ಗಜ಼ಲ್ಗಳಗುಚ್ಛ ಸಂಚಿಕೆ 52 Daagh Dehlvi Gazal in Urdu and Kannada
Автор: Dr.(Prof,) Arjun Pangannavar
Загружено: 2025-12-20
Просмотров: 140
Описание: ಪ್ರೇಮದಲ್ಲಿ ವಿರಹ ಹುಟ್ಟಿದಾಗ ಪ್ರೇಮಿಗಳಲ್ಲಿ ಸಂದೇಹಗಳು ಬರುವದು ಸಹಜ ಆದರೆ ಪ್ರೇಮನಿಷ್ಠೆಯು ಅಟಲವಾಗಿರುವದು. ತನ್ನ ಪತ್ರದಲ್ಲಿ ವಂದನೆಗಳು ವೈರಿಗಲ್ಲದೇ ಅವಳು ಯಾರಿಗೆ ಹೇಳಿದ್ದಳು; ನನ್ನನು ಅವಳೇ ವಧಿಸಿ ಯಾರು ಕೊಂದರು ಎಂದು ಕೇಳುತ್ತಿದ್ದಳು. ನಿಷ್ಠೆ ತೋರಿಸುವೆ, ಪಾಲಿಸುವೆ ನಿನ್ನಂತೆ ನಡೆಯುವೆ ಎಂದು ಹೇಳಿದ್ದು ಯಾರು, ನೆನಪಿದೆಯೇ? ಮನಸ್ಸಿನಲ್ಲಿ ನಿರ್ಧಯ ಇರಲಿಲ್ಲ ಆದರೆ ನೋವು ಇತ್ತು, ಅದು ಆಗಲೇ ಯಾರದೋ ಮನೆಯಾಗಿತ್ತು. ನಿನ್ನ ಕೂಟದಲ್ಲಿ ನನ್ನ ಸ್ವಾಗತಿಸುವವರು, ವಿಚಾರಿಸುವವರು ಯಾರು ಇದ್ದಿದ್ದಿಲ್ಲ ಆದರೆ ರಕ್ತಹೀರುವವರು ಇದ್ದರು, ಕೂಡಿದ ಜನರು ನಿನ್ನ ಬಯಸುವವರೇ ಆಗಿದ್ದರು ಆದರೆ ಯಾರು ಉಳಿದರು ನಿನ್ನ ನೆನಪಿನಲ್ಲಿ? ನನ್ನ ಪತ್ರ ಓದದೇ ಹರಿದು ಹಾಕಿದಿ, ಆದರೆ ನಿನ್ನ ಮನ ಕೇಳಿದ ಸಂದೇಶ ಯಾರದು ಇತ್ತು. ವೈರಿ ಅಂಗಳದಲ್ಲಿ ನೀನು ಗಲಾಟೆ ಮಾಡಲಿಲ್ಲ, ಒಲ್ಲದ ಮನದ ಶಾಂತಿಯನ್ನು ಯಾಕೆ ಹೊಂದಿದ್ದಿ. ನನ್ನ ನಿನ್ನ ಭಾಂದವ್ಯದ ಯುಗ ಹೋಯಿತು, ಮನಸ್ಸಿಗೆ ಅದೇ ಚಿಂತೆ, ಅದೇ ನನ್ನ ಮುಂಜಾವು ಸಂಜೆಗಳಾದವು. ಮನಸ್ಸಿಲ್ಲದಿದ್ದರೂ ಅವು ನನ್ನನ್ನು ಕುಡುಕನಾಗಿ ಮಾಡುವದು ಯಾರಿಗೆ ತಿಳಿದಿತ್ತು. ನಿನ್ನನ್ನು ದಣಿಯದೇ ನೋಡುವವರಿಗೆ ಲೆಕ್ಕ ಇಲ್ಲ, ಆದರೆ ಮನದ ಕೆಟ್ಟ ಸ್ಥಿತಿ ಏರಿ ಇಳಿಯುತ್ತಲೇ ಇತ್ತು .ನಿನ್ನನ್ನು ತಿಳಿಯದೇ ಮೋಸಗಾರ ಎನ್ನುವ ಅರೆಬೆಂದ ವಿಚಾರದವರು ಯಾರೂ ಇದ್ಧಿದ್ದಿಲ್ಲ. ಹೊಗಳಿಕೆಗಳು ಮನುಷ್ಯನನ್ನು ಅಟ್ಟಕ್ಕೇರಿಸುವವು, ಅವು ಅಲ್ಪ ತೃಪ್ತಿಗಳು, ಅದು ಶಾಶ್ವತ ಅಲ್ಲ. ಪ್ರೇಮದಲ್ಲಿ ಪ್ರೀತಮ ಮೋಸಗಾರನಾಗದೆ ಪ್ರೀತಮಳ ಸೇವಕನಾಗಿರುವನು.
Повторяем попытку...
Доступные форматы для скачивания:
Скачать видео
-
Информация по загрузке: