TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ
Автор: SRI PUTHIGE MATHA UDUPI
Загружено: 2025-03-15
Просмотров: 196653
Описание:
ಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ
ಇತ್ತೀಚಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇಂದ್ರದ ಜನಪ್ರಿಯ ಯುವ ಶಾಸಕ , ಶ್ರೀ ತೇಜಸ್ವಿ ಸೂರ್ಯ ರವರು ತಮ್ಮ ಹೆಂಡತಿ ಶ್ರೀಮತಿ ಶಿವಶ್ರೀ ಯವರೊಡನೆ ಕುಟುಂಬಸಮೇತರಾಗಿ ಉಡುಪಿ ಗೆ ಆಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ರ ದರ್ಶನ ಪಡೆದುಕೊಂಡರು.
ಸಾಯಂಕಾಲ ಆಗಮಿಸಿದ ತೇಜಸ್ವಿಯವರನ್ನು, ಶ್ರೀಮಠದ ಅಧಿಕಾರಿಗಳು ಸ್ವಾಗತಿಸಿದರು.
ತದನಂತರ ಪೂಜ್ಯ ಪರ್ಯಾಯ ಶ್ರೀ ಪಾದರಿಂದ ಆಶೀರ್ವಾದ ವನ್ನು ಪಡೆದುಕೊಂಡರು.
ಪೂಜ್ಯ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣನ ರಥೋತ್ಸವ ದಲ್ಲಿ ಪಾಲ್ಗೊಂಡು ನೆರೆದ ಭಕ್ತ ಜನರೊಡನೆ ಬ್ರಹ್ಮ ರಥವನ್ನು ಎಳೆದು ಸಂಭ್ರಮಿಸಿದರು.
ತೊಟ್ಟಿಲ ಪೂಜೆಯ ಸಂದರ್ಭದಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಶ್ರೀಮತಿ ಶಿವಶ್ರೀ ತೇಜಸ್ವಿಯವರು ಸುಶ್ರಾವ್ಯವಾಗಿ ನಾಮಸಂಕೀರ್ತನೆಯನ್ನು ಮಾಡಿದರು. ತೇಜಸ್ವಿಯವರು ಕ್ರಮಬದ್ಧವಾಗಿ ವೇದಘೋಷ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯಶ್ರೀಪಾದರು ಯುವ ಜನತೆಗೆ ತೇಜಸ್ವಿಯವರು ಸ್ಫೂರ್ತಿದಾಯಕರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಗುರು ಹಿರಿಯರ ಆಶೀರ್ವಾದ ಮತ್ತು ದೇವಬಲದಿಂದ ಇದು ಲಭಿಸಿದೆ,
ಶ್ರೀಕೃಷ್ಣಮುಖ್ಯಪ್ರಾಣರ ಆಶೀರ್ವಾದದಿಂದ ಇವರ ನಾಯಕತ್ವದಲ್ಲಿ ಅನೇಕ ಸತ್ಕಾರ್ಯಗಳು ನಡೆಯಲಿ, ಎಂದು ದಂಪತಿಗಳನ್ನು ಹರಸಿ ಅನುಗ್ರಹಿಸಿದರು.
ಜೊತೆಗೆ ಆಗಮಿಸಿದ್ದ ತೇಜಸ್ವಿಯವರ ಚಿಕ್ಕಪ್ಪನವರಾದ ಬೆಂಗಳೂರಿನ ಬಸವನ ಗುಡಿಯ ಜನಪ್ರಿಯ ಶಾಸಕ ಶ್ರೀ ರವಿ ಸುಬ್ರಹ್ಮಣ್ಯಂರವರನ್ನೂ ಪೂಜ್ಯ ಪರ್ಯಾಯ ಶ್ರೀಪಾದರು ಅನುಗ್ರಹಿಸಿದರು.
ಶಾಸಕರಾದಿಯಾಗಿ ಎಲ್ಲರೂ ಶ್ರೀಕೃಷ್ಣ ಪ್ರಸಾದವನ್ನು ಸ್ವೀಕರಿಸಿದರು.
Повторяем попытку...
Доступные форматы для скачивания:
Скачать видео
-
Информация по загрузке: