BADHUKIDARU NINAGAAGIYE (ಬದುಕಿದರು ನಿನಗಾಗಿಯೇ)
Автор: Sthuti Aaradhane
Загружено: 2025-11-01
Просмотров: 132836
Описание:
ಮನುಷ್ಯರಾಗಿ ಹುಟ್ಟಿದ ನಾವು ದೇವರನ್ನು ಅರಿಯದೇ ಮಾಡಿದ ಪಾಪಗಳಿಂದಲೂ,ವಿಶ್ವಾಸಿಗಳಾಗಿ ಎಷ್ಟೋ ಸಾರಿ ವಿಶ್ವಾಸ ಮಾರ್ಗದಲ್ಲಿ ಬಿದ್ದು ಹೋಗಿ ಮಾಡಿದ ಅವಿಧೇಯತೆ ಯಿಂದ ಬಿಡುಗಡೆಯಾಗಲು,ಪರಲೋಕ ರಾಜ್ಯಕ್ಕಾಗಿ ಸಿದ್ಧವಾಗಲು ಮತ್ತೆ ಎದ್ದು ನಿಂತು ಕರ್ತನ ಮಹಿಮೆ ಗಾಗಿ ಜೀವಿಸಲು ಈ ಹಾಡು ನಮ್ಮನ್ನು ಬಲಪಡಿಸುವುದು, ಸಂಸೋನನು,ಪೇತ್ರನು, ಹಿಜ್ಕಿಯನು ಮುಂತಾದವರು ಮತ್ತೇ ಬಲಗೊಂಡು ಮಹತ್ಕಾರ್ಯಗಳು ಮಾಡಿದರು...ಇದುವರೆಗೂ 50 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಿಸಿ ಈ ಹಾಡಿನಲ್ಲಿ ತಮ್ಮನ್ನು ತಾವು ನೋಡಿ ಸ್ವಾಂತನ ಹೊಂದಿದ್ದಾರೆ.ಈ ಅತ್ಯುತ್ತಮ ವಾದ ಆತ್ಮೀಯ ಗೀತೆ ದೇವರ ಮಹಿಮೆ ಗಾಗಿ ಅರ್ಪಿಸುತ್ತೇನೆ.
ಹಾಡಿನ ಸಾಲುಗಳು
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ನನ್ನ ಬಾಳಿನ ದಿನಗಳು ಎಷ್ಟೆಂದು
ಎಣಿಸಲು ಕಳಿಸಯ್ಯ
ಈ ಲೋಕ ಬಿಡುವ ಸಮಯವ
ನನಗೆ ತೋರಿಸಯ್ಯ
ನಿಜವಾಗಿ ನಿನ್ನಲ್ಲಿದ್ದು ಬಾಳಲು ಆಸೆ ಉಂಟಯ್ಯ
ಲೋಕದ ಮೋಹಗಳಿಗೆ ಬಿದ್ದು ಹೋದೇನು
ಬಿಡಲಾರದ ಬಂಧನಗಳಿಗೆ ಬಂಧೀ ಆದೇನಯ್ಯ
ರಕ್ಷಿಸಿ ಬಿಡಿಸು ನನ್ನ ಪಾಪದ ಸಂಕೋಲೆಯಿಂದ
ಶಿಕ್ಷಿಸಿ ಬಿಡಬೇಡ ಎನ್ನ ನರಕದ ಬೆಂಕಿಗೆ ನೀನು
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ದೇಹವ ಕೊಲ್ಲುವ ಜನರಿಗೆ ಹೆದರಿ ಎಡವಿದೆ ನಾನು
ದೇಹಾತ್ಮಗಳು ಬೆಂಕಿಗೆ ಎಸೆಯಲು ಶಕ್ತನು ನೀನು
ಎಂದು ಅರಿಯದೇ ನಾನು ತಳ್ಳಿ ಹೇಳಿದೆ ನಿನ್ನ
ಹೇಡಿಯಾದ ನನ್ನ ನೀ ಕ್ಷಮಿಸು ಯೇಸಯ್ಯ
ದೇಹವ ಕೊಲ್ಲುವವರಿಗೆ ಹೆದರಿ ತಳ್ಳಿದೆ ನಿನ್ನನ್ನು
ದೇಹಾತ್ಮಗಳು ಬೆಂಕಿಗೆ ಎಸೆಯಲು ಶಕ್ತನು ನೀನೇ
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ಸಾವಿನಸುದ್ದಿ ಕೇಳುವ ಮುನ್ನ ಬುದ್ಧಿ ನೀಡಯ್ಯ ಮನವ,ತನವ,ಸರಿಮಾಡಿಕೊಳ್ಳಲು ಸಿದ್ಧಿ ನೀಡಯ್ಯ
ಮಲಿನದ ಹೃದಯವ ತಿದ್ದಿ ಕೊಳ್ಳಲು ಸಮಯ ನೀಡಯ್ಯ
ಮಾನಸಾಂತರ ಹೊಂದಿ ರೂಪಾಂತರ ವಾಗಲು ನಿನ್ನ ಆಶೀರ್ವಾದ ಬೇಕಯ್ಯ
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಸಿದ್ಧವಾಗಲು ಸಮಯ ನೀಡಯ್ಯ
ಮತ್ತೆ ಎದ್ದು ನಿಲ್ಲಲು ಬಲವ ನೀಡಯ್ಯ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ಬದುಕಿದರು ನಿನಗಾಗಿಯೇ
ಸಾವಾದರು ನಿನ್ನ ರಾಜ್ಯಕ್ಕಾಗಿಯೇ
ನನ್ನ ಬಾಳಿನ ದಿನಗಳು
ಎಣಿಸಲು ಕಳಿಸಯ್ಯ
ಈ ಲೋಕ ಬಿಡುವ ಸಮಯವ
ನನಗೆ ತೋರಿಸಯ್ಯ
Повторяем попытку...
Доступные форматы для скачивания:
Скачать видео
-
Информация по загрузке: