ಒಂದೇ ವರ್ಷ..10 ಸೀರಿಯಲ್ ಹೊಸ ದಾಖಲೆ..!? Srinivas Prabhu | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-09-19
Просмотров: 14584
Описание:
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್ ಮೂಲಕ ಚಿತ್ರರಂಗದ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.
ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಕೆ.ವಿ.ಶ್ರೀನಿವಾಸಪ್ರಭು ದಂಪತಿಗಳು ಭಾಗವಹಿಸಿದ್ದಾರೆ.ಕೆ. ವಿ. ಶ್ರೀನಿವಾಸಪ್ರಭು ಅವರು ಹಾಸನ ಜಿಲ್ಲೆಯ ಕಟ್ಟೇಪುರದಲ್ಲಿ 1955ರ ಅಕ್ಟೋಬರ್ 21ರಂದು ಜನಿಸಿದರು. ತಂದೆ ಕೆ.ಆರ್.ವಿ. ಸುಬ್ರಹ್ಮಣ್ಯ. ತಾಯಿ ರುಕ್ಮಿಣಮ್ಮ. ಕನ್ನಡ ಬಿ. ಎ. ಆನರ್ಸ್ ಪ್ರಥಮ ರ್‍ಯಾಂಕ್ ಮತ್ತು 1974ರಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ಹಾಗೂ ಎರಡು ಚಿನ್ನದ ಪದಕಗಳನ್ನ ಗಳಿಸಿದ್ದಾರೆ. ಇದಲ್ಲದೆ ಶ್ರೀನಿವಾಸಪ್ರಭು 1980ರಲ್ಲಿ ದೆಹಲಿಯ ನಾಟಕ ಶಾಲೆಯಿಂದ ನಾಟಕ ರಂಗದಲ್ಲಿ ಪದವಿ ಗಳಿಸಿದ್ದಾರೆ.
ಶ್ರೀನಿವಾಸ ಪ್ರಭು ಅವರ ಕುಟುಂಬ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಪಾಶ್ಚಾತ್ಯ-ಭಾರತೀಯ ಕಲಾಪ್ರಕಾರಗಳ ಮಧುರ ಸಂಗಮ. ಶ್ರೀನಿವಾಸಪ್ರಭು ಅವರ ಪತ್ನಿ ರಂಜಿನಿ ಪ್ರಭು ಕಾಲೇಜು ಶಿಕ್ಷಕಿ, ಕವಯತ್ರಿ ಮತ್ತು ರಂಗಾಸಕ್ತೆ. ಶ್ರೀನಿವಾಸಪ್ರಭು ಮತ್ತು ರಂಜಿನಿ ದಂಪತಿಗಳಿಬ್ಬರೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಇಬ್ಬರೂ ಶಾಮಲಾ ಜಿ ಭಾವೆಯವರ ಬಳಿ ಸಂಗೀತ ಕಲಿತಿದ್ದಾರೆ. ಮಗಳು ಅನ್ವಿ ಲಂಡನ್ನಿನ ಚೆಲ್ಸಿ ಕಾಲೇಜಿನಲ್ಲಿ ಲಲಿತಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭರತನಾಟ್ಯದಲ್ಲೂ ಪ್ರಾವೀಣ್ಯತೆ ಸಾಧಿಸಿರುವ ಅನ್ವಿ ಇಂಗ್ಲಿಷಿನಲ್ಲಿ ಕವಿತೆ ಬರೆಯುತ್ತಾರೆ. ಮಗ ಅನಿರುದ್ಧ ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತರಾಗಿದ್ದು, ತಾವೇ ಹಾಡು ಬರೆದು ಸಂಯೋಜಿಸಿ ಹಾಡುತ್ತಾರೆ ಮತ್ತು ಗಿಟಾರ್ ವಾದನ ಪ್ರವೀಣರೂ ಆಗಿದ್ದಾರೆ.
ಇಂತಹ ಅಪರೂಪದ ಆದರ್ಶ ದಂಪತಿಗಳ ಸಂದರ್ಶನ NewsO NewsU ಚಾನಲ್ ನ 'Hari ಕಥೆ' Podcast ಷೋ ನಲ್ಲಿ....
#newsonewsu #harikathe #harishnagaraju #SrinivasPrabhu #RanjaniPrabhu #podcast #kannadapodcast #podcaster #inspiration #inspirationalstory #couple #artist #celebritycouple #theatre #theatreartist #kannadafilmindustry #poetry #musicianlife #couples #couplegoal #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines
Повторяем попытку...
Доступные форматы для скачивания:
Скачать видео
-
Информация по загрузке: