Kavanapura Basavanna | ಕವಣಾಪುರ ಬಸವಣ್ಣ | Ramanagara | ಪವಾಡಗಳನ್ನ ಸೃಷ್ಟಿಸುತ್ತಿರೋ ಬಸವ | Kuppuru Gaddige
Автор: ಎಂಎಂ ಕನ್ನಡಿಗ MM KANNADIGA
Загружено: 2021-11-17
Просмотров: 76432
Описание:
#ಸತ್ತಮೇಲೂ_ಬದುಕಬಹುದು..👇
ಹೇಗೆ ಎನ್ನುವ ಕುತೂಹಲವೇ 10 ನಿಮಿಷ ಮೌನವಾಗಿ ಈ ಕೆಳಗಿನ ವಿಡಿಯೋ ಒಮ್ಮೆ ಸೂಕ್ಷ್ಮವಾಗಿ ನೋಡಿ..
ಶ್ರೀ ಕ್ಷೇತ್ರ ಕುಪ್ಪೂರು ಗದ್ದುಗೆಯ ಶ್ರೀ ಯತೀಶ್ವರ ಶಿವಾಚಾರ್ಯ ಶ್ರೀಗಳು ಕಳೆದ ಕೆಲ ತಿಂಗಳ ಹಿಂದೆ ಲಿಂಗೈಕ್ಯರಾದ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಆದರೆ ಕವಣಾಪುರ ಬಸವಣ್ಣ ಎಂದರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ ಕಾಳಜಿ .. ಬಸವಣ್ಣನಿಗೂ ಅಷ್ಟೇ ಗುರುಗಳೆಂದರೆ ಅಷ್ಟೆ ಪ್ರೀತಿ ಮತ್ತು ಗೌರವ.. ಆದರೆ ವಿಧಿ ಆಟ ಆದಷ್ಟು ಬೇಗ ಶ್ರೀಗಳು ನಮ್ಮನ್ನು ಬಿಟ್ಟು ಅಗಲಿದರು... ಆದರೆ ಅಂದು ಕಾರ್ಯಕ್ರಮಗಳ ಒತ್ತಡ ಶ್ರೀಗಳ ಕೊನೆಯ ದರ್ಶನ ಪಡೆಯಲು ಬಸಪ್ಪನಿಗೆ ಸಾಧ್ಯವಾಗಿರಲಿಲ್ಲ..
ಶ್ರೀಗಳ ನಿಧನದ ಕೆಲ ದಿನಗಳ ನಂತರ ಕ್ಷೇತ್ರಕ್ಕೆ ಭೇಟಿಕೊಟ್ಟ ಬಸಪ್ಪ ಅಂದು ಎಲ್ಲರ ಕಣ್ಣಲ್ಲೂ ನೋವಿನ ಕಣ್ಣೀರು ಬರುವಂತೆ ಮಾಡಿಬಿಟ್ಟಿತು..
ನಿಜ ಒಬ್ಬ ಮನುಷ್ಯ ಸತ್ತಮೇಲೂ ಜೀವಂತವಾಗಿ ಇರಲು ಆತನು ಮಾಡುವ ಧರ್ಮ ಕಾರ್ಯಗಳು..
ನಿಸ್ವಾರ್ಥ ಜೀವನ.. ಸರಳತೆಯ ಬದುಕಿನಿಂದ ಮಾತ್ರ ಸಾದ್ಯ .. ಅದು ಎಂದಿಗೂ ಭಗವಂತನಿಗೂ ಪ್ರಿಯವಾಗುತ್ತದೆ ಎನ್ನುವ ಸತ್ಯದ ಅರಿವು ಮೂಡಿಸಿತು ಆ ದೃಶ್ಯ.
ಹೌದು ಬದುಕಿನಲ್ಲಿ ಯಾರನ್ನು ಮೆಚ್ಚಿಸಿ ಬದುಕುವ ಅಗತ್ಯವಿಲ್ಲ.. ಭಗವಂತ ಮೆಚ್ಚುವಂತೆ ಬದುಕಿದರೆ ಸಾಕು.. ತಮ್ಮ ಅಗತ್ಯಕ್ಕೆ ತಕ್ಕಂತೆ ಬದುಕಿದರೆ ಒಳ್ಳೆಯವರು.. ತಮ್ಮ ವಿರುದ್ದವಾಗಿ ಬದುಕಿದರೆ ಕೆಟ್ಟವರು ಎಂದು ನಿರ್ಧರಿಸುವ ಜನಗಳ ಮದ್ಯೆ
ಭಗವಂತ ಕೊಟ್ಟ ಕಾಯಕ ಅವನು ಮೆಚ್ಚುವಂತೆ ಮಾಡಿ ಅವನು ಕರೆದಾಗ ನೆಮ್ಮದಿಯಿಂದ ಹೋಗಿ ಅವನು ನಮ್ಮನು ಮೆಚ್ಚುವಂತೆ ಬದುಕಬೇಕು ಎಂಬ ಸೂಕ್ಷ್ಮ ವಿಷಯದ ಅರಿವು ಮೂಡಿಸಿದ್ದು ಶ್ರೀಗಳು..
ಎಂದಿಗೂ ತೋರಿಕೆ ಇರಲಿಲ್ಲ.. ಯಾರನ್ನು ಮೆಚ್ಚಿಸಲು ಬದುಕಲಿಲ್ಲ... ಭಗವಂತ ಕೊಟ್ಟ ಕಾಯಕ ನಿಸ್ವಾರ್ಥದಿಂದ ಮಾಡಿ ಹೊರಟ ಕಾಯಕ ಯೋಗಿಯನ್ನು ನೆನೆದು ಬಸಪ್ಪ ಕಣ್ಣಿರಿಟ್ಟಿತು..
ಯಾರು ಏನೇ ಹೇಳಿದರೂ ಎಲ್ಲವನ್ನೂ ಅಳೆಯಲು ಮೇಲೊಬ್ಬನಿದ್ದಾನೆ ಅವನ ಮುಂದೆ ನಮ್ಮ ಯೋಗ್ಯತೆ ಒಂದೇ ಉಳಿಯುವುದು.. 🙏
ಕ್ಷೇತ್ರಕ್ಕೆ ಬಂದ ಬಸಪ್ಪ ಶ್ರೀಗಳನ್ನು ಎಲ್ಲಾಕಡೆ ಹುಡುಕ ತೊಡಗಿತು ಎಷ್ಟು ಹುಡುಕಿದರೂ ಶ್ರೀಗಳು ಕಾಣದಾಗ ಅವರು ನಿತ್ಯ ಕೂತು ಭಕ್ತರಿಗೆ ದರ್ಶನ ನೀಡುತ್ತಿದ್ದ ಪೀಠದ ಬಳಿ ಬಂದು ಅವರಿಲ್ಲದ್ದನ್ನು ಅರಿತು ನೋವಿನಲ್ಲೇ ಅವರ ಭಾವಚಿತ್ರದ ಮುಂದೆ ಮಲಗಿ ಬಿಟ್ಟಿತು ನಂತರ ಅವರು ಐಕ್ಯವಾದ ಗದ್ದುಗೆಯ ಬಳಿ ಹೊರಟ ಬಸಪ್ಪ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಶ್ರೀಗಳ ಭಾವಚಿತ್ರಕ್ಕೆ ಆಕಿದ ಪುಷ್ಪಮಾಲೆ ತಾನೇ ಪುನಃ ಧರಿಸಿಕೊಂಡು ಶ್ರೀಗಳು ಬಳಸುತ್ತಿದ್ದ ರುದ್ರಾಕ್ಷಿ ಮಾಲೆ ಪಡೆದುಕೊಂಡು ಅವರ ಆಶೀರ್ವಾದ ಪಡೆದ ಕ್ಷಣ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತು..
ಯಾರು ಜೊತೆಗಿರಲಿ ಬಿಡಲಿ ಸತ್ಯ ಧರ್ಮ ನಮ್ಮ ಜೀವನದಲ್ಲಿ ಇದ್ದರೆ ಸಾವಿನ ನಂತರವೂ ಭಗವಂತ ನಮ್ಮ ಜೊತೆಗೆ ಇರುತ್ತಾನೆ ಎನ್ನುವ ನಿದರ್ಶನ ಈ ಘಟನೆ..🙏🙏🙏🙏
🙏🙏💐💐#ಕವಣಾಪುರ_ಬಸವಣ್ಣ💐💐🙏🙏
.#kavanapura
#kavanapura_basavanna
#BOSS
#KAVANAPURA_BASAVANNA_DHARMAKSHETRA #ಕವಣಾಪುರ_ಬಸವಣ್ಣ
ಶ್ರೀ ಕ್ಷೇತ್ರದ ಲೊಕೇಶನ್ ಲಿಂಕ್:
Sri Basaveshwara Temple
https://maps.app.goo.gl/yjtdKhcr3Nz8V...
ಕುಪ್ಪೂರು ಶ್ರೀ ಗದ್ದಿಗೆ ಮಠದ ಲೊಕೇಶನ್ ಲಿಂಕ್ :
Kuppuru gadduge mutt
https://maps.app.goo.gl/9DaG3gf4SRdWV...
ಇಂತಹ ವೈಶಿಷ್ಟ್ಯಗಳನ್ನು ಹೊಂದಿರೋ ಶ್ರೀ ಕ್ಷೇತ್ರಗಳು ನಮ್ಮ ರಾಜ್ಯದಲ್ಲಲ್ಲದೇ ಬೇರೆಲ್ಲೂ ಕಾಣ ಸಿಗದು....
🙏🙏🙏🚩🚩🚩
Follow me on Instagram.
https://www.instagram.com/sindhudhar_...
Follow me on Facebook.
/ ಸಿಂಧೂಧರ್-ಹೊಸಕೆರೆ-102732424744917
Subscribe and support to my channel
/ @mmkannadiga
/ @mmkannadiga
My Gmail Id.
[email protected]
Повторяем попытку...
Доступные форматы для скачивания:
Скачать видео
-
Информация по загрузке: