Sankranti song | upasana mohan | N. Aparna | Kavya Phalachandra | bhavageethe |
Автор: Upasana mohan
Загружено: 2023-01-13
Просмотров: 46184
Описание:
ಸಂಕ್ರಾಂತಿಯ ಹೊಸ ವರುಷದ ಹಬ್ಬ
ನಾಡಿಗೆ ಸಂಭ್ರಮ ತರಲಿ
ಬಳಲಿದ ಮನಕೆ ಸಿಹಿಯನು ಎರೆದು
ಭರವಸೆಯ ಬೆಳಕಾಗಲಿ
ಸುಗ್ಗಿಯ ಹಿಗ್ಗಿನ ಸ್ವಾಗತಕೆ
ತಳಿರು ತೋರಣ ತೂಗಲಿ
ಬಂಧು ಬಳಗದ ಸ್ನೇಹ ಕೂಟಕೆ
ಹುಗ್ಗಿಯು ಪರಿಮಳ ಬೀರಲಿ
ಎಳ್ಳು ಬೆಲ್ಲವ ಹಂಚಿ ಪಡೆದು
ಸಾಮರಸ್ಯವು ಬೆಳೆಯಲಿ
ಕಬ್ಬಿನ ಸಿಹಿಯಲಿ ಮಕ್ಕಳ ಕನಸು
ನನಸಿನ ಶಿಖರಕೆ ಏರಲಿ
ಕಾಲನ ಕಾಲದ ಬದಲಾವಣೆಗೆ
ಒಗ್ಗುವ ಮನಸನು ನೀಡಲಿ
ಹಬ್ಬದ ಹರುಷದ ಪ್ರೀತಿಯ ಹೊನಲು
ಹೃದಯ ಹೃದಯಗಳ ಬೆಸೆಯಲಿ
ಸಾಹಿತ್ಯ ಮತ್ತು ಸಂಗೀತ: ಉಪಾಸನಾ ಮೋಹನ್
ಗಾಯನ: ಎನ್. ಅಪರ್ಣ, ಕಾವ್ಯ ಫಾಲಚಂದ್ರ
Повторяем попытку...
Доступные форматы для скачивания:
Скачать видео
-
Информация по загрузке: