ಕಾಂತಾಬಾರೆ ಬೂದಾಬಾರೆ ಕಟಿನ ಗರೋಡಿಡ್ ನಿಲೆ ಆಯೆರ್ ಧರ್ಮರಸು ಉಳ್ಳಾಯೆ 🙏
Автор: Thudardha bolpu
Загружено: 2026-01-03
Просмотров: 3357
Описание:
ಕಾಂತಾಬಾರೆ ಬೂದಾಬಾರೆ ಕಟಿನ ಗರೋಡಿಡ್ ನಿಲೆ ಆಯೆರ್ ಧರ್ಮರಸು ಉಳ್ಳಾಯೆ🙏#thudardhabolpu #temple
.....
#tulu #tulunad #tuluvlogs #saranthayagarodi #sasihithlu #story #garodi #vlog #mustwatch #youtubeindia #udupi #mangalore
In this video👇
ತುಳುನಾಡಿನ ಮೂಲ್ಕಿ ಒಂಬತ್ತು ಮಾಗಣೆಯಲ್ಲಿ ಸುಮಾರು 800 ವರುಷಗಳ ಹಿಂದೆ ಕಾರಣಿಕ ಮೆರೆದ ಅವಳಿ ವೀರರು ಕಾಂತಬಾರೆ ಬೂದಬಾರೆಯವರು ತಾವು ಕೈಯಾರೆ ನಿರ್ಮಿಸಿದ ಸಾರಾಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ದಾರಗೊಂಡು ಇದೀಗ ಪ್ರತಿಷ್ಠಾಪನೆಗೆ ಸಜ್ಜಾಗಿ ನಿಂತಿದೆ.
ಮುಲ್ಕಿ ವರಪಾಡಿ ಉಳ್ಳೋಡಿ ಬೀಡಿನ ಪುಲ್ಲ ಪೆರ್ಗಾಡ್ತಿಯಿಂದ ರಾತ್ರಿ ಬೆಳಗಾಗುವುದರ ಒಳಗೆ ಅಂಗಸಾಧನೆಗಾಗಿ ಗರೋಡಿ ಕಟ್ಟುವೆವು ಎಂದು ಮಾತು ಕೊಟ್ಟ ಮೂಲ್ಕಿ ಸೀಮೆಯ ಅರಸರಿಂದ ಅನುಮತಿ ಪಡೆದು ಅಂದು ಬಾರೆಯರು ನಿರ್ಮಿಸಿದ ಗರೋಡಿ ಇದು. ಈ ಕ್ಷೇತ್ರದ ಕಥೆ ಅತ್ಯಂತ ರೋಚಕ ಗರೋಡಿಗೆ ಸಾರಲೆಂದು ಹಾಸುಗಲನ್ನು ನಂದಿನಿ ನದಿಯಲ್ಲಿ ತರುವಾಗ ಹೊಯ್ಗೆ ಗುಡ್ಡೆಯ ಗೌರಿದೇವಿ ನಸುಕಿನ ಮೊದಲೇ ಕೋಳಿಯಾಗಿ ಕೂಗಿದರಂತೆ. ಬೆಳಗಾಗು ದರೋಳಗೆ ಗರೋಡಿ ಕಟ್ಟುವ ತಮ್ಮ ವಾಗ್ದಾನ ತಪ್ಪಿತೆಂದು ಆತುರಕ್ಕೆ ಒಳಗಾದ ಬಾರೆಯರು ಅವಸರದಲ್ಲಿದ್ದಾಗ ಒಂದು ಕಲ್ಲು ನದಿಗೆ ಬೀಳುತ್ತದೆಯಂತೆ ಆ ಜಾಗ ಇಂದು ಬಬ್ಬು ಗುಂಡಿಯಂದು ಪ್ರಸಿದ್ಧವಾಗಿದೆ .ಉಳಿದ ಮೂರು ಕಲ್ಲುಗಳು ಗರೋಡಿಯಲ್ಲಿ ಇಂದಿಗೂ ಸ್ಮಾರಕವಾಗಿದ್ದು ಇಂತಹ ಪವಾಡ ಪುರುಷರು ನಮ್ಮ ಕ್ಷೇತ್ರದ ನಿರ್ಮಾತೃಗಳೆಂಬುದು ನಮಗೆ ಹೆಮ್ಮೆ. ಬಾರೆಯರ ಗರೋಡಿ ಕಟ್ಟಿ ಮುಗಿಸುವಾಗ ಭಗವಂತ ಈಶ್ವರ ಕಿರಾತ ರೂಪದ ಉಳ್ಳಾಯನಾಗಿ ಕ್ಷೇತ್ರಕ್ಕೆ ಬಂದಾಗ ಉಳ್ಳಾಯ ಬಂದಮೇಲೆ ನಮಗೇನು ಕೆಲಸ ಎಂದು ಭಾವಿಸಿದ ಬಾರೆಯರು ಗರೋಡಿಯ ಪಶ್ಚಿಮ ದಿಕ್ಕಿನಲ್ಲಿ ತೆರಳಿದರಂತೆ .
ಈ ಸಂದರ್ಭ ಸಸಿಹಿತ್ಲು ಕಾಂತುಲಕಣ ಗಡಿ ಪ್ರಧಾನರ ಮನೆಯ ಜುಮಾದಿ ಜಾರಂದಾಯ ಕೊಡಮಣಿ ತಾಯ ಶಕ್ತಿಯೊಂದಿಗೆ ದೊಡ್ಡ ಮನೆ ತೋಚೋಡಿ ಕುಟುಂಬದ ಓಡಮ್ ತಾಯ ದೈವವೂ ಕೂಡ ಗರೋಡಿಗೆ ಪ್ರವೇಶಿಸಲಾಗಿ ಉಳ್ಳಾಯ ಈ ಕ್ಷೇತ್ರದ ಆಗುಹೋಗುಗಳನ್ನು ನೀನು ನೋಡಿಕೋ. ನಾನು ಇಲ್ಲಿಯೇ ಕಣ್ಣಿಗೆ ಬೀಡಿನಲ್ಲಿ ನೆಲೆಯಾಗುತ್ತೇನೆ ಆದರೆ ನನ್ನ ಈ ಆದಿ ಕ್ಷೇತ್ರವು ವರ್ಷಂ ಪ್ರತಿ ಭಂಡಾರ ಬಂಧು ಇಲ್ಲಿನ ನೇಮವನ್ನು ನಡೆಸಿ ಕೊಡುತ್ತೇನೆ ಎಂದ ಮಾತಿನಲ್ಲಿ ಇಂದಿಗೂ ಇಲ್ಲಿನ ನೇಮೋತ್ಸವವು ಅದೇ ಪರಂಪರೆಯಲ್ಲಿ ನಡೆಯುತ್ತಿದೆ..
ಬಿಲ್ಲವರು ಬಂಟರು ಮೊಗವೀರ ಸಮಾಜ ಸೇರಿದಂತೆ ಎಲ್ಲಾ ಸಮಾಜಕ್ಕೆ ಪ್ರಾತಿನಿತ್ಯ ಕೊಟ್ಟ ಕ್ಷೇತ್ರ ನಮ್ಮದು..ನಂಬಿದವರಿಗೆ ಇಂಬು ಕೊಡುವ ಕ್ಷೇತ್ರದಲ್ಲಿ ಹಲವು ಪವಾಡಗಳು ನಡೆದಿದ್ದು ಈ ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂಬ ನಮ್ಮ ಆಶಯಕ್ಕೆ ಉಳ್ಳಾಯನ ಅಭಯ ಸಿಕ್ಕಿದೆ .ಜೋಳಿಗೆ ಹಿಡಿದುಕೊಂಡು ಮುಂದೆ ಹೋಗಿ ನಿಮ್ಮ ಹಿಂದೆ ನಾನಿದ್ದೇನೆ ಎಂಬ ಉಳ್ಳಾಯ ಪರಿವಾರ ಶಕ್ತಿಗಳ ಅಭಯದಂತೆ ಇಂದಿಗ ಕಾಲ ಕೂಡಿ ಬಂದಿದೆ..ನಾಲ್ಕು ಕರೆಯ ಸರ್ವ ಮನಸ್ಸುಗಳು ಒಂದಾಗಿವೆ . ಹನಿ ಗೂಡಿ ಹಳ್ಳ ಎಂಬಂತೆ ದಾನಿಗಳು ಹೃದಯಸ್ಪರ್ಶಿಯಾಗಿ ಸ್ಪಂದಿಸಿದ್ದು ಕಾರ್ಯಕರ್ತರಲ್ಲಿ ಉತ್ತೇಜನ ಮೂಡಿಸಿದೆ...
ಬಂಧುಗಳೇ 2026 ಫೆಬ್ರವರಿ ತಿಂಗಳ 4ರಿಂದ ಮೊದಲ್ಗೊಂಡು ಎಂಟರವರೆಗೆ ಪ್ರತಿಷ್ಠ ಬ್ರಹ್ಮ ಕಳಶೋತ್ಸವ ಮತ್ತು ಫೆಬ್ರವರಿ 9ರಂದು ಉಳ್ಳಾಯ ಮತ್ತು ಪರಿವಾರ ಶಕ್ತಿಗಳ ನೇಮೋತ್ಸವ ನಡೆದು ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮ ವಿಭಿನ್ನ ಕಾರ್ಯಕ್ರಮಗಳಿಗೆ ಸಂಸಾರ ಪರಿವಾರ ಸಮೇತ ಆಗಮಿಸಿ .🙏
For Promotion and Videos please 👇
🔗 Add me on Facebook 👉 / priyanka.kotian.16
🔗 Follow me on Instagram 👉 / priyanka_thudardhabolpu
🔗 Click on the link and Watch more videos on my youtube channel Thudardha Bolpu 👉 / @thudardhabolpu
Thank you 🙏😍
Thudardha bolpu
Повторяем попытку...
Доступные форматы для скачивания:
Скачать видео
-
Информация по загрузке: