ಮೆಜೆಸ್ಟಿಕ್ ಹೆಸರು ಹೇಗೆ ಬಂತು ಗೊತ್ತಾ? majestic/mehesti busstand/Bangalore people/BMTC/KSRTC/news
Автор: loki yogi News
Загружено: 2025-12-24
Просмотров: 432
Описание:
ಮೆಜೆಸ್ಟಿಕ್ ಪರಿಸರಕ್ಕೆ ಮೆಜೆಸ್ಟಿಕ್ ಎಂದು ಹೆಸರು ಬರಲು ಸುಮಾರು 1920-25ರಲ್ಲಿ ನಿರ್ಮಾಣಗೊಂಡ ಮೆಜೆಸ್ಟಿಕ್ ಚಿತ್ರಮಂದಿರವೇ ಕಾರಣ. ಹೇಗೆಂದರೆ 1920ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಕ್ಕಾಗಿ ಇದ್ದಂತಹ ಮಂದಿರಗಳು ದೊಡ್ಡಣ್ಣ ಹಾಲ್ ಮತ್ತು ಮೆಜೆಸ್ಟಿಕ್ ಚಿತ್ರಮಂದಿರ. ಆಗ ಬೆಂಗಳೂರಿನಲ್ಲಿ ಕೆಲವೇ ಚಿತ್ರಮಂದಿರಗಳಿದ್ದವು. ದೊಡ್ಡ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಲಾಲ್‌ಭಾಗ್‌ನ ಗಾಜಿನ ಮನೆಯಲ್ಲಿ ನಡೆಯುತ್ತಿತ್ತು. ಆಗ ಮೂಕಿ ಚಿತ್ರಗಳ ಕಾಲ. ಯಾವಾಗಲೋ ಒಂದೊಂದು ಚಿತ್ರಗಳು ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ನಡೆಯುತ್ತಿದ್ದವು. ಬೇರೆ ದಿನಗಳಲ್ಲಿ ಸನ್ಮಾನ ಸಮಾರಂಭಗಳು ಹಾಗೂ ಇತರೆ ಸಾಂಸ್ಕೃತಿಕ ಸಮಾರಂಭಗಳು ಇಲ್ಲಿ ನಡೆಯುತ್ತಿದ್ದವು. ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಬಸವಗುಡಿ, ಚಾಮರಾಜಪೇಟೆ, ಮಲ್ಲೇಶ್ವರಂ ಹಾಗೂ ಇತರ ಕಡೆಗಳಿಂದ ‘ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹೋಗೋಣ ನಡೀರಿ’ ಎಂದು ತಂಡೋಪತಂಡವಾಗಿ ನಡೆದುಕೊಂಡು ಬರುತ್ತಿದ್ದರು. ಕ್ರಮೇಣ ಬಹಳಷ್ಟು ಪ್ರಸಿದ್ಧಿ ಪಡೆದ ಈ ಚಿತ್ರಮಂದಿರದಿಂದ ಇಡೀ ಪ್ರದೇಶವೇ ‘ಮೆಜೆಸ್ಟಿಕ್’ ಎಂದು ಹೆಸರು ಪಡೆಯಿತು.
#mejestic #sangollirayannastatue #railwaystation #ksrtcbus #bmtcbus #karnatakapeople #bangalorepeople #districtnews #gandhinagar #kanishkashorts #viralvideo
Повторяем попытку...
Доступные форматы для скачивания:
Скачать видео
-
Информация по загрузке: