4ನೇ ತರಗತಿಯಲ್ಲೇ ಲಿರಿಕ್ಸ್ ಬರಿಯೋ ಅಭ್ಯಾಸ..! Gururaj Hosakote | RangaStala| Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-09-04
Просмотров: 1628
Описание:
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ರಂಗಸ್ಥಳ’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸಂದರ್ಶನ ಮಾಡಲಾಗುತ್ತದೆ. ಈ ಸಂಚಿಕೆಯ ಅತಿಥಿ ಜನಪದ ಕಲಾವಿದ ಗುರುರಾಜ ಹೊಸಕೋಟೆಯವರು.
ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು ಇವರು ಬರೆದ ಗೀತೆಗಳು ಸಾವಿರಾರು.
ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು 50 ಸಿನಿಮಾಗಳಲ್ಲಿ ನಟನೆ ಮಾಡುವುದರ ಜೊತೆಗೆ ಹಾಡಿನಲ್ಲೂ ಕೂಡ ಪ್ರಸಿಧ್ಧಿಯಾದರು.
ರಂಗಭೂಮಿ,ಜಾನಪದ ಹಾಡುಗಾರಿಕೆ,ನಟನೆಯಲ್ಲೂ ಸೈ ಎನಿಸಿಕೊಂಡಿರು ಕರುನಾಡಿನ ಮೇರು ಕಲಾವಿದ ಗುರುರಾಜ ಹೊಸಕೋಟೆಯವ್ರ ವಿಶೇಷ ಸಂದರ್ಶನ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ ನಿಮಗಾಗಿ.
#newsonewsu #harishnagaraju #anchorharishnagaraju #harikathe #podcast #podcaster #kannadapodcast #gururajhosakote #folksong #folkmusic #folklore #folksongs #rangastala #theatre #theatrearts #theatreartist #uttarakarnataka #uttarakarnatakasongs #jawarisongs #uttarakarnatakajanapada #janapada #janapada_geete #janapadasongs #janapada_geethegalu #janapada_songs_kannada #janapada_geethegalu_video_song_kannada #janapada_song #janapada_geethegalu_video #janapada_songs_kannada #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Повторяем попытку...
Доступные форматы для скачивания:
Скачать видео
-
Информация по загрузке: