#ರೆಡ್
Автор: VIRAL GLOBAL INFO
Загружено: 2025-08-13
Просмотров: 334
Описание:
ATM ಕಿಯೋಸ್ಕ್ ಮುರಿದು ಹಣ ಕದಿಯುತ್ತಿದ್ದ ಕಳ್ಳನ ಬಂಧನ
#like #news #newsong #motivation #viralvideos #facts #funny #funnyshorts #funnyvideo #memes #history
ಬಳ್ಳಾರಿಯಲ್ಲಿ ಎಟಿಎಂ ಕಿಯೋಸ್ಕ್ ಮುರಿದು ಹಣ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ನಗರದ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ರಾತ್ರಿ ಬೀಟ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಮಲ್ಲಿಕಾರ್ಜುನ್ ಅವರಿಗೆ ಎಟಿಎಂನಲ್ಲಿ ಕಳ್ಳನ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿದ್ದು, ಕೂಡಲೇ ಎಎಸ್‌ಐ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಎಟಿಎಂಗೆ ಧಾವಿಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಆಂಧ್ರ ಪ್ರದೇಶದ ಅನಂತಪುರದ ವೆಂಕಟೇಶ ಎಂದು ಗುರುತಿಸಲಾಗಿದೆ. ಪೊಲೀಸ್ ಕಾರ್ಯಾಚರಣೆಯ ರೋಚಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆರೋಪಿ ವೆಂಕಟೇಶ ಎಟಿಎಂ ಕಿಯೋಸ್ಕ್ ಹೊತ್ತೊಯ್ಯಲು ಯತ್ನಿಸಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಎಎಸ್‌ಐ ಮಲ್ಲಿಕಾರ್ಜುನ ಖದೀಮನನ್ನು ಬಂಧಿಸಲು ಯತ್ನಿಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಇಬ್ಬರ ನಡುವೆ ತೀವ್ರ ಜಟಾಪಟಿಯಾಗಿದೆ. ಅಷ್ಟರಲ್ಲಿ ರಾತ್ರಿ ಬೀಟ್ನ ಮತ್ತೊಬ್ಬ ಕಾನ್ಸ್ಟೇಬಲ್ ನಿಂಗಪ್ಪ ಎಎಸ್‌ಐ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಆರೋಪಿಯನ್ನು ಥಳಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ .
Повторяем попытку...
Доступные форматы для скачивания:
Скачать видео
-
Информация по загрузке: