ಹಲವು ಮಕ್ಕಳ ತಾಯಿ," ಶ್ರೀ ಅಮೃತೇಶ್ವರಿ ದೇವಸ್ಥಾನ, ಕೋಟ
Автор: Voice of H.M Bhat
Загружено: 2025-06-04
Просмотров: 5159
Описание:
ಕರ್ನಾಟಕ ರಾಜ್ಯದ ,ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ,ಕೋಟ ಎನ್ನುವಲ್ಲಿ ನೆಲೆಯಾಗಿ ನಿಂತ ತಾಯಿಯೇ ಹಲವು ಮಕ್ಕಳ ತಾಯಿ ಅಮೃತೇಶ್ವರಿ. ಅಮೃತೇಶ್ವರಿ ತಾಯಿಗೆ ಹಲವು ಮಕ್ಕಳಾದ ಕಾರಣದಿಂದಾಗಿ ಕ್ಷೇತ್ರಕ್ಕೆ ಹಲವು ಮಕ್ಕಳ ತಾಯಿ ಅಮೃತೇಶ್ವರಿ ಎನ್ನುವುದಾಗಿ ಹೆಸರು ಬಂತು ಎನ್ನುವುದು ಇಲ್ಲಿಯ ಮುಖ್ಯವಾದ ಇತಿಹಾಸವಾಗಿದೆ .ಕ್ಷೇತ್ರದ ಇತಿಹಾಸವು ರಾಮಾಯಣದೊಂದಿಗೆ ತಲುಪು ಹಾಕಿಕೊಳ್ಳುತ್ತದೆ ,ಕರಾಸುರ ಎನ್ನುವ ರಾಕ್ಷಸನ ಮಡದಿಯಾದ ಕುಂಭಮುಖಿಯು ತಾಯಿಯಲ್ಲಿ ಪ್ರಾರ್ಥಿಸುವಾಗ ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು ಎಂದು ಕೇಳುವ ಬದಲು ನೀನು ಮಕ್ಕಳನ್ನು ಪಡೆ ಎನ್ನುವುದಾಗಿ ಕೇಳಿಕೊಂಡ ಕಾರಣದಿಂದಾಗಿ ಅಮೃತೇಶ್ವರಿ ತಾಯಿಯು ಅನೇಕ ಮಕ್ಕಳನ್ನ ಪಡೆದು ಭೂಲೋಕದಲ್ಲಿರುವ ಜನರನ್ನ ಅನುಗ್ರಹಿಸಿದಳು ಎನ್ನುವುದು ಇತಿಹಾಸ .ಮಕ್ಕಳ ಸಂಕೇತವಾಗಿ ಈಶ್ವರ ಲಿಂಗದ ರೂಪಿಯಾದ ಅನೇಕ ಕಲ್ಲುಗಳನ್ನು ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ತುಲಾಭಾರ ಸೇವೆ ,ಯಕ್ಷಗಾನ ಸೇವೆ, ಹೂವಿನ ಪೂಜೆ ಮುಖ್ಯವಾದ ಸೇವೆಗಳಾಗಿದೆ .ಆನಂದ್ ಕುಂದರ್ ಎನ್ನುವ ಭಗವದ್ ಭಕ್ತರು ಈ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಡಳಿತ ಮುಖ್ಯಸ್ಥರಾಗಿ ,ಉದ್ಯಮಿಗಳಾಗಿ ತಾಯಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು ಕ್ಷೇತ್ರ ಅಭಿವೃದ್ಧಿಯಲ್ಲಿ ತಮ್ಮನ ತೊಡಗಿಸಿಕೊಂಡಿರುತ್ತಾರೆ. ಅತಿ ಪುರಾತನವಾದ ಶ್ರೀ ಕ್ಷೇತ್ರಕ್ಕೆ ತಾವೆಲ್ಲ ಆಗಮಿಸಿ ಕೃತಾರ್ಥರಾಗಬೇಕು. ವಾರ್ಷಿಕವಾಗಿ ಗೆಂಡಸೇವೆಗಳಿದ್ದು , ಸಾವಿರಾರು ಭಕ್ತರು ಕ್ಷೇತ್ರದಲ್ಲಿ ಗೆಂಡೆ ತೊಳೆಯುವುದು ವಿಶೇಷವಾದ ಸೇವೆ.
LOCATION: https://maps.app.goo.gl/KY84fNhHTNP5K...
Address:
Shri Amriteshwari Temple , Kota
Udupi district
Karnataka 576101
Mob no: 7899397493
#history #historytemples #karavalipeople #udupi #travel #famoustemples #durgaparameshwari #amritheshwari #kota #kundapuratemples #sanatan #udupitemples #halavumakkalatayi #historicaltemples #historcal #templerun #templevlog #templesofkarnataka #makkalu #children #makkalabhagya #bhagya #devotional #templesofudupi #kundapura #kundapuratemples #kota#voiceofhmbhat #drbro
Повторяем попытку...
Доступные форматы для скачивания:
Скачать видео
-
Информация по загрузке: