Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧಿ ಶಾಂತಿ |
Автор: JYOTIRMARGA
Загружено: 2023-03-31
Просмотров: 5622
Описание:
Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧಿ ಶಾಂತಿ | #jyotirmarga
ಶ್ರೀ ಸುಧಾಕರ ಬನ್ನಂಜೆ (ವೈಜ್ಞಾನಿಕ ಜ್ಯೋತಿಷ್ಯ ಸಲಹೆಗಾರರು) ಚಾನೆಲ್ ನ ರವರಿಂದ ಜ್ಯೋತಿರ್ಮಾರ್ಗ ಯುಟ್ಯೂಬ್ ವಿಶೇಷ ಸಂಚಿಕೆ ಪ್ರಮುಖವಾದ 3 ಗ್ರಹ ದಶಾ ಸಂಧಿ ಶಾಂತಿಗಳಲ್ಲಿ ಇಂದು ಕುಜ ಅಂದರೆ ಮಂಗಳ - ರಾಹು ಸಂಧಿ ಶಾಂತಿ ಬಗ್ಗೆ ವಿವರಣೆ ಕನ್ನಡದಲ್ಲಿ.
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳಬಹುದಾದ ವಿಷಯಗಳು:
ಪ್ರಮುಖವಾದ 3 ಗ್ರಹ ದಶಾ ಸಂಧಿ ಶಾಂತಿಗಳು :
1. ಶುಕ್ರಾದಿತ್ಯ ಸಂಧಿ ಶಾಂತಿ, • Dasha Sandhi | ಸಂಧಿ ಶಾಂತಿ | ಶುಕ್ರಾದಿತ್ಯ - ...
2. ಕುಜ - ರಾಹು ಸಂಧಿ ಶಾಂತಿ, • Dasha Sandhi | ಸಂಧಿ ಶಾಂತಿ | ಕುಜ - ರಾಹು ಸಂಧ...
3. ರಾಹು - ಬೃಹಸ್ಪತಿ ಸಂಧಿ ಶಾಂತಿ. • Dasha Sandhi | ಸಂಧಿ ಶಾಂತಿ | ರಾಹು-ಬೃಹಸ್ಪತಿ ...
ಜನ್ಮ ಜಾತಕದಲ್ಲಿ ದಶಾ- ಭುಕ್ತಿಯ ವಿವರಗಳನ್ನು ನೋಡಿದಾಗ ಅದರಲ್ಲಿ ಈ ಸಂಧಿ ಸಮಯ ಯಾವುದು ಎಂದು ತಿಳಿಯುತ್ತದೆ.
ಕುಜ - ರಾಹು ಸಂಧಿ ಶಾಂತಿ:
ಕುಜ ಅಧಿಕಾರದ ಅವಧಿ ಕಳೆದ ನಂತರ ರಾಹು ಗ್ರಹದ ಅಧಿಕಾರ ಅವಧಿ ಆರಂಭವಾಗುವ ೬ ತಿಂಗಳ ಮೊದಲು ಈ ಕುಜ - ರಾಹು ಸಂಧಿ ಶಾಂತಿಯನ್ನು ತಪ್ಪದೇ ಮಾಡಿಸಿ ಕೊಳ್ಳ ಬೇಕು. ಈ ಕುಜ - ರಾಹು ಸಂಧಿಕಾಲವು ಪುರುಷ ಮತ್ತು ಮಹಿಳೆಯರಿಬ್ಬರಿಗೂ ತುಂಬಾ ತೊಂದರೆಗಳನ್ನು ಉಂಟು ಮಾಡುತ್ತದೆ.
ಕುಜ - ರಾಹು ಗ್ರಹ ಸಂಧಿ ಅಂದರೆ ಏನು?
ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಜಾತಕದಲ್ಲಿ ಒಂದು ಗ್ರಹ ದಶೆಯಿಂದ ಮತ್ತೊಂದು ಗ್ರಹ ದಶೆ ಬದಲಾಗುವಾಗ ಈ 'ಸಂಧಿ ಶಾಂತಿ' ಮಾಡಿಸಲಾಗುತ್ತದೆ. ಹಾಗಂತ ಎಲ್ಲ ಗ್ರಹ ದಶೆ ಬದಲಾಗುವಾಗ ಎಲ್ಲ ಗ್ರಹ ದಶೆಗಳಿಗೂ ಮಾಡಿಸುವುದಿಲ್ಲ. ಪ್ರಮುಖವಾಗಿ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ "ಕುಜ ರಾಹು ಸಂಧಿ", ಮತ್ತು ರಾಹುವಿನ ದಶೆ ಮುಗಿದು ಗುರು ದಶೆಯ ಶುರುವಿನಲ್ಲಿ "ರಾಹು ಬೃಹಸ್ಪತಿ (ಗುರು) ಸಂಧಿ", ಮತ್ತೊಂದು ಶುಕ್ರ ದಶೆಯ ನಂತರ ರವಿ ದಶೆ ಶುರುವಿನಲ್ಲಿ "ಶುಕ್ರಾದಿತ್ಯ ಸಂಧಿ",ಶಾಂತಿ ಮಾಡಿಸಿಕೊಳ್ಳಲಾಗುತ್ತದೆ.
ಕುಜ - ರಾಹು ಸಂಧಿ ಶಾಂತಿ ಯಾವಾಗ ಮಾಡಿಸಬೇಕು?
ಕುಜ ದಶೆ ಮುಗಿದು ರಾಹು ದಶೆ ಶುರುವಾಗುವ ಆರು ತಿಂಗಳ ಮುಂಚೆ ಕುಜ - ರಾಹು ಸಂಧಿ ಶಾಂತಿ ಮಾಡಿಸಿಕೊಳ್ಳಬೇಕು. ಶಾಂತಿ ಮಾಡಿಸಿಕೊಳ್ಳುವ ದಿನ ಜಾತಕನ ಜನ್ಮ ನಕ್ಷತ್ರವೇ ಇರುವ ದಿನ ಆರಿಸುವುದು ಅತ್ಯುತ್ತಮ. ಮತ್ತು ಈ ವಿಚಾರದಲ್ಲಿ ಉತ್ತಮ ಜ್ಯೋತಿಷಿಗಳು ಅಥವಾ ಪುರೋಹಿತರ ಸಹಾಯ ಪಡೆದು, ಮುಂದುವರಿಯುವುದು ಶುಭಕರ. ದಶಾ ಸಂಧಿ ಶಾಂತಿ ಮಾಡಿಸಿಕೊಳ್ಳುವುದರಿಂದ ಅದರಿಂದ ಬರುವ ಸಮಸ್ಯೆಗಳು ಅಲ್ಪ ಪ್ರಮಾಣದಲ್ಲೇ ನಿವಾರಣೆ ಆಗುತ್ತವೆ. ಆ ಗ್ರಹಗಳ ಬಲ ದೊರೆತು, ಕೆಲಸ ಕಾರ್ಯಗಳು ಸುಲಭವಾಗುತ್ತವೆ.
ಕುಜ - ರಾಹು ಸಂಧಿ ಮಾಡಿಸದಿದ್ದರೆ ಏನೇನು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?
ಕುಜ ದಶೆ ಮುಗಿದು ರಾಹು ದಶೆ ಶುರುವಾಗುವ ಆರು ತಿಂಗಳ ಮುಂಚೆ ಕುಜ - ರಾಹು ಸಂಧಿ ಶಾಂತಿ ಸಮಯ, ಆ ಸಮಯದಲ್ಲಿ ಅತಿ ಮುಖ್ಯವಾಗಿ ಜಾತಕನಿಗೆ ವಾಹನ ಅಪಘಾತ ಆಗುವ ಸಾಧ್ಯತೆ ಇರುತ್ತದೆ, ಬೆಂಕಿ ಅವಘಡ ಆಗುವಂತಹದ್ದು, ದೊಡ್ಡ ಪ್ರಮಾಣದಲ್ಲಿ ದುಡ್ಡು ಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಹೀಗೆ ಅನೇಕ ಸಮಸ್ಯೆ ಹಾಗೂ ಸವಾಲುಗಳು ಒಂದರ ಹಿಂದೆ ಒಂದರಂತೆ ಬರುತ್ತವೆ. ಈ ಕುಜ - ರಾಹು ದಶಾ ಸಂಧಿ ಶಾಂತಿ ಇದೆಯಲ್ಲಾ ಇದನ್ನು ಮಾಡಿಸುವುದರಿಂದ ಅದು ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುವುದು ಎಂಬ ದಿಟ್ಟ ನಂಬಿಕೆ. ಈ ಕುರಿತಾಗಿ ಅನೇಕ ಪುರಾಣ ಗ್ರಂಥಗಳಲ್ಲೂ ಉಲ್ಲೇಖ ಸಿಗುತ್ತದೆ.
ಜ್ಯೋತಿಷಿಯ ಬಗ್ಗೆ ಸಂಕ್ಷಿಪ್ತ ವಿವರಗಳು:
ಶ್ರೀ ಸುಧಾಕರ ಬನ್ನಂಜೆಯವರು ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡಬಲ್ಲ ವಿದ್ವಾಂಸರು.
ಕಲೆ ಸಾಹಿತ್ಯ ಸಂಸ್ಕೃತಿ ಪತ್ರಿಕೋದ್ಯಮಗಳ ಅಪಾರ ಅರಿವುಳ್ಳವರು. ಇದೀಗ ವೈಜ್ಞಾನಿಕವಾಗಿ ಜೋತಿಷ್ಯವನ್ನು ವಿಮರ್ಶೆ ಮಾಡುತಿದ್ದಾರೆ. ಗ್ರಹಗಳ ಚಲನೆ ಮಾನವರ ಬದುಕಿಗೆ ಹೇಗೆ ಪ್ರಭಾವಿಸುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಶ್ರೀ ಸುಧಾಕರ ಬನ್ನಂಜೆ ಅವರು ಕನ್ನಡ ಭಾಷೆಯ ಸ್ವಯಂ ಕಲಿತ ಜ್ಯೋತಿಷ್ಯರಲ್ಲಿ ಒಬ್ಬರು. ಶ್ರೀ ಸುಧಾಕರ ಬನ್ನಂಜೆಯವರನ್ನು ವೈಯಕ್ತಿಕವಾಗಿ ಸಂಪರ್ಕಿಸಲು ವಿಡಿಯೋದಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
Disclaimer:
Prachala Media House and Jyotirmarga does not guarantee the accuracy or reliability of any of the information, content or advertisements contained in, resulting from, or linked to this Jyotirmarga Youtube Channel. Thank you.
About Jyotirmarga:
@Jyotirmarga is one of the leading, growing Spiritual and Astrology Kannada YouTube Channel designed to deliver Only General, positive, scientific astrological advices, suggestions and remedial solutions pertaining to various aspects planets effects on people life, including finance, career, relationships, health, marriage, and so on.
If anyone need personalised and accurate predictions based on his/her Janma kundali he can contact by calling the phone number displayed on the screen during the prediction video.
ಜ್ಯೋತಿರ್ಮಾರ್ಗ, ನೋಡಿ, Like ಮಾಡಿ ಹಾಗೆಯೆ ಮರೆಯದೆ SUBSCRIBE ಆಗಿ: https://www.youtube.com/@jyotirmarga?...
Facebook: / jyotirmarga
Instagram: / prachalamediahouse
Tumblr: https://www.tumblr.com/prachalamediah...
Twitter: / prachalamedia
linkedin: / prachala-mediahouse-822223262
#Jyotirmarga #prachalamediahouse #sudhakarbannanje #kannadaastrology #astrologykannada #Bhavishyavani #ಶ್ರೀಸುಧಾಕರಬನ್ನಂಜೆ #ಭವಿಷ್ಯ #ಜ್ಯೋತಿಷ್ಯ
Повторяем попытку...
Доступные форматы для скачивания:
Скачать видео
-
Информация по загрузке: