Jnanavikasa | ಜ್ಞಾನವಿಕಾಸ | ಶ್ರೀಮತಿ ಹೇಮಾವತಿ ವಿ ಹೆಗ್ಗಡೆ
Автор: Jnanavikasa
Загружено: 2020-06-14
Просмотров: 121617
Описание:
ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಅಂದು ಗ್ರಾಮೀಣ ಮಹಿಳೆ ಒಂದರ್ಥದಲ್ಲಿ ಅಬಲೆಯೇ ಆಗಿದ್ದಳು. ಅವಳಲ್ಲಿದ್ದುದು ಅಳುಕು, ಅಂಜಿಕೆ, ಲಜ್ಜೆ ಎಲ್ಲಕ್ಕೂ ಮೇಲಾಗಿ ಅವಳು ಅಸಹಾಯಕಳೆಂಬ ಕೀಳರಿಮೆಯಿಂದ ಬೇಯುತ್ತಿದ್ದಳು. ಬೇರೆಯವರ ಮನೆ ಸೇರುವ ಅವಳ ಶಿಕ್ಷಣಕ್ಕೆ ನಾವೇಕೆ ಹಣಖರ್ಚು ಮಾಡಬೇಕು ಎಂಬ ನಿರ್ಲಿಪ್ತ ಭಾವದಲ್ಲಿ ಅವಳನ್ನು ಹೆತ್ತವರು ಕಲಿಕೆಯಿಂದ ವಂಚಿತಳನ್ನಾಗಿ ಮಾಡಿದ್ದರು. ಮನೆ ಕೆಲಸ ಮಾಡಿ, ಬೀಡಿ ಕಟ್ಟಿ ಅವಳು ಸಂಸಾರದ ನೊಗಕ್ಕೂ ಹೆಗಲು ಕೊಡಬೇಕಿತ್ತು. ಬದುಕು ಬೆಳಗುವ ದಾರಿ ತೋರಬೇಕಾದ ಹೆತ್ತವರೇ ನಡಿಗೆಯ ದಾರಿಯನ್ನು ಮುಚ್ಚಿಬಿಟ್ಟರೆ ಆತ್ಮವಿಶ್ವಾಸ ಮಾಯವಾಗದೆ ಇನ್ನೇನಾದೀತು? ಮನೆಗೆ ಯಾರಾದರೂ ಅಪರಿಚಿತರು ಬಂದರೆ ಅವಳು ಅವರನ್ನು ಮಾತನಾಡಿಸುವ ವಿಧಾನ ತಿಳಿಯದೆ ಹೊರಗೆ ಬರಲೂ ಅಂಜುತ್ತಿದ್ದಳು. ಅವಳಲ್ಲೂ ಪ್ರತಿಭೆ ಇತ್ತು. ನಾಯಕತ್ವ ಗುಣವಿತ್ತು. ಆರ್ಥಿಕ ಲೆಕ್ಕಾಚಾರ ಸರಿದೂಗಿಸಬಲ್ಲ ಬೌದ್ಧಿಕ ಸಾಮಥ್ರ್ಯವೂ ಕಡಮೆಯಿರಲಿಲ್ಲ. ಆದರೆ ಅವಳ ಕ್ಷಮತೆಯನ್ನು ಹತ್ತಿಕ್ಕಿ ಮದುವೆ ಮಾಡಿ ಸಣ್ಣ ಪ್ರಾಯದಲ್ಲಿ ಕೌಟುಂಬಿಕ ಬಂಧನಕ್ಕೆ ಒಳಪಡಿಸುತ್ತಿದ್ದ ಸಂದರ್ಭಗಳೇ ಹೆಚ್ಚು. ಇಂಥ ಹೆಣ್ಣು ಅಮಾಯಕಳೆನಿಸಿಕೊಂಡಳು. ವ್ಯವಹಾರ ಕೌಶಲದಿಂದ ವಂಚಿತಳಾದಳು. ಜಗತ್ತು ಬದಲಾಗುತ್ತಿರುವ ವಿಸ್ಮಯ ಅವಳ ಮನದ ಮುಚ್ಚಿದ ಕದದ ಬೀಗ ತೆರೆಯಲಿಲ್ಲ. ಹೀಗಿರುವ ಸಹಸ್ರ ಸಹಸ್ರ ಹೆಣ್ಣುಮಕ್ಕಳ ಬದುಕಿನಲ್ಲಿ ಶುಭೋದಯದ ಕಿರಣವನ್ನು ಮೂಡಿಸಬಲ್ಲ ವೈಚಾರಿಕ ಶಕ್ತಿಯ ಬೆಳಕೇ `ಜ್ಞಾನವಿಕಾಸ'ದ ಜ್ಯೋತಿಯಾಗಿ ಬೆಳಗಿತು. `ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂಬಂತೆ ಜ್ಞಾನವಿಕಾಸ ಕಾರ್ಯಕ್ರಮದ ಅನೇಕ ವಿಶಿಷ್ಟ ಕಾರ್ಯಕ್ರಮಗಳು ಮಹಿಳೆಯರ ಬದುಕಿನ ಅಜ್ಞಾನದ ಕತ್ತಲನ್ನು ನೀಗಿಸುವ ದಾರಿದೀಪವಾಯಿತು. ಇನ್ನಷ್ಟು ಸುಲಭವಾಗಿ ಮಹಿಳೆಯರನ್ನು ತಲುಪುವ ನಿಟ್ಟಿನಲ್ಲಿ ಜ್ಞಾನವಿಕಾಸದ ಹೊಸ ಹಂತವನ್ನು ನಾವು ಪ್ರಾರಂಬಿಸಿದ್ದೇವೆ. ಆ ಹೊಸ ಹಂತವೇ ಈ ಒಂದು Youtube ಚಾನೆಲ್.
ಮಾತೃಶ್ರೀ ಅಮ್ಮನವರು ತಮ್ಮ ಆರ್ಶೀರ್ವಾದಗಳನ್ನು ಈ ವಿಡಿಯೋದ ಮುಖೇನ ತಿಳಿಸಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: