Mandamatiyu Naanu...
Автор: Shanbhog Sisters
Загружено: 2019-06-03
Просмотров: 18038
Описание:
Purandara daasa daasavani...
ಉಗಾಭೋಗ
ಜಗವ ಸುತ್ತಿಹುದೆಲ್ಲ ನಿನ್ನ ಮಾಯೆಯಯ್ಯಾ
ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯಾ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಮೂರು ಜಗವು ನಿನ್ನೊಳಗೇ ನೀನು ಎನ್ನೊಳಗೆ
ಕರಿಯು ಕನ್ನಡಿಯಲ್ಲಿ ಅಡಗಿಪ್ಪ ತೆರನಂತೆ
ನೀ ಎನ್ನೊಳು ಅಡಗಿಹೆಯೋ ಪುರಂದರ ವಿಠಲ||
ಕೀರ್ತನೆ
ಮಂಡಮತಿಯು ನಾನು ಮದನಜನಕನು ನೀ ನು
ಕುಂದುಗಳ ಎಣಿಸದೆ ದಯಮಾಡಿ ಸಲಹೋ ಶ್ರೀನಿವಾಸ|| ಪ ||
ಪಾಪ ಕರ್ತನು ನಾನು ಪಾಪ ನಾಶಕ ನೀನು
ಕೋಪ ಮದ ಮತ್ಸರದ ಸುಳಿಯೆ ನಾನು
ಪಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪು ತಾಪಕೆ ಮರುಳು ಗೊಂಬೆ ನಾನು || ೧||
ಮಂದ ಭಾಗ್ಯನು ನಾನು ಇಂದಿರಾ ಪತಿ ನೀನು
ಹಿಂದು ಮುಂದಿನ ಸುದ್ದಿ ತಿಳಿಯದವ ನಾನು
ತಂದೆ ಶ್ರೀ ಪುರಂದರ ವಿಠಲ ರಾಯನೆ
ಎಂದೆಂದೂ ಭಕ್ತರನು ಸಲಹುವೆಯೋ ನೀನು || ೨||
Повторяем попытку...
Доступные форматы для скачивания:
Скачать видео
-
Информация по загрузке: