ಮಕರ ಜ್ಯೋತಿ ಕಣ್ತುಂಬಿಕೊಂಡ ಲಕ್ಷ್ಮೇಶ್ವರದ ಅಯ್ಯಪ್ಪ ಮಾಲಾಧಾರಿಗಳು.
Автор: Mukta Mansu News MM9
Загружено: 2026-01-16
Просмотров: 7
Описание:
Mukta Manasu News MM9 Digital Channel.
ಮಕರ ಜ್ಯೋತಿ ಕಣ್ತುಂಬಿಕೊಂಡ ಲಕ್ಷ್ಮೇಶ್ವರದ ಅಯ್ಯಪ್ಪ ಮಾಲಾಧಾರಿಗಳು
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಒಣಿ ಹುಲಗೇರಿ ಬಣದ ತತ್ವಮಸಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ವತಿಯಿಂದ ಇಲ್ಲಿನ ಮಾಲಾಧಾರಿಗಳು ಕೇರಳ ರಾಜ್ಯದಲ್ಲಿರುವ ಶಭರಿಮಲೈ ದೇವಸ್ಥಾನಕ್ಕೆ ತೆರಳುವ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ತಲೆಯ ಮೇಲೆ ಇರಮುಡಿ ಹೊತ್ತು "ಸ್ವಾಮಿಯೆ ಶರಣಮ್ ಅಯ್ಯಪ್ಪ" ಎನ್ನುತ್ತ ದೇವರನ್ನು ಸ್ಮರಿಸುತ್ತ ಕಾಲು ನಡುಗೆಯ ಮೂಲಕ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಶ್ರೀ ಅಯ್ಯಪ್ಪ ಸ್ವಾಮಿಯ ದೇಗುಲ ಹಾಗೂ ಸನ್ನಿಧಾನ ತಲುಪಿದರು.
ತದನಂತರ ಶ್ರದ್ದಾ ಭಕ್ತಿಯೊಂದಿಗೆ ಎಲ್ಲಾ ಭಕ್ತರು ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಹಾಗೂ ಆಶೀರ್ವಾದ ಪಡೆದುಕೊಳ್ಳುವ ಮೂಲಕ ದೇವರ ಕೃಫೆಗೆ ಪಾತ್ರರಾದರು.
ಮಕರ ಸಂಕ್ರಾಂತಿಯ ಪುಣ್ಯಕಾಲದ ಶುಭ ದಿನದಂದು ಪ್ರತೀ ವರ್ಷದಂತೆ ಈ ವರ್ಷವೂ ಸಹ ಸಮಸ್ತ ಎಲ್ಲಾ ಅಯ್ಯಪ್ಪ ಸ್ವಾಮಿ ಮಾಲೆಯ ಧರಿಸಿದ ಎಲ್ಲಾ ಲಕ್ಷಾಂತರ ಭಕ್ತಾಧಿಗಳು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪಟ್ಟಣದ ತತ್ವಮಸಿ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಸಮಸ್ತ ಮಾಲಾಧಾರಿಗಳು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಸೋಮಣ್ಣವರ
Повторяем попытку...
Доступные форматы для скачивания:
Скачать видео
-
Информация по загрузке: