ನುಗ್ಗೆ ಬೆಳೆಯಲ್ಲಿ ತಾಂತ್ರಿಕ ಬೇಸಾಯ ಕ್ರಮಗಳು । ನುಗ್ಗೆ ಕೃಷಿ । NUGGE KAYI Drumstick farming cultivation
Автор: Raitha Mahithi
Загружено: 2022-03-19
Просмотров: 212444
Описание:
ನುಗ್ಗೆ ಬೆಳೆಯುವುದು ಅತೀ ಕಷ್ಟದ ಕೆಲಸ ಅಲ್ಲವೇ ಅಲ್ಲ, ಕಡಿಮೆ ಶ್ರಮ, ಅತೀ ಕಡಿಮೆ ನಿರ್ವಹಣೆಯಿಂದ ಹೆಚ್ಚು ಲಾಭ ತಂದುಕೊಡುವ ನುಗ್ಗೆಯನ್ನು ತಮ್ಮ ಹೊಲಗದ್ದೆಗಳಲ್ಲಿ ಅಥವಾ ಪಾಳು ಬಿದ್ದರುವ ಜಮೀನುಗಳಲ್ಲಿ ಬೆಳೆಸಿದರೆ ಕೈತುಂಬ ಸಂಪಾದನೆ ನಿಶ್ಚಿತ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ......
ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು.
ಬೇರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿಯೂ ನುಗ್ಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲುದು. ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್ ಇಳುವರಿ ಗ್ಯಾರಂಟಿ.
ಮನೆಯ ಅಕ್ಕ-ಪಕ್ಕ ತೋಟ ಗದ್ದೆಗಳಲ್ಲಿಯ ಬೇಲಿಯ ಗುಂಟಗಳಲ್ಲಿ ಬೆಳಸಬಹುದು. ಅತ್ಯಂತ ಕನಿಷ್ಟ ವೆಚ್ಚದಲ್ಲಿ ಭಾರಿ ಲಾಭ ತಂದುಕೊಡುವ ಈ ನುಗ್ಗೆ ಮರ ಕಲ್ಪ ವಕ್ಷವಿದ್ದಂತೆ, ಇದರ ಯಾವ ಭಾಗವೂ ನಿರುಪಯುಕ್ತವಿಲ್ಲ. ಭೌಗೋಳಿಕವಾಗಿ ಯಾವ ಪ್ರದೇಶದಲ್ಲಿಯೂ ನುಗ್ಗೆ ಮರಗಳು ಹೇರಳವಾಗಿ ಬೆಳೆಯುತ್ತವೆ. ಅತಿ ಕಡಿಮೆ ತೇವಾಂಶದಲ್ಲಿಯೂ ಹುಲುಸಾಗಿ ಬೆಳೆಯುವ ಈ ಮರಗಳು ಪ್ರಕತಿಯ ಎಂತಹ ವೈಪರೀತ್ಯ ಸ್ವರೂಪಕ್ಕೂ ಜಗ್ಗದ ನುಗ್ಗೆ ಬೆಳೆ ಕ್ಷೀಣಗೊಳ್ಳುವುದಿಲ್ಲ
ನುಗ್ಗೆ ತಳಿಗಳು
೧ ಜಾಫ್ನಾ : ಗಿಡಗಳು 5 ಮೀ. ಎತ್ತರ ಬೆಳೆಯುತ್ತವೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಯುವ ತಳಿಯಾಗಿದೆ. ನುಗ್ಗೆಕಾಯಿಗಳು 60-90 ಸೆಂ. ಮೀ. ಉದ್ದವಾಗಿದ್ದು ಮೆತ್ತನೆಯ ತಿರುಳು ಹಾಗೂ ಒಳ್ಳೆಯ ರುಚಿಯನ್ನು ಹೊಂದಿದೆ.
೨ ಚವಕಚೇರಿ ಮುರುಂಗಾ : ಈ ತಳಿಯು ಜಾಫ್ನಾ ತಳಿಯ ಹೋಲಿಕೆ ಪಡೆದಿದ್ದು ನುಗ್ಗೆಕಾಯಿಗಳು 90-120 ಸೆಂ. ಮೀ. ಉದ್ದವಾಗಿರುತ್ತವೆ.
೩ ಜಿ.ಕೆ.ವಿ.ಕೆ. -1 : ಸುಮಾರು 250-3೦೦ ಕಾಯಿಗಳನ್ನು ಬಿಡುತ್ತದೆ. ಪ್ರತಿ ಕಾಯಿಯು 35-40 ̧ಸೆಂ. ಮೀ. ಉದ್ದವಿದ್ದು 40 ಗ್ರಾಂತೂಕವಿರುತ್ತದೆ. ಈ ತಳಿಯು ಅಧಿಕ ̧ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ.
೪ ಜಿ.ಕೆ.ವಿ.ಕೆ. -2 : ಗಿಡ್ಡಜಾತಿಯ ಫಲ ಭರಿತವಾದ ತಳಿ. ಒಂದು ವರ್ಷಕ್ಕೆ ಸುಮಾರು 300-400 ಕಾಯಿಗಳನ್ನು ಬಿಡುತ್ತದೆ.
೫ ಜಿ.ಕೆ.ವಿ.ಕೆ-3 : ಗಿಡ್ಡ ಜಾತಿಯ ತಳಿಯಾಗಿದೆ. ನುಗ್ಗೆಕಾಯಿಗಳು ತ್ರಿಕೋನಾಕಾರವಾಗಿದ್ದು, ಕಪ್ಪು ಮಿಶ್ರಿತ ಹಸಿರು ಬಣ್ಣದಿಂದಕೂಡಿರುತ್ತವೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ. ಒಂದು ವರ್ಷಕ್ಕೆ ಸುಮಾರು 250-300 ಕಾಯಿಗಳನ್ನು ಪ್ರತಿ ಗಿಡದಿಂದ ಪಡೆಯಬಹುದು.
೬ ಧನರಾಜ ( ಸೆಲೆಕ್ಷನ್ 6/4) : ಇದು ಗಿಡ್ಡ ತಳಿ, ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ, ಜಲಾನಯನ ಪ್ರದೇಶಗಳಲ್ಲಿ ಇಡೀ ಬೆಳೆಯಾಗಿ ಹಾಗೂ ಕೈತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ 9-10 ತಿಂಗಳುಗಳಲ್ಲಿ ಫಸಲು ಕೊಡುವುದು. ಎರಡು ವರ್ಷದ ಗಿಡ ಪ್ರತಿ ವರ್ಷ 250-300 ರವರೆಗೆ ಕಾಯಿ ಕೊಡುವುದು. ಕಾಯಿಗಳು 35-40 ̧ಸೆಂ. ಮೀ.ಉದ್ದವಿರುತ್ತವೆ.
೭. ಪಿ.ಕೆ.ಎಂ.-1 : ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಮೆತ್ತನೆಯ ತಿರುಳು ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ.
೮ ಭಾಗ್ಯ (ಕೆ.ಡಿ.ಎಮ್-01) : ಈ ತಳಿಯು ಮೂಲವಾಗಿ ಗಿಡ್ಡ ಜಾತಿಯದ್ದು. ಗಿಡದ ಎತ್ತರ 2-4 ಮೀ. ವರೆಗೆ ಬೆಳೆಯುವುದು.ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ (100-110 ದಿನಗಳು ನಾಟಿ ಮಾಡಿದ ನಂತರ) ಒಟ್ಟು ನಾಟಿ ಮಾಡಿದ 160-180 ದಿನಗಳನಂತರ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ತಳಿಯ ವೈಶಿಷ್ಟತೆ ಎಂದರೆ ಕಾಯಿಗಳು ಬಿಟ್ಟಾಗಲೂ ಸಹಿತ ಗೊಂಚಲುಗಳಲ್ಲಿ ಹೂ ಹಾಗೂ ಮಿಡಿಕಾಯಿಗಳು ನಿರಂತರವಾಗಿ ಬರುವುದರಿಂದ ವರ್ಷವಿಡೀ ಫಸಲ ತೆಗೆಯಬಹುದು. ಪ್ರತಿ ಕಾಯಿಯು 60-70 ಸೆಂ. ಮೀ.ಉದ್ದವಿದ್ದು, ಕಡುಹಸಿರು ಬಣ್ಣ ಹೊಂದಿ ದುಂಡಗೆ ಇರುವುದು. ಪ್ರಥಮ ವರ್ಷದಿಂದ 350-400 ಕಾಯಿಗಳು ಹಾಗೂ ಎರಡನೇ ವರ್ಷದಲ್ಲಿ 800-1000 ಕಾಯಿಗಳ ಉತ್ತಮ ಫಸಲನ್ನು ಪಡೆಯಬಹುದು.
ಭಾಗ್ಯ ನುಗ್ಗೆಯ ಕುರಿತು ವಿಡಿಯೋ,ಭಾಗ್ಯ ನುಗ್ಗೆಯ ಮಾಹಿತಿ,ಭಾಗ್ಯ ನುಗ್ಗೆ,ಭಾಗ್ಯ ನುಗ್ಗೆ ಹೇಗೆ ಬೆಳೆಯುವುದು
ನುಗ್ಗೆ ತಪ್ಪಲು ಬೇಸಾಯ drumstick leaves cultivation in kannada
bhagya nugge,bagya tali,kdm 1,kdm 1 drumstick,kdm 1 moringa,nugge besaya,drumstick krushi,nugge krushi,nugge krishi,bb patil,bhagya seeds,bhagya moringa seeds,bhagya nugge beeja,buy bhagya seeds,buy kdm 1 seeds,bagalakote horticulture,nugge beeja,sugge soppu,best moringa veriety,moringa agriculture,moringa krushi in karnataka,negila yogi,negilayogi,raitasnehi,krushidarshana,krishi,agriculture,plant,moringa plants,drumstick plant,drumstick crop
ರೈತ ಮಾಹಿತಿ Raitha Mahithi
ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ
Повторяем попытку...
Доступные форматы для скачивания:
Скачать видео
-
Информация по загрузке: