#Bahubali
Автор: Nirvan Path
Загружено: 2025-10-10
Просмотров: 3376
Описание:
ಬಾಹುಬಲಿ ಸ್ವಾಮಿ ಜಗಕೆಲ್ಲ ಸ್ವಾಮಿ |
ಶಾಂತಿಯ ಮೂರುತೀಯೇ, ನಮಿಪೆವು ಅನುದಿನವೂ,
ನಮಿಪೆವು ಅನುದಿನವೂ || ಪ ||
ಆದಿನಾಥ ಕುವರ ? ಭರತನ ಸೋದರ
ಸೋದರನ ಗೆದ್ದೆಯಲ್ಲಾ, ರಾಜ್ಯವನ್ನೆ ಕೊಟ್ಟೆಯಲ್ಲಾ ?
ರಾಜ್ಯವನ್ನೆ ಕೊಟ್ಟೆಯಲ್ಲಾ || ೧ ||
ನೋಡೆ ನೀ ಕಿರಿಯವ, ಆದೆ ನೀ ಹಿರಿಯವ
ವಿವೇಕ ನಿನ್ನದಾಗಿ, ತಾಳ್ಮೆಯ ಬಾಳಾಗಿ | ತಾಳ್ಮೆಯ ಬಾಳಾಗಿ || ೨ ||
ಶಾಂತಿಯ ವದನ, ಕಾಂತಿಯ ನಿಲವು
ವಿಶ್ವಕೆ ಆದರ್ಶ, ನಿಮ್ಮಯ ದರ್ಶನವು | ನಿಮ್ಮಯ ದರ್ಶನವೂ || ೩ ||
ಬೆಳಗೊಳ ರಾಜ ಅಗಣಿತ ತೇಜಾ,
ಅರಳಿದ ಬಿಳಿಕಮಲ, ನಿಮ್ಮಯ ಪದಯುಗಲ | ನಿಮ್ಮಯ ಪದಯುಗಲ || ೪ ||
ಸುನಂದಾ ದೇವಿಯ ಗರ್ಭದಿ ಜನಿಸಿ
ಕೀರ್ತಿಯ ತಂದಿಹೆಯಾ, ಇಡಿಯ ಪ್ರಪಂಚದೊಳು |
ಇಡಿಯ ಪ್ರಪಂಚದೊಳು || ೫ ||
Повторяем попытку...
Доступные форматы для скачивания:
Скачать видео
-
Информация по загрузке: