ಬಂಕಸಾಣ ಜಾತ್ರೆ ಮಕರ ಸಂಕ್ರಾಮಣ | Temple OF Shiva | BankaSana Jatre .
Автор: BAIK RIDER VLOG IN KANNADA
Загружено: 2026-01-15
Просмотров: 49
Описание:
ಸೊರಬ: ತಾಲೂಕಿನ ಬಂಕಸಾಣದಲ್ಲಿ ಮಕರ ಸಂಕ್ರಾಂತಿಯಂದು ಉದ್ಭವ ಮೂರ್ತಿ ಹೊಳೆ ಲಿಂಗೇಶ್ವರ ಸ್ವಾಮಿ ದರ್ಶನ ಸಿಗೋದಿಲ್ಲ ಏಕೆಂದರೆ ಭಕ್ತಾದಿಗಳಿಗೆ ನೀರಿನ ಮಟ್ಟ ಜಾಸ್ತಿ ಇರುವುದರಿಂದ ಕಣ್ಣಿಗೆ ಕಾಣಿಸುವುದಿಲ್ಲ.ಆನವಟ್ಟಿ ಬಳಿಯ ಬಂಕಸಾಣದಲ್ಲಿ ವರದಾ - ದಂಡಾವತಿ ಸಂಗಮ ಸ್ಥಳದಲ್ಲಿ ಉದ್ಭವ ಹೊಳೆಲಿಂಗೇಶ್ವರ ಮೂರ್ತಿ ಇದೆ. ಪ್ರತಿ ವರ್ಷ ಸಂಕ್ರಾಂತಿಯಂದು ಭಕ್ತಾದಿಗಳು ಸಂಕ್ರಮಣ ಸ್ನಾನ ಮಾಡಿ, ಲಿಂಗ ದರ್ಶನಗೆದು, ಪುನೀತರಾಗುತ್ತಿದ್ದರು. ಸಂಗಮ ಸ್ಥಳವು ತಾಲೂಕಿನ ಗಡಿ ಭಾಗದಲ್ಲಿದೆ. ಉತ್ತರ ಕನ್ನಡ, ಉತ್ತರ ಕರ್ನಾಟಕ ಹತ್ತಿರವಾಗಿರುವುದರಿಂದ ಆ ಭಾಗದ ಭಕ್ತರೂ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.ಈ ವರ್ಷ ಮೂಗೂರು ಬಳಿ ಬಹತ್ ಬ್ಯಾರೇಜ್ ನಿರ್ಮಾಣಗೊಂಡು, ನೀರು ಸಂಗ್ರಹವಾಗಿದೆ. ಇದರಿಂದ ಹಿನ್ನೀರಿನಿಂದಾಗಿ ಸಂಗಮ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದೆ. ಉದ್ಭವ ಮೂರ್ತಿಯ ಮೇಲೆ ಸುಮಾರು 15ಕ್ಕೂ ಹೆಚ್ಚು ಅಡಿ ನೀರು ಇರುವುದರಿಂದ ಭಕ್ತಾದಿಗಳಿಗೆ ಮೂರ್ತಿಯ ದರ್ಶನದ ಕಷ್ಟ.
ಅನುಕೂಲ:
ಬ್ಯಾರೇಜ್ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಅಂತರ್ಜಲ ಜಲ ಹಾಗೂ ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಸಹಸ್ರಾರು ಎಕರೆ ಜಮೀನಿಗೆ ನೀರು ದೊರೆಯುತ್ತಿದೆ. ಬ್ಯಾರೇಜ್ ನಿರ್ಮಾಣದಿಂದ ಒಂದನ್ನು ಪಡೆದರೆ, ಇನ್ನೊಂದನ್ನು ಕಳೆದುಕೊಳ್ಳುವಂತ್ತಾಗಿದೆ. ಕಷಿಕ ರಲ್ಲಿ ಸಂತಸ ಮೂಡಿದೆ.ಹೊಳೆ ಲಿಂಗೇಶ್ವರ ಜಾತ್ರೆವರದಾ - ದಂಡಾವತಿ ಸಂಗಮ ಸ್ಥಳದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಉದ್ಭವ ಮೂರ್ತಿ ಶ್ರೀ ಹೊಳೆಲಿಂಗೇಶ್ವರ ಜಾತ್ರೆ ಜ.15 ರಂದು ಜಾತ್ರೆ ನಡೆಯುತ್ತದೆ.ಅಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಕುಂತಲಾ ಬಂಗಾರಪ್ಪ ಉಪಸ್ಥಿತರಿರುವರು. 15ರಂದು ಕಣಗುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗೇಶ್ವರ ಶಿವಾಚಾರ್ಯ ಶ್ರೀಗಳು, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು, ಜಡೆ ಮಠದ ಮಹಾಂತ ಶ್ರೀಗಳು, ಲಕ್ಕವಳ್ಳಿ ಮೋಕ್ಷಮಂದಿರ ಜೆನ ಮಠದ ವಷಭಸೇನ ಭಟ್ಟಾರಕ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸಂಸದ ರಾಘವೇಂದ್ರ, ಹರತಾಳು ಹಾಲಪ್ಪ, ಚಾಲನೆ ನೀಡುವರು.
ಸುತ್ತ ಮುತ್ತಲಿನ ಎಲ್ಲಾ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ತುಂಬಿರುತ್ತಾರೆ.ಈ ಜಾತ್ರೆಯು ಐದರಿಂದ ಏಳು ದಿನಗಳ ತನಕ ಇರುತ್ತದೆ.
@WildPhotography-zf6gd
#temple #holelingeswara #travel
#anavatti #shivamogga
#history
Повторяем попытку...
Доступные форматы для скачивания:
Скачать видео
-
Информация по загрузке: