ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ.
Автор: Bhumika News
Загружено: 2025-12-01
Просмотров: 33
Описание:
ಚಿಕ್ಕಮಗಳೂರು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪ ಇರುವ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆಯವರು ಧ್ವಜಾರೋಹಣ ನೆರವೇರಿಸಿ ತಾಯಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಹಲವು ಬಾಷಿಕರು ನೆಲೆಸಿದ್ದು, ಭಾಷಾ ತಾಮರಸ್ಯ ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ, ನಾಡ ಭಾಷೆಯ ಮೇಲೆ ಗೌರವ ಹೊಂದಿರಬೇಕು ಎಲ್ಲರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದರು.
ನಗರಸಭೆ ಪೌರಾಯುಕ್ತರಾದ ಬಿಸಿ ಬಸವರಾಜ್ ಅವರು ಮಾತನಾಡಿ ಕನ್ನಡವನ್ನು ಉಳಿಸುವಲ್ಲಿ ಆಟೋ ಚಾಲಕರ ಪಾತ್ರ ಅಪಾರವಾಗಿದೆ, ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗದೆ ವರ್ಷಪೂರ್ತಿ ಕನ್ನಡ ಉಳಿವಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದರು.
ಕೋಟೆ ಜಗದೀಶ್ ಅವರು ಮಾತನಾಡಿ ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು, ಕನ್ನಡ ನಾಡು ನುಡಿಗಾಗಿ ದುಡಿದ ಮಹನೀಯರನ್ನು ಸದಾ ಸ್ಮರಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ, ಈಶ್ವರ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: