ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ
Автор: Awaaz Samvidhan
Загружено: 2025-12-06
Просмотров: 411
Описание:
ಯಾದಗಿರಿಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ
ಯಾದಗಿರಿ: ಯಾದಗಿರಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹೆರಿಗೆ ವೇಳೆ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿರುವ ಪ್ರಕರಣ ಜಿಲ್ಲೆಯಲ್ಲಿ ಆಕ್ರೋಶ ಹುಟ್ಟಿಸಿದೆ. ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡಾದ ನಿವಾಸಿ ನೀಲಾಬಾಯಿ ನಿನ್ನೆ ಬೆಳಗ್ಗೆ ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ, ಸಿಬ್ಬಂದಿ ಬೆಡ್ ಕೊಡದೆ ಇಡೀ ದಿನ ನೆಲದಲ್ಲೇ ಮಲಗಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾತ್ರಿಯಿಡೀ ನೋವಿನಿಂದ ಬಳಲಿದ ಬಳಿಕ ಬೆಳಗ್ಗೆ 5 ಗಂಟೆಗೆ ವೈದ್ಯರು ತುರ್ತುವಾಗಿ ಸಿಜೇರಿಯನ್ ನಡೆಸಿದರೂ ಮಗು ಸಾವನ್ನಪ್ಪಿದೆ. “ನಾರ್ಮಲ್ ಆಗುತ್ತೆ” ಎಂದು ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
#ಕನ್ನಡನ್ಯೂಸ್ #yadgirnews #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ
Повторяем попытку...
Доступные форматы для скачивания:
Скачать видео
-
Информация по загрузке: