ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ - 2026 ನೇರ ಪ್ರಸಾರ
Автор: Gavimath Koppal Official
Загружено: 2026-01-05
Просмотров: 32514
Описание:
।। ಶ್ರೀ ಗವಿಸಿದ್ದೇಶ್ವರ ಪ್ರಸನ್ನ ||
ಸಾಯಂಕಾಲ 5:30 ಗಂಟೆಗೆ ಮಹಾಮಹಿಮ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಜರುಗಲಿದೆ. ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಲಿದ್ದಾರೆ. ಮಹಾರಥೋತ್ಸವ ನಂತರ ಶ್ರೀಮಠದ ಕೈಲಾಸ ಮಂಟಪದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಹಾಸಂಸ್ಥಾನ ಮಠದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ|| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಕಾಗಿನೆಲೆಯ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಕಾಖಂಡಕಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀಯೋಗಿಶ್ವರ ಮಹಾಸ್ವಾಮಿಗಳು ಉಪದೇಶಾಮೃತವನ್ನು ನೀಡಲಿದ್ದಾರೆ. ಶಿವಮೊಗ್ಗದ ಹಿಂದುಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಇವರಿಂದ ಸ್ವರಸಂಧ್ಯಾ ಜುಗಲ್ಬಂದಿ ಸಂಗೀತ ಕಾರ್ಯಕ್ರಮ ಹಾಗೂ ಗಂಗಾವತಿಯ ನರಸಿಂಹ ಜೋಶಿ ಇವರಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ ಇತರ ಪರಮಪೂಜ್ಯರು: ಜಾತ್ರಾ ಮಹೋತ್ಸವದಲ್ಲಿ ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಶ್ರೀಮನಿಪ್ರ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಶಾಖಾಶಿವಯೋಗ ಮಂದಿರದ ಶ್ರೀಮನಿಪ್ರ ಶಿವಬಸವಮಹಾಸ್ವಾಮಿಗಳು, ಬಿಜಕಲ್ ಶ್ರೀಮನಿಪ್ರ ಶಿವಲಿಂಗ ಮಹಾಸ್ವಾಮಿಗಳು, ಭಾಗ್ಯನಗರದ ಶ್ರೀ ಶಂಕರಮಠದ ಶ್ರೀ ಸದ್ಗುರು ಶಿವರಾಮ ಕೃಷ್ಣನಂದ ಸ್ವಾಮಿಗಳು, ಹೂವಿನಹಡಗಲಿ ಶಾಖಾ ಗವಿಮಠದ ಪೂಜ್ಯರಾದ ಶ್ರೀಮನಿಪ್ರ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತೇಶ್ವರಮಠದ ಶ್ರೀ ಷಬ್ರ ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಅಮಲಝರಿ-ಮೆಳ್ಳಿಗೇರಿಯ ಪರಮಪೂಜ್ಯ ಶ್ರೀ ಜ್ಞಾನಮಯಾನಂದ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: