) ಹಾಗೂ ಶ್ರೀ ಮಾತಾ ಯೋಗ ಕೇಂದ್ರದ ಸಹಯೋಗದಲ್ಲಿ ವಿಶೇಷ ಯೋಗೋತ್ಸವವನ್ನು ಆಯೋಜಿಸಲಾಗಿತ್ತು.
ಪಟ್ಟಣದ ಧ್ಯಾನ ನಗರಿಯಲ್ಲಿ ಬೆಳಿಗ್ಗೆ 5.00 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಯೋಗಬಂಧುಗಳು ಭಾಗವಹಿಸಿ ಭಕ್ತಿಭಾವದಿಂದ ಅಗ್ನಿಹೋತ್ರ ನೆರವೇರಿಸಿದರು. ಬಳಿಕ ಸತತವಾಗಿ 108 ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ಸೂರ್ಯೋಪಾಸನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶಿಕ್ಷಕ ಬಸವರಾಜು ಅವರು, ರಥಸಪ್ತಮಿಯ ದಿನ ಸೂರ್ಯನ ಕಿರಣಗಳು ಆರೋಗ್ಯಕ್ಕೆ ಅತ್ಯಂತ ಲಾಭಕರವಾಗಿದ್ದು, ಈ ಸಮಯದಲ್ಲಿ ಮಾಡುವ ಯೋಗಾಭ್ಯಾಸ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು. ಅಗ್ನಿಹೋತ್ರವು ವಾತಾವರಣ ಶುದ್ಧೀಕರಣಕ್ಕೆ ಸಹಕಾರಿಯಾಗಿದ್ದು, ಸೂರ್ಯ ನಮಸ್ಕಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಶಿಸ್ತು, ಭಕ್ತಿ ಮತ್ತು ಯೋಗಾಭ್ಯಾಸದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
👉 ನಿಮ್ಮ ಊರಿನ ಸುದ್ದಿ, ಕಾರ್ಯಕ್ರಮಗಳು ಹಾಗೂ ನೇರಪ್ರಸಾರಗಳಿಗಾಗಿ BKP News ಅನ್ನು Subscribe ಮಾಡಿ
👍 Like | 🔔 Bell Icon ಒತ್ತಿ | 📲 Share ಮಾಡಿ
#Huliyaru
#RathaSaptami
#SuryaNamaskara
#Agnihotra
#PatanjaliYoga
#YogaFestival
#KannadaNews
#BKPNews
Повторяем попытку...
Доступные форматы для скачивания:
Скачать видео
-
Информация по загрузке: